ಕಾಮಿಡಿಯನ್‍ಗಿಂತ ನೀನು ವಿಲನ್ ಆಗು ಮಂಜಾ- ಪ್ರಶಾಂತ್ ಸಂಬರಗಿ ಸಲಹೆ

ಬಿಗ್ ಬಾಸ್ ಸೀಸನ್ 8ರ ಗ್ರ್ಯಾಂಡ್ ಫಿನಾಲೆಗೆ ಕ್ಷಣಗಣನೆ ಆರಂಭವಾಗಿದ್ದು, ಸ್ಪರ್ಧಿಗಳು ಮಾತ್ರ ಮನೆಯಲ್ಲಿ ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಫುಲ್ ಬಿಂದಾಸ್ ಆಗಿ ಮಾತನಾಡಿಕೊಂಡು ಕಾಲ ಕಳೆಯುತ್ತಿದ್ದಾರೆ. ಹೀಗೆ ಮಾತನಾಡುವಾಗ ಮಂಜು ಪಾವಗಡ ಅವರ ಸಿನಿಮಾ ಕರಿಯರ್ ಬಗ್ಗೆ ಪ್ರಶಾಂತ್ ಸಂಬರಗಿ ಸಲಹೆಯೊಂದನ್ನು ನೀಡಿದ್ದಾರೆ.

ಗಾರ್ಡನ್ ಏರಿಯಾದಲ್ಲಿ ಮಾತನಾಡುತ್ತಿರುವಾಗ ಪ್ರಶಾಂತ್ ಸಂಬರಗಿ ಮಂಜು ಪಾವಗಡಗೆ ಈ ಸಲಹೆ ನೀಡಿದ್ದು, ನೀನು ಕಾಮಿಡಿಯನ್ ಆಗುವ ಬದಲು ವಿಲನ್ ಆಗು ಮಂಜಾ ಎಂದು ಹೇಳಿದ್ದಾರೆ. ಮಂಜಾ ನೀನು ನೆಗೆಟಿವ್ ಶೇಡ್ ಮಾಡಬಹುದು, ಕಾಮಿಡಿಯನ್‍ಗಿಂತ ನಿನ್ನ ಲುಕ್ ನೆಗೆಟಿವ್ ಪಾತ್ರಕ್ಕೆ ಹೊಂದಿಕೆಯಾಗುತ್ತದೆ ಎಂದು ಪ್ರಶಾಂತ್ ಹೇಳಿದ್ದಾರೆ. ಆಗ ಮಂಜು ಮಧ್ಯೆ ಪ್ರವೇಶಿಸಿ ನನಗೆ ತುಂಬಾ ಇಷ್ಟ ಸರ್ ಎಂದಿದ್ದಾರೆ.

ವಿಶೇಷವಾಗಿ ಗ್ರಾಮೀಣ ಸೊಗಡಿನ ಕಥೆ ಹಾಗೂ ಟೌನ್ ಬ್ಯಾಕ್‍ಡ್ರಾಪ್ ಸ್ಟೋರಿಗಳಲ್ಲಿ ನೀನು ವಿಲನ್ ಪಾತ್ರ ಮಾಡಬಹುದು ಎಂದು ಪ್ರಶಾಂತ್ ಹೇಳಿದ್ದಾರೆ. ವಾಸ್ತವವೆಂದರೆ ನನಗೆ ನೆಗೆಟಿವ್ ಶೇಡ್ ಪಾತ್ರಗಳನ್ನು ಮಾಡಲು ತುಂಬಾ ಆಸೆ, ಅಂತಹದ್ದೇ ಪಾತ್ರಗಳನ್ನು ಮಾಡಬೇಕು ಸರ್, ಅದು ನನ್ನ ದೊಡ್ಡ ಕನಸು. ನನಗೆ ನೆಗೆಟಿವ್ ಕ್ಯಾರೆಕ್ಟರ್ ತುಂಬಾ ಇಷ್ಟ ಸರ್, ನಾನು ಇಂಡಸ್ಟ್ರಿಗೆ ಬಂದಿದ್ದೇ ಅದಕ್ಕಾಗಿ. ಬಂದ ತಕ್ಷಣ ಆಸೆ ಹುಟ್ಟಿದ್ದೇ ಅದು, ಹಾಗೇ ಆಗಬೇಕು ಎಂದುಕೊಂಡಿದ್ದೇನೆ ಎಂದು ಮಂಜು ಪ್ರತಿಕ್ರಿಯಿಸಿದ್ದಾರೆ.

ಸೆಟ್ ಆಗುತ್ತೆ ನೆಗೆಟಿವ್ ಶೇಡ್ ಟ್ರೈ ಮಾಡು ಎಂದು ಮತ್ತೆ ಪ್ರಶಾಂತ್ ಸಂಬರಗಿ ಹೇಳಿದ್ದಾರೆ. ಹೌದು ಸರ್ ಮಾಡಬೇಕು ಎಂದು ಮಂಜು ಹೇಳಿದ್ದಾರೆ. ಈ ಮೂಲಕ ಮಂಜು ಪಾವಗಡ ತಮ್ಮ ಸಿನಿಮಾ ಕರಿಯರ್ ಬಗ್ಗೆ ಮನಬಿಚ್ಚಿ ಹೇಳಿದ್ದಾರೆ.

Source: publictv.in Source link