‘ದಯವಿಟ್ಟು ಅಳಬೇಡಿ, ನಿಮ್ಮ ಬಗ್ಗೆ ಹೆಮ್ಮೆ ಇದೆ’ -ಭಾವನಾತ್ಮಕ ಗಳಿಗೆಗೆ ಸಾಕ್ಷಿಯಾದ ಮೋದಿಯ ಆ ವಿಡಿಯೋ ಸಂದೇಶ

‘ದಯವಿಟ್ಟು ಅಳಬೇಡಿ, ನಿಮ್ಮ ಬಗ್ಗೆ ಹೆಮ್ಮೆ ಇದೆ’ -ಭಾವನಾತ್ಮಕ ಗಳಿಗೆಗೆ ಸಾಕ್ಷಿಯಾದ ಮೋದಿಯ ಆ ವಿಡಿಯೋ ಸಂದೇಶ

ಟೋಕಿಯೋದಲ್ಲಿ ಒಲಿಂಪಿಕ್ಸ್​ ನಡೆಯುತ್ತಿದ್ದು, ಭಾರತೀಯ ಆಟಗಾರರು ಕೂಡ ಹಲವು ಪದಕಗಳಿಗೆ ಹೊಳಪು ತುಂಬಿದ್ದಾರೆ. ಜಪಾನ್​​ನ ಟೋಕಿಯಾದಲ್ಲಿ ವಿಜಯ ಪತಾಕೆ ಹಾರಿಸಿದ ಭಾರತೀಯ ಅಥ್ಲೆಟಿಕ್​ಗಳು ಸೂರ್ಯೋದಯದ ನಾಡಿನಲ್ಲಿ ಭಾರತದ ತ್ರಿವರ್ಣ ಧ್ವಜ ಹಾರಾಡುವಂತೆ ಮಾಡಿದ್ದಾರೆ. ಇವೆಲ್ಲೆದರ ನಡುವೆ ಪ್ರಧಾನಿ ನರೇಂದ್ರ ಮೋದಿ ಒಲಿಂಪಿಕ್ಸ್​ ಅಥ್ಲೆಟಿಕ್​ಗಳಿಗೆ ಧೈರ್ಯ ತುಂಬುವ ಕೆಲ್ಸ ಮಾಡಿದ್ದು, ಸರ್ವರ ಪ್ರಶಂಸೆಗೆ ಪಾತ್ರವಾಗಿದೆ.

ಟೋಕಿಯೋ ಒಲಿಂಪಿಕ್ಸ್​ ಕ್ರೀಡಾಕೂಟದ ಮಹಿಳೆಯರ ಹಾಕಿಯಲ್ಲಿ ಭಾರತಕ್ಕೆ ಕೂದಲೆಳೆಯ ಅಂತರದಲ್ಲಿ ಕಂಚಿನ ಪದಕ ಕೈತಪ್ಪಿ ಹೋಗಿತ್ತು. ಕಂಚಿನ ಪದಕ ಕೈತಪ್ಪುತ್ತಿದ್ದಂಗೆ ಮಹಿಳಾ ಆಟಗಾರರು ನೋವಿನ ಸಾಗರದಲ್ಲಿ ಮುಳುಗಿದ್ರು. ಆದ್ರೆ ನೋವು ತುಂಬಿದ ಮಹಿಳೆಯರ ಮನದಲ್ಲಿ ಮುಗುಳ್ನಗೆಯ ಮಲ್ಲಿಗೆಯನ್ನು ಸೂಸಿದ್ದೇ ಪ್ರಧಾನಿ ನರೇಂದ್ರ ಮೋದಿಯವರ ಮಾತು. ಸೋಲಿನಿಂದ ಕಣ್ಣೀರ ಕಡಲಲ್ಲಿ ತೇಲುತ್ತಿದ್ದ ಭಾರತದ ಮಹಿಳಾ ಹಾಕಿ ಆಟಗಾರರಿಗೆ ಪ್ರಧಾನಿ ಮೋದಿ ಸಾಂತ್ವನ ಹೇಳಿದಲ್ಲದೆ, ಸಾಧನೆಯ ಬಗ್ಗೆ ಹುರಿದುಂಬಿಸಿದ್ದಾರೆ. ಮೋದಿಯ ಮಾತು, ಆಟಗಾರರಿಗೆ ಪದಕ ಗೆದ್ದಷ್ಟೇ ಸಂತಸ ಕೊಟ್ಟಿತ್ತು.

