ವ್ಯಾಕ್ಸಿನೇಷನ್​ಗೆ ಮತ್ತಷ್ಟು ವೇಗ; ಸದ್ಯದಲ್ಲೇ ಸರ್ಕಾರದ ಕೈ ಸೇರಲಿದೆ 45 ಕೋಟಿ ಡೋಸ್​ ಲಸಿಕೆ

ವ್ಯಾಕ್ಸಿನೇಷನ್​ಗೆ ಮತ್ತಷ್ಟು ವೇಗ; ಸದ್ಯದಲ್ಲೇ ಸರ್ಕಾರದ ಕೈ ಸೇರಲಿದೆ 45 ಕೋಟಿ ಡೋಸ್​ ಲಸಿಕೆ

ನವದೆಹಲಿ: ದೇಶದಲ್ಲಿ ದೊಡ್ಡ ಮಟ್ಟದಲ್ಲಿ ನಡೆಯುತ್ತಿರುವ ಕೊರೊನಾ ಸೋಂಕಿನ ವ್ಯಾಕ್ಸಿನೇಷನ್​ಗೆ ಮತ್ತಷ್ಟು ವೇಗ ತುಂಬಲ ಸದ್ಯದಲ್ಲೇ 50 ಕೋಟಿ ಡೋಸ್​​ನಷ್ಟು ವ್ಯಾಕ್ಸಿನ್ ಆಗಸ್ಟ್ ಮತ್ತು ಸೆಪ್ಟೆಂಬರ್​ ತಿಂಗಳಿನಲ್ಲಿ ಕೇಂದ್ರ ಸರ್ಕಾರದ ಕೈ ಸೇರಲಿದೆ.

ಆಗಸ್ಟ್​ ತಿಂಗಳಿನಲ್ಲಿ 20 ಕೋಟಿ ಡೋಸ್ ಹಾಗೂ ಸೆಪ್ಟೆಂಬರ್ ತಿಂಗಳಿನಲ್ಲಿ 25 ಕೋಟಿ ಡೋಸ್​ನಷ್ಟು ವ್ಯಾಕ್ಸಿನ್ ಸರ್ಕಾರದ ಕೈ ಸೇರಲಿದೆ ಎಂದು ಸರ್ಕಾರದ ಮೂಲಗಳು ಹೇಳಿವೆ. ಬಯೋಲೊಜಿಕಲ್-ಇ, ಜೈಡಲ್ ಕ್ಯಾಡಿಲಾ ಮತ್ತು ಜೆನ್ನೊವಾ ಕಂಪನಿಗಳ ವ್ಯಾಕ್ಸಿನ್​ಗಳೂ ಸಹ ಸರ್ಕಾರದ ಕೈ ಸೇರೋ ಸಾಧ್ಯತೆ ಇದೆ ಎನ್ನಲಾಗಿದೆ.

ಇನ್ನು ಸೆಪ್ಟಂಬರ್ ತಿಂಗಳಿನಲ್ಲಿ ಸರ್ಕಾರ ದಿನವೊಂದಕ್ಕೆ ಒಂದು ಕೋಟಿ ಡೋಸ್​ನಂತೆ ವ್ಯಾಕ್ಸಿನೇಷನ್ ನಡೆಸುವ ಗುರಿಯಿಟ್ಟುಕೊಂಡಿದೆಯಂತೆ. ಅಲ್ಲದೇ ಡಿಸೆಂಬರ್ ಅಂತ್ಯದ ವೇಳೆಗೆ 80 ಪರ್ಸೆಂಟ್​ನಷ್ಟು ವಯಸ್ಕರಿಗೆ ಮೊದಲ ಮತ್ತು ಎರಡನೇ ಡೋಸ್ ಲಸಿಕೆ ನೀಡುವ ಗುರಿಯಿಟ್ಟುಕೊಂಡಿರುವುದಾಗಿ ಸರ್ಕಾರದ ಮೂಲಗಳು ತಿಳಿಸಿವೆ.

Source: newsfirstlive.com Source link