‘200 ಕ್ಕೂ ಹೆಚ್ಚು ಬಾರಿ ಗುಣಮಟ್ಟದ ಪರೀಕ್ಷೆ ನಡೆಸಲಾಗ್ತಿದೆ’; ಕೊವ್ಯಾಕ್ಸಿನ್ ಕ್ವಾಲಿಟಿ ಬಗ್ಗೆ ಸಂಸ್ಥೆಯ ಸ್ಪಷ್ಟನೆ

‘200 ಕ್ಕೂ ಹೆಚ್ಚು ಬಾರಿ ಗುಣಮಟ್ಟದ ಪರೀಕ್ಷೆ ನಡೆಸಲಾಗ್ತಿದೆ’; ಕೊವ್ಯಾಕ್ಸಿನ್ ಕ್ವಾಲಿಟಿ ಬಗ್ಗೆ ಸಂಸ್ಥೆಯ ಸ್ಪಷ್ಟನೆ

ಹೈದರಾಬಾದ್: ಭಾರತ್ ಬಯೋಟೆಕ್​ನ ಕೋವಿಡ್ ವ್ಯಾಕ್ಸಿನ್ ಕೊವ್ಯಾಕ್ಸಿನ್ ಉತ್ಪಾದನೆಯಲ್ಲಿ ವಿಳಂಬವಾಗುತ್ತಿದೆ ಎಂಬ ಚರ್ಚೆಗೆ ಸ್ಪಷ್ಟನೆ ನೀಡಿರುವ ಭಾರತ್ ಬಯೋಟೆಕ್ ಸಂಸ್ಥೆ.. ಕೊವ್ಯಾಕ್ಸಿನ್​ ಲಸಿಕೆಯನ್ನು 200 ಕ್ಕೂ ಹೆಚ್ಚು ಬಾರಿ ಗುಣಮಟ್ಟದ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ ಎಂದು ಹೇಳಿದೆ. ಈ ಕುರಿತು ಸಂಸ್ಥೆ ಪ್ರಕಟಣೆ ಹೊರಡಿಸಿದೆ.

ಅಲ್ಲದೇ ಕರ್ನಾಟಕದ ಮಾಲೂರು, ಹಾಗೂ ಗುಜರಾತ್​ನ ಅಂಕ್ಲೇಶ್ವರ್​ನಲ್ಲೂ ಸಹ ವ್ಯಾಕ್ಸಿನ್ ತಯಾರಿಕೆಯ ಕೆಲಸ ಪ್ರಾರಂಭವಾಗುತ್ತಿದೆ ಎಂದು ಹೇಳಿದೆ. ಇಲ್ಲಿ ತಯಾರಿಸಲಾದ ವ್ಯಾಕ್ಸಿನ್ ಸೆಪ್ಟೆಂಬರ್​ ತಿಂಗಳಿಗೆ ಲಭ್ಯವಾಗಲಿದೆ. ವ್ಯಾಕ್ಸಿನ್ ತಯಾರಿಸಲು ಕಂಪನಿ 120 ದಿನಗಳ ಟೈಮ್​ಲೈನ್​ನ್ನು ಹೊಂದಿದೆ ಎಂದು ಹೇಳಿದೆ.

ಮುಂದುವರೆದು ಕೊವ್ಯಾಕ್ಸಿನ್ ಲಸಿಕೆ ಮಾತ್ರವೇ ಡೆಲ್ಟಾ ವೇರಿಯಂಟ್ ವೈರಸ್ ವಿರುದ್ಧ ಮೂರನೇ ಹಂತದ ಮಾನವ ವೈದ್ಯಕೀಯ ಪರೀಕ್ಷೆಯಲ್ಲಿ ಪರಿಣಾಮ ತೋರಿಸಿದೆ ಎಂದು ಸಂಸ್ಥೆ ಹೇಳಿಕೊಂಡಿದೆ.

Source: newsfirstlive.com Source link