ಬಾರ್ ತೆರೆಯೋ ವಿಚಾರಕ್ಕೆ ಗಂಡಸರು-ಹೆಂಗಸರ ನಡುವೆ ಜಟಾಪಟಿ; ಅಬಕಾರಿ ಕಚೇರಿ ಎದುರು ರಾದ್ಧಾಂತ

ಬಾರ್ ತೆರೆಯೋ ವಿಚಾರಕ್ಕೆ ಗಂಡಸರು-ಹೆಂಗಸರ ನಡುವೆ ಜಟಾಪಟಿ; ಅಬಕಾರಿ ಕಚೇರಿ ಎದುರು ರಾದ್ಧಾಂತ

ಚಿಕ್ಕಮಗಳೂರು: ನಮ್ಮನೆಯವ್ರು ಕುಡಿದು ಬಂದು ಹಿಗ್ಗಾ ಮುಗ್ಗಾ ಹೊಡಿತಾರೆ ಅಂತ ಗ್ರಾಮದ ಹೆಂಗಸರಲ್ಲ ಇಂದು ಬಾರ್​ ಬೇಡ ಬೇಡ ಅಂತ ಪ್ರತಿಭಟನೆ ನಡೆಸಿದ ಘಟನೆ ಜಿಲ್ಲೆಯಲ್ಲಿ ನಡೆಯಿತು.

blank

ಕೆಲದಿನದ ಹಿಂದೆ ಕಡೂರು ತಾಲೂಕಿನ ಅಂಚೆ ಚೊಮ್ಮನಹಳ್ಳಿಯಲ್ಲಿ ಬಾರ್ ಓಪನ್ ಆಗಿತ್ತು. ಅಂದಿನಿಂದ ಆ ಗ್ರಾಮದಲ್ಲಿ ಪರವಿರೋಧವೇ ಹೆಚ್ಚಾಗಿ ನಡೀತಿತ್ತು. ಈಗ ಅವ್ರೆಲ್ಲರೂ ಶಿಫ್ಟ್ ಅಗಿದ್ದು ಕಾಫಿ ನಾಡು ಚಿಕ್ಕಮಗಳೂರು ನಗರದಲ್ಲಿರೋ ಅಬಕಾರಿ ಅಯುಕ್ತರ ಕಚೇರಿ ಮುಂದೆ. ಏಕಕಾಲದಲ್ಲಿ ಪ್ರತಿಭಟನೆ ನಡೆಸಿ ಬಾರ್ ತೆಗೆದಿರೋದ್ರಿಂದ ನಮ್ಮ ಮನೆಯವ್ರು ಕುಡಿದು ಬಂದ ಹಿಗ್ಗಾಮುಗ್ಗ ಹೊಡೆಯುತ್ತಾರೆ ಅಂತಾ ಮಹಿಳೆಯರು ಪುರುಷರ ವಿರುದ್ಧ ಆರೋಪಿಸಿದ್ರು. ಇತ್ತ ಗಂಡಸರು, ಬಾರ್ ಇರ್ಲಿ ಅಂತಾ ಪಟ್ಟು ಹಿಡಿದ್ರು. ಕಾರಣ, ಕೂಲಿ ಮಾಡೋರೇ ಹೆಚ್ಚು ಇರೋದ್ರಿಂದ, ಜನ ಕೆಲ್ಸ ಮುಗಿಸಿಕೊಂಡು ಬಂದೋರು ಎಣ್ಣೆ ಹೊಡೆದ್ರೆ ಮತ್ತೆ ಬೆಳಗ್ಗೆದ್ದು ಕೆಲ್ಸಕ್ಕೆ ಹೋಗ್ತಾರೆ. ಇಲ್ಲಂದ್ರೆ ಕೂಲಿಗೂ ಹೋಗಲ್ಲ ಅಂತ ಹೇಳಿದ್ರು.

blank

ಇತ್ತ, ಇವ್ರ ಮನವಿಯನ್ನ ಪಡೆದಿರೋ ಅಧಿಕಾರಿಗಳಂತೂ ಯಾವುದಕ್ಕೆ ಎಸ್ ಅನ್ನೋಣ. ಯಾವುದಕ್ಕೆ ಬೇಡ ಅನ್ನೋದು ಅಂತಾನೇ ಗೊತ್ತಾಗದೇ ಕಚೇರಿಯೊಳಗೆ ಕೈ ಕಟ್​ ಬಾಯಿ ಮುಚ್​ ಅನ್ನೋ ತರ ಕುಳಿತ್ಬಿಟ್ರು.

Source: newsfirstlive.com Source link