ಇಂದಿರಾಗಾಂಧಿ ವೇಶದಲ್ಲಿ ಲಾರಾ ದತ್ತಾ; ಪತ್ನಿಯನ್ನೇ ತಬ್ಬಿಕೊಳ್ಳಲ್ಲ ಅಂದಿದ್ದೇಕೆ ಪತಿ ಮಹೇಶ್ ಭೂಪತಿ..?

ಇಂದಿರಾಗಾಂಧಿ ವೇಶದಲ್ಲಿ ಲಾರಾ ದತ್ತಾ; ಪತ್ನಿಯನ್ನೇ ತಬ್ಬಿಕೊಳ್ಳಲ್ಲ ಅಂದಿದ್ದೇಕೆ ಪತಿ ಮಹೇಶ್ ಭೂಪತಿ..?

ಬಾಲಿವುಡ್ ನಟ ಅಕ್ಷಯ್ ಕುಮಾರ್ ಅಭಿನಯದ ಭಾರೀ ನಿರೀಕ್ಷೆ ಮೂಡಿಸಿರುವ ಸಿನಿಮಾ ಬೆಲ್​ ಬಾಟಂನಲ್ಲಿ ನಟಿ ಲಾರಾ ದತ್ತ ಮಾಜಿ ಪ್ರಧಾನಿ ಇಂದಿರಾಗಾಂಧಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದ ಟ್ರೈಲರ್ ಬಿಡುಗಡೆಯಾದ ಬೆನ್ನಲ್ಲೇ ಸೋಷಿಯಲ್ ಮೀಡಿಯಾದಲ್ಲಿ ಲಾರಾ ದತ್ತ ಅವರ ಮೇಕಪ್ ಬಗ್ಗೆ ಭಾರ ಮೆಚ್ಚುಗೆ ವ್ಯಕ್ತವಾಗಿದೆ.

ಈ ಮಧ್ಯೆ ಮಾಧ್ಯಮವೊಂದಕ್ಕೆ ಲಾರಾ ದತ್ತ ತಮ್ಮ ಪಾತ್ರದ ಕುರಿತು ಮಾತನಾಡುತ್ತಾ.. ಇಂದಿರಾ ಗಾಂಧಿ ಮೇಕಪ್​ನಲ್ಲಿದ್ದ ನನ್ನನ್ನ ಅಪ್ಪಿಕೊಳ್ಳಲು ತನ್ನ ಪತಿ ಮಹೇಶ್ ಭೂಪತಿ ನಿರಾಕರಿಸಿದರು ಅಂತಾ ಹೇಳಿದ್ದಾರೆ.

ಮಹೇಶ್ ನನ್ನ ಮೇಕಪ್ ಫೋಟೋಗಳನ್ನ ನೋಡಿದ್ದರು.. ಆದರೆ ಎದುರಿಗೆ ನಿಂತು ನೋಡಿರಲಿಲ್ಲ.. ಶೂಟಿಂಗ್​ನ ಮೊದಲ ದಿನ ಮಹೇಶ್ ಊಟದ ಸಮಯಕ್ಕೆ ಬಂದಿದ್ದರು. ನಾನು ಊಟಕ್ಕೆ ಹೊರಟಿದ್ದರಿಂದ ನನ್ನ ಸೀರೆಯ ಮೇಲೆ ಏಫ್ರಾನ್ ಧರಿಸಿದ್ದೆ. ಮೇಕಪ್ ತೆಗೆದು ಮತ್ತೆ ಧರಿಸಲು 3 ಗಂಟೆ ಸಮಯ ತೆಗೆದುಕೊಳ್ತಿತ್ತು.. ಹೀಗಾಗಿ ನಾನು ಮೇಕಪ್​ನಲ್ಲೇ ಇದ್ದೆ. ನನ್ನ ಗಂಡ ನನ್ನ ನೋಡಿ ಗಾಬರಿಯಾದ. ನಾನು ನಿನಗೆ ಹೈ ಹೇಳಲು ನಿನ್ನ ಹಗ್ ಮಾಡಲಾರೆ.. ನನ್ನ ಪತ್ನಿ ಎಲ್ಲಿ..? ನಾನು ನಿನ್ನ ತಬ್ಬಿಕೊಳ್ಳಲ್ಲ ಅಂದುಬಿಟ್ರು. -ಲಾರಾ ದತ್ತ, ಬಾಲಿವುಡ್ ನಟಿ

