ರಾತ್ರಿ 8 ಗಂಟೆವರೆಗೆ ಮಾತ್ರ ಮೆಟ್ರೋ ಸಂಚಾರ -ಟಾಪ್ 10 ಸುದ್ದಿಗಳ ಕ್ವಿಕ್​ರೌಂಡಪ್​

ರಾತ್ರಿ 8 ಗಂಟೆವರೆಗೆ ಮಾತ್ರ ಮೆಟ್ರೋ ಸಂಚಾರ -ಟಾಪ್ 10 ಸುದ್ದಿಗಳ ಕ್ವಿಕ್​ರೌಂಡಪ್​

ರಾತ್ರಿ 8 ಗಂಟೆವರೆಗೆ ಮಾತ್ರ ಮೆಟ್ರೋ ಸಂಚಾರ
ಕೊರೊನಾ ಹೆಚ್ಚಾಗುತ್ತಿರುವ ಹಿನ್ನೆಲೆ ಸರ್ಕಾರ ಆಗಸ್ಟ್ 16ರವರೆಗೆ ರಾಜ್ಯಾದ್ಯಂತ ನೈಟ್ ಕರ್ಫ್ಯೂ ಜಾರಿಗೊಳಿಸಿ ಆದೇಶ ಹೊರಡಿಸಿದೆ. ಈ ಹಿನ್ನೆಲೆ ಇಂದಿನಿಂದ ಪ್ರತಿದಿನ ರಾತ್ರಿ 8 ಗಂಟೆವರೆಗೆ ಮಾತ್ರ ಮೆಟ್ರೋ ಸಂಚಾರಕ್ಕೆ ಅವಕಾಶ ನೀಡಲಾಗಿದೆ ಅಂತಾ ನಮ್ಮ ಮೆಟ್ರೋದ ಸಾರ್ವಜನಿಕ ಸಂಪರ್ಕ ಅಧಿಕಾರಿಗಳು ತಿಳಿಸಿದ್ದಾರೆ.

ಶಶಿಕುಮಾರ್ ಕೊಲೆಯತ್ನ, 15 ಆರೋಪಿಗಳ ಬಂಧನ
ಕ್ಯಾಮ್ಸ್​​ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ಕೊಲೆಯತ್ನ ಪ್ರಕರಣದಲ್ಲಿ ಜಾಲಹಳ್ಳಿ ಪೊಲೀಸರು 15 ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಮುಖ ಆರೋಪಿ ರವಿ ಡೇನಿಯಲ್ ದೇವರಾಜ್, ಸೈನಡ್ ಕಾರ್ತಿಕ್, ಅಯ್ಯಪ್ಪ ಸೇರಿದಂತೆ 15 ಆರೋಪಿಗಳನ್ನು ಅರೆಸ್ಟ್​ ಮಾಡಿದ್ದು, ಇದೇ ಗ್ಯಾಂಗ್ 2019 ರಲ್ಲಿ ಸ್ಕೂಲ್ ಮಾಲೀಕರೊಬ್ಬರನ್ನ ಕಿಡ್ನಾಪ್​ ಮಾಡಿತ್ತು. ಇನ್ನು ಆರೋಪಿಗಳನ್ನು ಬಂಧಿಸಿರುವ ಪೊಲೀಸರು ವಿಚಾರಣೆಯನ್ನು ಮುಂದುವರೆಸಿದ್ದಾರೆ

ಸಚಿವ ಸಂಪುಟದಿಂದ ಜೊಲ್ಲೆ ವಜಾಗೆ ಆಗ್ರಹ
ಭ್ರಷ್ಟಾಚಾರ ಆರೋಪ ಹೊತ್ತಿರುವ ಸಚಿವೆ ಶಶಿಕಲಾ ಜೊಲ್ಲೆಯನ್ನು ಸಂಪುಟದಿಂದ ವಜಾಮಾಡುವಂತೆ ಆಗ್ರಹಿಸಿ ಮುದ್ದೇಬಿಹಾಳದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದ್ದಾರೆ. ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ AIUTUC ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತೆಯರು, ಶಶಿಕಲಾ ಜೊಲ್ಲೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯಾಗಿದ್ದಾಗ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದು ನಾಚಿಕೆಗೇಡಿನ ಸಂಗತಿ. ಹೀಗಾಗಿ ಸಿಎಂ ಬೊಮ್ಮಾಯಿ ಅವರಿಗೆ ನೈತಿಕತೆ ಇದ್ರೆ ಮೊದಲು ಸಚಿವೆ ಸ್ಥಾನದಿಂದ ಜೊಲ್ಲೆಯನ್ನು ವಜಾ ಮಾಡಬೇಕು ಅಂತ ಆಗ್ರಹಿಸಿದ್ರು.

