ಸಿದ್ದಗಂಗಾ ಮಠಕ್ಕೆ ಬೊಮ್ಮಾಯಿ ಭೇಟಿ; ಬೆಂಗಳೂರಿಗೆ ವಾಪಸ್ ಆಗುತ್ತಲೇ ಖಾತೆ ಹಂಚಿಕೆ ಎಂದ ಸಿಎಂ

ಸಿದ್ದಗಂಗಾ ಮಠಕ್ಕೆ ಬೊಮ್ಮಾಯಿ ಭೇಟಿ; ಬೆಂಗಳೂರಿಗೆ ವಾಪಸ್ ಆಗುತ್ತಲೇ ಖಾತೆ ಹಂಚಿಕೆ ಎಂದ ಸಿಎಂ

ತುಮಕೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಸಿದ್ದಲಿಂಗ ಸ್ವಾಮೀಜಿಗಳ ಜೊತೆಗೆ ಮಾತುಕತೆ ನಡೆಸಿದರು. ಅಲ್ಲದೇ ಮಠದಲ್ಲೇ ರಾತ್ರಿ ಭೋಜನ ಸವಿದರು.

ನಂತರ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಬೊಮ್ಮಾಯಿಯವರು.. ಸಿದ್ದಗಂಗಾ ಮಠಕ್ಕೆ ಬಂದು ಶ್ರೀಗಳ ಆಶೀರ್ವಾದ ಪಡೆದಿದ್ದೇನೆ.. ಬೆಂಗಳೂರು ತಲುಪಿದ ಮೇಲೆ ಖಾತೆ ಹಂಚಿಕೆ ಮಾಡಲಾಗುವುದು ಎಂದರು.

ಡಾ.ಶ್ರೀ ಶಿವಕುಮಾರ ಸ್ವಾಮೀಜಿಯವರ ಗದ್ದುಗೆ ದರ್ಶನ ಪಡೆದು ಆಶೀರ್ವಾದ ಪಡೆದೆ. ಅದೇರೀತಿ ಶ್ರೀ ಸಿದ್ದಲಿಂಗ ಶ್ರೀಗಳ ಆಶೀರ್ವಾದ ಪಡೆದೆ. ಶ್ರೀ ಸಿದ್ಧಗಂಗಾ ಮಠ ದಾನಕ್ಕೆ , ಅನ್ನದಾನಕ್ಕೆ ಪ್ರಸಿದ್ಧವಾಗಿದೆ. ಮಠಕ್ಕೆ ಬಂದಾಗೆಲ್ಲಾ ಪ್ರೇರಣೆ ಪಡೆದುಕೊಂಡಿದ್ದೇನೆ. ನಾನು ಮುಖ್ಯಮಂತ್ರಿ ಆದಮೇಲೆ ಪ್ರಥಮಬಾರಿಗೆ ಮಠಕ್ಕೆ ಬರುತ್ತಿದ್ದೇನೆ. ನಾಡಿನ ಸೇವೆ ಮಾಡಲು ಶಿವಕುಮಾರ ಸ್ವಾಮೀಜಿಯವರ ಆಶೀರ್ವಾದ ಪಡೆದುಕೊಂಡಿದ್ದೇನೆ. ಈಗ ನೇರವಾಗಿ ಬೆಂಗಳೂರಿಗೆ ಹಿಂತಿರುಗಿ ಬಳಿಕ ಖಾತೆ ಹಂಚಿಕೆ ಮಾಡಲಾಗುವುದು ಎಂದರು.

Source: newsfirstlive.com Source link