ಅಲ್ಲದೇ ನಾನು ಹಲವು ಸಿನಿಮಾಗಳಲ್ಲಿ ಹಲವು ಕ್ಯಾರೆಕ್ಟರ್​ಗಳಲ್ಲಿ ಕಾಣಿಸಿಕೊಂಡಿದ್ದೇನೆ. ಆದರೆ ಈ ಸಿನಿಮಾದಲ್ಲಿ ನನ್ನ ಪಾತ್ರಕ್ಕೆ ಸುತ್ತಮುತ್ತಲಿನ ಜನರು ರಿಯಾಕ್ಟ್ ಮಾಡಿದಂತೆ ಹಿಂದೆಂದೂ ಆಗಿಲ್ಲ. ಕನ್ನಡಿಯಲ್ಲಿ ನನ್ನನ್ನ ನಾನೇ ಗುರುತು ಹಿಡಿಯಲಾಗಲಿಲ್ಲ. ನನ್ನ ಸುತ್ತ ಜನರು ಅಚ್ಚರಿಗೊಳಗಾಗಿ ಬಹಳ ವಿನಯವಾಗಿ ನಿಂತಿರುತ್ತಿದ್ದರು. ಇದು ಇಂದಿರಾಗಾಂಧಿಯವರ ಪವರ್.. ಮೊದಲಿಗೆ ನನಗಿದು ಅರ್ಥವಾಗಿರಲಿಲ್ಲ ಎಂದು ಲಾರಾ ದತ್ತಾ ಹೇಳಿದ್ದಾರೆ. ಇನ್ನು ಅಕ್ಷಯ್ ಕುಮಾರ್ ಸಹ ಲಾರಾ ದತ್ತ ಮೇಕಪ್ ಕಂಡು ಅಚ್ಚರಿಗೊಳಗಾಗಿದ್ರಂತೆ.

ಇನ್ನು ಲಾರಾ ದತ್ತ ಅವರ ತಂದೆ ಏರ್​ಫೋರ್ಸ್​ನಲ್ಲಿ ಸೇವೆ ಸಲ್ಲಿಸಿದ್ದು ಇಂದಿರಾಗಾಂಧಿಯವರಿಗೆ ಪರ್ಸನಲ್ ಪೈಲಟ್ ಆಗಿದ್ದರಂತೆ. ಇಂದಿರಾ ಗಾಂಧಿ ಜೊತೆ ಹಲವು ಸಲ ನನ್ನ ತಂದೆ ಮಾತನಾಡಿದ್ದಾರೆ. ನಾನು ತಂದೆಯ ಮೂಲಕ ಇಂದಿರಾ ಗಾಂಧಿ ಬಗ್ಗೆ ಸಾಕಷ್ಟು ತಿಳಿದುಕೊಂಡಿದ್ದೆ. ಹಲವು ಚುನಾವಣೆಗಳಿಗೆ ಅವರನ್ನ ನನ್ನ ತಂದೆ ಕರೆದೊಯ್ದಿದ್ದಾರೆ ಎಂದು ಲಾರಾ ದತ್ತ ಇದೇ ವೇಳೆ ತನ್ನ ತಂದೆಯ ಇಂದಿರಾ ಗಾಂಧಿ ಜೊತೆಗನ ಒಡನಾಟದ ಬಗ್ಗೆ ಹೇಳಿಕೊಂಡಿದ್ದಾರೆ.

Source: newsfirstlive.com Source link