ಮೈಸೂರಿನ ಚಾಮರಾಜೇಂದ್ರ ಮೃಗಾಲಯ ಬಂದ್​
ರಾಜ್ಯದಲ್ಲಿ ಕೋವಿಡ್​ ಪ್ರಕರಣಗಳ ಏರಿಕೆ ಹಿನ್ನೆಲೆ, ಗಡಿ ಜಿಲ್ಲೆಗಳಲ್ಲಿ ವೀಕೆಂಡ್​ ಕರ್ಫ್ಯೂ ಜಾರಿ ಮಾಡಲಾಗಿದೆ. ಈ ಹಿನ್ನೆಲೆ ಇಂದು ಮತ್ತು ನಾಳೆ ಮೈಸೂರಿನ ಚಾಮರಾಜೇಂದ್ರ ಮೃಗಾಲಯವನ್ನ ಬಂದ್​ ಮಾಡಲಾಗಿದೆ. ಈ ಬಗ್ಗೆ ಮೃಗಾಲಯ ಪ್ರಾಧಿಕಾರ ಮಾಹಿತಿ ನೀಡಿದ್ದು, ವೀಕೆಂಡ್​ ಕರ್ಫ್ಯೂ ಇರೋದ್ರಿಂದ ಎರಡು ದಿನಗಳ ಕಾಲ ಪ್ರವಾಸಿಗರಿಗೆ ವೀಕ್ಷಣೆಗೆ ನಿರ್ಬಂಧಿಸಲಾಗಿದೆ. ಇನ್ನು ಮೃಗಾಲಯದ ಪಕ್ಕದಲ್ಲೇ ಇರುವ ಕಾರಂಜಿಕೆರೆಗೂ ಕೂಡ ಪ್ರವಾಸಿಗರ ಭೇಟಿಯನ್ನ ನಿರ್ಬಂಧಿಸಲಾಗಿದೆ.

ತಮಿಳುನಾಡಿನಲ್ಲಿ ಲಾಕ್​ಡೌನ್​ ಮುಂದುವರಿಕೆ
ಆಗಸ್ಟ್​ 23ರವರೆಗೆ ರಾಜ್ಯಾದ್ಯಂತ ಲಾಕ್​ಡೌನ್​ ಮುಂದುವರೆಯಲಿದೆ ಅಂತ ತಮಿಳುನಾಡು ಸರ್ಕಾರ ಆದೇಶ ಹೊರಡಿಸಿದೆ. ಇದರ ಜೊತೆಗೆ ಹೊಸ ಕೊರೊನಾ ನಿಯಮಗಳ ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ವಾರಾಂತ್ಯದಲ್ಲಿ ರಾಜ್ಯದ ಎಲ್ಲಾ ಧಾರ್ಮಿಕ ಕ್ಷೇತ್ರ ಮತ್ತು ದೇವಸ್ಥಾನಗಳಿಗೆ ಸಾರ್ವಜನಿಕರ ಭೇಟಿಗೆ ನಿರ್ಬಂಧಿಸಲಾಗಿದೆ. ಎಲ್ಲಾ ಖಾಸಗಿ ಕಂಪನಿಗಳು, ದಿನಸಿ ಅಂಗಡಿಗಳಿಗೆ ಕೊರೊನಾ ನಿಯಮಗಳನ್ನು ಕಡ್ಡಾಯಗೊಳಿಸಿದೆ.

‘ಕೊರೊನಾ ಲಸಿಕೆ ವಿತರಣೆ 50 ಕೋಟಿ ಡೋಸ್ ದಾಟಿದೆ’
ದೇಶದಲ್ಲಿ ಕೊರೊನಾ ಲಸಿಕೆ ವಿತರಣೆ 50 ಕೋಟಿ ಡೋಸ್ ದಾಟಿದ್ದು, ಕೊರೊನಾ ವೈರಸ್ ವಿರುದ್ಧ ಭಾರತದ ಹೋರಾಟಕ್ಕೆ ಬಲವಾದ ಉತ್ತೇಜನ ಸಿಕ್ಕಿದೆ ಅಂತಾ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಈ ಬಗ್ಗೆ ಟ್ವೀಟ್​​ ಮಾಹಿತಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ಲಸಿಕಾ ವಿತರಣೆ ಅಭಿಯಾನದಡಿ ಎಷ್ಟು ಮಂದಿಗೆ ಲಸಿಕೆ ಹಾಕಲಾಗಿದೆ ಎಂಬುದನ್ನು ಸರ್ಕಾರ ಖಚಿತವಾಗಿ ತಿಳಿಸುತ್ತೆ ಅಂತಲೂ ಹೇಳಿದ್ದಾರೆ.

