78 ರ ವಯಸ್ಸಿನಲ್ಲೂ ಅದ್ಭುತ ಡ್ಯಾನ್ಸ್; ಕೊನೆಗೂ ಬಾಲ್ಯದ ಕನಸು ನನಸು ಮಾಡಿಕೊಂಡ ಅಜ್ಜಿ

78 ರ ವಯಸ್ಸಿನಲ್ಲೂ ಅದ್ಭುತ ಡ್ಯಾನ್ಸ್; ಕೊನೆಗೂ ಬಾಲ್ಯದ ಕನಸು ನನಸು ಮಾಡಿಕೊಂಡ ಅಜ್ಜಿ

ಸೋಷಿಯಲ್ ಮೀಡಿಯಾದಲ್ಲಿ ದಿನಕ್ಕೊಂದು ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತೆ. ಅದ್ರಲ್ಲೂ, ಕೆಲವೊಂದು ವಿಡಿಯೋಗಳನ್ನು ನೋಡಿದಾಗ ನಾವು ನಗುತ್ತೇವೆ, ಇನ್ನು ಕೆಲವನ್ನು ಕಂಡಾಗ ಎಮೋಷನಲ್ ಆಗುತ್ತೇವೆ. ಇನ್ನ, ಅದೇ ಸೋಷಿಯಲ್​ ಮೀಡಿಯಾದಲ್ಲಿ ವಿಡಿಯೋಗಳನ್ನ ನೋಡಿ ಎಷ್ಟೋ ಮಂದಿಗೆ ಜನ ಸಹಾಯ ಮಾಡಿರೋದು ಇದೆ. ಇದೀಗ, 20 ವರ್ಷದ ಯುವತಿಯರೂ ನಾಚುವಂತೆ 78 ವರ್ಷದ ಅಜ್ಜಿಯೊಬ್ಬರ ಡ್ಯಾನ್ಸು ಫುಲ್​ ವೈರಲ್​ ಆಗ್ತಾಯಿದೆ.

60ಕ್ಕೆ ಅರಳು ಮರಳು ಅಂತ ಎಷ್ಟೋ ಜನ, ದೇವ್ರ ಮೊರೆ ಹೋಗ್ತಾರೆ..ಅಂಥದ್ರಲ್ಲಿ, ಈ ಅಜ್ಜಿ ಗುಡ್ಡದ ಮೇಲೆ ನಿಂತು ಒಳ್ಳೊಳ್ಳೆ ಹಾಡುಗಳಿಗೆ ಮೈಮರೆತು ಡ್ಯಾನ್ಸ್ ಮಾಡಿದ್ದಾರೆ. ಇವರ ವಿಡಿಯೋಗಳಿಗೆ, ಸಾವಿರಾರು ಜನ ಅಭಿಮಾನಿಗಳಿದ್ದಾರೆ.

78 ವರ್ಷದ, ನೇಪಾಳದ ಕೃಷ್ಣಾಕುಮಾರಿ ತಿವಾರಿ ಎಂಬ ಅಜ್ಜಿಯ ಡ್ಯಾನ್ಸ್ ನೋಡಿದವರು ಸಾಕಷ್ಟು ಮಂದಿ ಆಕೆಗೆ ಫಿದಾ ಆಗಿದ್ದಾರೆ. ಬಾಲ್ಯದಿಂದಲೂ ಡ್ಯಾನ್ಸ್ ಎಂದರೆ ಈ ಅಜ್ಜಿಗೆ ತುಂಬಾ ಇಷ್ಟವಂತೆ. ಆದ್ರೆ, ಮನೆಯಲ್ಲಿದ್ದ ಮಡಿವಂತಿಕೆಗೆ ಹೆದರಿ ಆಕೆ ಎಲ್ಲೂ ಹೊರಗೆ ಡ್ಯಾನ್ಸ್ ಮಾಡುತ್ತಿರಲಿಲ್ಲವಂತೆ. ಈಗ ಮೊಮ್ಮಕ್ಕಳ ಒತ್ತಾಯಕ್ಕೆ ಆಕೆ ಕ್ಯಾಮೆರಾ ಮುಂದೆ ಡ್ಯಾನ್ಸ್ ಮಾಡ್ತಿದ್ದಾರೆ. ಅಷ್ಟೇ ಅಲ್ಲ ಆ ಅಜ್ಜಿಯ ಜೊತೆಗೆ ಆಕೆಯ ಮೊಮ್ಮಗನೂ ಡ್ಯಾನ್ಸ್ ಮಾಡಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಹಳ್ಳಿ ಸ್ಟೈಲ್​ನಲ್ಲಿ ಸೀರೆಯುಟ್ಟು, ಮೊಮ್ಮಗನ ಜೊತೆ ಸೊಂಟ ಬಳುಕಿಸುತ್ತಾ ಡ್ಯಾನ್ಸ್ ಮಾಡಿರುವ ಅಜ್ಜಿಯ ಉತ್ಸಾಹಕ್ಕೆ ಈ ವಿಡಿಯೋ ನೋಡಿದವರು ಅಬ್ಬಾ! ಅಂತ ಅಚ್ಚರಿ ಪಟ್ಟರೂ ತಪ್ಪೇನಿಲ್ಲ.

Source: newsfirstlive.com Source link