100 ವರ್ಷದ ಈ ವೃದ್ಧೆಗೆ ಇನ್ನೂ 20ರ ಹುಮ್ಮಸ್ಸು.. ವೇಯ್ಟ್ ಲಿಫ್ಟಿಂಗ್ ಮಾಡಿ ಹೊಸ ದಾಖಲೆ

100 ವರ್ಷದ ಈ ವೃದ್ಧೆಗೆ ಇನ್ನೂ 20ರ ಹುಮ್ಮಸ್ಸು.. ವೇಯ್ಟ್ ಲಿಫ್ಟಿಂಗ್ ಮಾಡಿ ಹೊಸ ದಾಖಲೆ

ಸಾಧನೆಗೆ ವಯಸ್ಸು ಅನ್ನೋದು ಯಾವತ್ತೂ ಅಡ್ಡ ಬರಲ್ಲ.. ಅವ್ರಿಗೆ ಎಷ್ಟೇ ವಯಸ್ಸಾಗಲಿ, ಮಾಡ್ಬೇಕಂದ್ರೆ ಅದನ್ನ ಮಾಡಿ ತೀರಲೇಬೇಕು ಅನ್ನೋ ಹಠಕ್ಕೆ ಬಿದ್ದರೆ, ಮಾಡಿ ಮುಗ್ಸೋದೊಂದೆ ಗುರಿ. ಸಾಧಿಸುವ ಛಲ, ಆತ್ಮವಿಶ್ವಾಸವಿದ್ದರೆ ಯಾವ ವಯಸ್ಸಿನಲ್ಲೂ ಯಾವ ಸಾಧನೆಯನ್ನೂ ಮಾಡಬಹುದು. ಇದಕ್ಕೆ ಬೇಕಾದಷ್ಟು ಸಾಕ್ಷಿಗಳಿವೆ. ಇದೀಗ ಇದೇ ಮಾತನ್ನು ಸಾಬೀತು ಮಾಡಿದ್ದಾರೆ 100 ವರ್ಷದ ಪವರ್​ಲಿಫ್ಟರ್​.

blank

ಇನ್ನೆರಡು ದಿನಗಳಲ್ಲಿ ಅಮೆರಿಕಾದ ಫ್ಲೋರಿಡಾದ, ಎಡಿತ್ ಮುರ್ವೇ-ಟ್ರೈನಾ 100ನೇ ವರ್ಷಕ್ಕೆ ಕಾಲಿಡ್ತಿದ್ದಾರೆ. ಇದೀಗ ಈ ಪವರ್‌ಲಿಫ್ಟರ್​ ಸಾಮಾಜಿಕ ಜಾಲತಾಣದಲ್ಲಿ ಫುಲ್​ ವೈರಲ್​ ಆಗ್ತಾಯಿದ್ದಾರೆ. ಸದಾ ಉತ್ಸಾಹದ ಚಿಲುಮೆಯಂತಿರುವ ವೃದ್ಧೆ ಇನ್ನೆರಡು ದಿನಗಳಲ್ಲಿ ತಮ್ಮ 100ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಸುದೀರ್ಘ ಸಾರ್ಥಕ ಜೀವನದ ಮೂಲಕ ಖುಷಿಯಲ್ಲಿರುವ ಈ ಶತಾಯುಷಿ ಈಗ ತಮ್ಮ ಪವರ್‌ಲಿಫ್ಟಿಂಗ್ ಶಕ್ತಿಯ ಮೂಲಕವೂ ಎಲ್ಲರ ಗಮನ ಸೆಳೆದಿದ್ದಾರೆ. ಅಲ್ಲದೇ, ಆ ಒಂದು ವಿಡಿಯೋದಿಂದ ಈಗ, ಗಿನ್ನಿಸ್ ವರ್ಲ್ಡ್​ ರೆಕಾರ್ಡ್ಸ್ ಪುಟದಲ್ಲೂ ಸ್ಥಾನ ಪಡೆಯಲಿದೆ.

blank

ಅಮೆರಿಕಾದ ಫ್ಲೋರಿಡಾದ ಎಡಿತ್ ಮುರ್ವೇ-ಟ್ರೈನಾ ಈ ಸಾಧಕಿ.`ಅತ್ಯಂತ ಹಿರಿಯ ಸ್ಪರ್ಧಾತ್ಮಕ ಪವರ್ ಲಿಫ್ಟರ್ ಎಡಿತ್ ಮುರ್ವೇ-ಟ್ರೈನಾ ಈ ವಾರ ತನ್ನ 100ನೇ ಹುಟ್ಟುಹಬ್ಬವನ್ನು ಆಚರಿಸುತ್ತಾರೆ’ ಎಂದು ಕ್ಯಾಪ್ಶನ್‌ನಲ್ಲಿ ಉಲ್ಲೇಖಿಸಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಇವರ ಅವರ್ಣನೀಯ ಸಾಧನೆಯಿಂದಾಗಿ ಇವರ ಹೆಸರು ಮುಂಬರುವ ಜಿಡಬ್ಲ್ಯೂಆರ್ ಪುಸ್ತಕದಲ್ಲಿ ಕಾಣಿಸಿಕೊಳ್ಳಲಿದೆ ಎಂದೂ ಇಲ್ಲಿ ಉಲ್ಲೇಖಿಸಲಾಗಿದೆ.

 

Source: newsfirstlive.com Source link