ಕೂದಲೆಳೆ ಅಂತರದಲ್ಲಿ ಉಳಿದ 22 ಪ್ರಯಾಣಿಕರ ಜೀವ
ಖಾಸಗಿ ಬಸ್​ವೊಂದು ಸ್ಕಿಡ್ ​ಆಗಿ ಪ್ರಪಾತದ ಅಂಚಿಗೆ ಜಾರಿದ ಘಟನೆ ಹಿಮಾಚಲ ಪ್ರದೇಶದ ಶಿಲ್ಲೈ ಬಳಿ ನಡೆದಿದೆ. ಈ ವೇಳೆ ಬಸ್​ ಚಾಲಕನ ಸಮಯಪ್ರಜ್ಞೆಯಿಂದ ಭಾರೀ ಅನಾಹುತವೊಂದು ತಪ್ಪಿದ್ದು, 22 ಪ್ರಯಾಣಿಕರು ಪ್ರಾಣಪಾಯದಿಂದ ಪಾರಾಗಿದ್ದಾರೆ. ಭಾರೀ ಮಳೆಯಾದ ಕಾರಣ ಚಲಿಸುತ್ತಿದ್ದ ಬಸ್​ ಸ್ಕಿಡ್ ಆಗಿ ಪ್ರಪಾತದತ್ತ ಜಾರಿದೆ. ಈ ವೇಳೆ ಡ್ರೈವರ್ ತಕ್ಷಣ ಬ್ರೇಕ್ ಹಾಕಿದ್ದರಿಂದ ಕೂದಲೆಳೆ ಅಂತರದಲ್ಲಿ ಪ್ರಯಾಣಿಕರು ಬಚಾವ್​ ಆಗಿದ್ದಾರೆ.

ಮಳೆ ಆರ್ಭಟಕ್ಕೆ ಉಕ್ಕಿ ಹರಿಯುತ್ತಿರುವ ಗಂಗೆ, ಯಮುನೆ
ಮುಂಗಾರು ​ ಮಳೆಯ ಅಬ್ಬರಕ್ಕೆ ಗಂಗಾ ಮತ್ತು ಯಮುನಾ ನದಿಗಳು ಉಕ್ಕಿ ಹರಿಯುತ್ತಿವೆ. ಸದ್ಯ ಎರಡು ನದಿಗಳ ನೀರಿನ ಮಟ್ಟ ಹೆಚ್ಚಿದ ಕಾರಣ ಉತ್ತರಪ್ರದೇಶದ ಪ್ರಯಾಗ್​ರಾಜ್​ನ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಪ್ರಯಾಗ್​ರಾಜ್​ನಲ್ಲಿರುವ ಸಂಗಮ್​ ಬಳಿಯ ಬೇಡ ಹನುಮಾನ್​ ಮಂದಿರಕ್ಕೂ ನೀರು ನುಗ್ಗಿದೆ. ಇನ್ನು ಈ ಬಗ್ಗೆ ಬೇಡ ಹನುಮಾನ್​ ದೇವಸ್ಥಾನದ ಪೂಜಾರಿ ಮಹಂತ್ ನರೇಂದ್ರ ಗಿರಿ ಪ್ರತಿಕ್ರಿಯೆ ನೀಡಿದ್ದು ಇದು ಬಹುನಿರೀಕ್ಷಿತ ಕ್ಷಣ ಮತ್ತು ಸಂತೋಷದ ವರ್ಷದ ಸಂಕೇತವೂ ಹೌದು ಅಂತಾ ಹೇಳಿದ್ದಾರೆ.

‘ಗ್ರೀನ್​ ಇಂಡಿಯಾ’ ಚಾಲೆಂಜ್​ ಕೊಟ್ಟ ಮಹೇಶ್​ ಬಾಬು
ಟಾಲಿವುಡ್​​ ನಟ ಪ್ರಿನ್ಸ್​ ಮಹೇಶ್​ ಬಾಬು ತಮ್ಮ ಅಭಿಮಾನಿಗಳಿಗೆ ಗ್ರೀನ್​ ಇಂಡಿಯಾ ಚಾಲೆಂಜ್​ ನೀಡಿದ್ದಾರೆ. ಆಗಸ್ಟ್​ 9ರಂದು ಮಹೇಶ್​ ಬಾಬು 46ನೇ ವಸಂತಕ್ಕೆ ಕಾಲಿಡುತ್ತಿರುವ ಹಿನ್ನೆಲೆ ತಮ್ಮ ಹುಟ್ಟುಹಬ್ಬದ ದಿನ 3 ಸಸಿಗಳನ್ನ ನೆಡುವಂತೆ ಮನವಿ ಮಾಡಿದ್ದಾರೆ. ಈ ಬಗ್ಗೆ ತಮ್ಮ ಫೇಸ್​ಬುಕ್​ನಲ್ಲಿ ಪೋಸ್ಟ್​ ಶೇರ್​ ಮಾಡಿರುವ ಮಹೇಶ್​ ಬಾಬು, ತನ್ನ ಹುಟ್ಟುಹಬ್ಬದ ದಿನ 3 ಸಸಿಗಳನ್ನ ನೆಡುವ ಮೂಲಕ ಗ್ರೀನ್​ ಇಂಡಿಯಾ ಚಾಲೆಂಜ್​ ಸ್ವೀಕರಿಸುವಂತೆ ಮನವಿ ಮಾಡಿದ್ದಾರೆ.

ಧೋನಿ ಟ್ವಿಟರ್​ ಅಕೌಂಟ್​ನಿಂದ ನಾಪತ್ತೆಯಾಗಿದ್ದ ಬ್ಯಾಡ್ಜ್!
ಟೀಮ್​ ಇಂಡಿಯಾದ ಮಾಜಿ ಕ್ಯಾಪ್ಟನ್​ ಮಹೇಂದ್ರ ಸಿಂಗ್​ ಧೋನಿಯವರ ಟ್ವಿಟರ್​ ಅಕೌಂಟ್​ನ ವೆರಿಫೈಡ್​ ಬ್ಯಾಡ್ಜ್​ ಕಾಣೆಯಾಗಿತ್ತು. ಸೆಲೆಬ್ರಿಟಿಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಅವರ ಅಧಿಕೃತ ಖಾತೆಗೆ ನೀಲಿ ಬಣ್ಣದ ವೆರಿಫೈಡ್​ ಬ್ಯಾಡ್ಜ್ ನೀಡಿರುತ್ತವೆ. ಅದೇ ರೀತಿ ಧೋನಿಯವರ ಪ್ರೊಫೈಲ್​ಗೂ ಈ ಬ್ಯಾಡ್ಜ್​ ನೀಡಲಾಗಿತ್ತು. ಆದ್ರೆ ನಿನ್ನೆ ಇದ್ದಕ್ಕಿದ್ದ ಹಾಗೆ, ಆ ಬ್ಯಾಡ್ಜ್​ ಕಾಣೆಯಾಗಿತ್ತು. ಇದರಿಂದ ಧೋನಿ ಟ್ವಿಟರ್​ ಉಪಯೋಗಿಸೋದನ್ನ ಬಿಟ್ರಾ ಎಂಬ ಅನುಮಾನ ಅಭಿಮಾನಿಗಳಲ್ಲಿ ಕಾಡಿತ್ತು. ಹಾಗಾಗಿ ಕೋಟ್ಯಾಂತರ ಅಭಿಮಾನಿಗಳು ಪ್ರಶ್ನೆ ಮಾಡೋದಕ್ಕೆ ಶುರು ಮಾಡಿದ್ರು. ಧೋನಿ ಫ್ಯಾನ್ಸ್​ ಪ್ರಶ್ನೆಗಳ ಸುರಿಮಳೆಗೈಯುತ್ತಿದ್ದಂತೆ ಇದೀಗ ಟ್ವಿಟರ್ ​ಮತ್ತೆ ಧೋನಿ ಅಕೌಂಟ್​​ಗೆ ಬ್ಯಾಡ್ಜ್​​ ನೀಡಿದೆ.

Source: newsfirstlive.com Source link