ಕೊರೊನಾ ನಡುವೆ ಜನರಿಗೆ ಒಲಿಂಪಿಕ್ಸ್​ ಜ್ವರ ಹಿಡಿದಿದ್ದು, ಇಡೀ ಜಗತ್ತು ಜಪಾನ್ ಎಂಬ ಪುಟ್ಟ ರಾಷ್ಟ್ರದಲ್ಲಿ ನಡೆಯುತ್ತಿರುವ ಟೋಕಿಯೋ ಒಲಿಂಪಿಕ್ಸ್​​ನ್ನು ಕಣ್ಣರಳಿಸಿ ನೋಡುತ್ತಿದೆ. ಅಲ್ಲಿಯ ಒಂದೊಂದು ದೃಶ್ಯವನ್ನ ಕಣ್ತುಂಬಿಕೊಳ್ಳುತ್ತಿದೆ. ಈ ಐತಿಹಾಸಿಕ ಟೋಕಿಯೋ ಒಲಿಂಪಿಕ್ಸ್​ನಲ್ಲಿ ಭಾರತೀಯರು ಏನು ಕಡ್ಮೆ ಮಾಡಿಲ್ಲ. ಒಲಿಂಪಿಕ್ಸ್​​ನ್ನ ಸಮರ ಭೂಮಿಯಲ್ಲಿ ಸಿಂಹದಂತೆ ಸೆಣಸಾಡಿ,ಪದಕಕ್ಕೆ ಹೊಳಪು ಕೂಡ ತುಂಬಿದ್ದಾರೆ.
ಭಾರತೀಯ ಕ್ರೀಡಾಪಟುಗಳು ಬೆಳ್ಳಿ,ಕಂಚಿನ ಪದಕಗಳಿಗೆ ಈಗಾಗಲೇ ಕೊರೊಳೊಡಿದ್ದಾರೆ. ಮೀರಾ ಭಾಯ್​ ಚಾನು ವೈಟ್​​ ಲಿಫ್ಟಿಂಗ್​ನಲ್ಲಿ ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದ್ದಾಗ, ರೋಹಿತ್​​ ದಹಿಯಾ ಕುಸ್ತಿಯಲ್ಲಿ ಬೆಳ್ಳಿ ಪದಕಕ್ಕೆ ಪಂಚ್ ಕೊಟ್ಟಾಗ, ಪಿವಿ ಸಿಂಧು ಹಾಗು ಲವ್ಲೀನಾ ಕಂಚಿನ ಪದಕವನ್ನು ಕೊರಳಿಗೇರಿಸಿಕೊಂಡಾಗ,ಇಡೀ ಟೋಕಿಯಾ ಮಹಾನಗರವೇ ಒಂದು ಕ್ಷಣ ಭಾರತದ ಕ್ರೀಡಾಪಟುಗಳನ್ನು ಬೆರಗುಕಣ್ಣಿನಿಂದ ನೋಡಿತ್ತು. ದೇಶದ ಅಥ್ಲೆಟಿಕ್​ಗಳು ಪದಕಕ್ಕೆ ಮುತ್ತಿಕ್ಕಿದ ಸಂದರ್ಭದಲ್ಲಿ , ಜಪಾನ್​ ಟೋಕಿಯೋದಲ್ಲಿ ಭಾರತೀಯ ತ್ರಿವರ್ಣ ಧ್ವಜ ಹಾರಾಡಿದ ದೃಶ್ಯ, ದೇಶಾಭಿಮಾನಿಗಳ ಕಣ್ಣಲ್ಲಿ ಸಂತೋದ ಹನಿಗಳು ಉಕ್ಕಿ ಬಂದಿವೆ.

ಟೋಕಿಯೋ ಕ್ರೀಡೆಯ ಅನ್ನೋದೇ ಹಾಗೆ, 200 ಕ್ಕೂ ಅಧಿಕ ದೇಶಗಳ, 11 ಸಾವಿರಕ್ಕೂ ಅಧಿಕ ಕ್ರೀಡಾಪಟಗುಳ ವೀರ ಯೋಧರಂತೆ ಗೆಲುವಿಗೆ ಹೋರಾಡುತ್ತಾರೆ. ಈ ಭಾರಿಯ ಭಾರತದ 126 ಕ್ರೀಡಾಪಟಗುಳು ಕೂಡ ಭಾಗವಹಿಸಿ, ತಮ್ಮ ಸಾಮರ್ಥ್ಯ ಏನೆಂಬುದನ್ನ ಜಗತ್ತಿಗೆ ಸಾರಿದ್ರು. ಕ್ರೀಡಾಪಟುಗಳ ಸಾಮರ್ಥ್ಯ ಒಂದು ಕಡೆಯಾದ್ರೆ,ದೇಶದ ಪ್ರಧಾನಿ ನರೇಂದ್ರ ಮೋದಿಯವರು ಕ್ರೀಡಾಪುಗಳ ಬೆನ್ನು ತಟ್ಟಿ ಹುರಿದುಂಬಿಸಿದನ್ನ ಕೂಡ ಇಲ್ಲಿ ನಾವು ಮರೆಯುವಂತ್ತಿಲ್ಲ.

ಮನ್​ ಕಿ ಬಾತ್​ನಲ್ಲಿ ಕ್ರೀಡಾಪಟುಗಳಿಗೆ ಶುಭಾಶಯ ಕೋರಿದ್ದ ಮೋದಿ
ಉತ್ಸಾಹವನ್ನು ಹೆಚ್ಚಿಸಲು ಚೀಯರ್ 4 ಇಂಡಿಯಾ ಅಭಿಯಾನ

ಭಾರತೀಯ ಆಟಗಾರರು ಕನಸಿನ ಮೂಟೆ ಹೊತ್ತು ಜಪಾನ್​ಗೆ ಸಜ್ಜಾಗಿರುವ ಹೊತ್ತಲ್ಲೇ ಪ್ರಧಾನಿ ನರೇಂದ್ರ ಮೋದಿಯವರು ಒಲಿಂಪಿಕ್ಸ್​ನಲ್ಲಿ ಭಾಗವಹಿಸುವ ಎಲ್ಲಾ ಕ್ರೀಡಾ ಪಟುಗಳಿಗೆ ಉರಿದುಂಬಿಸಿದ್ರು. 78ನೇ ಮನ್ ಕೀ ಬಾತ್ ಆವೃತ್ತಿಯಲ್ಲಿ ಟೋಕಿಯೋ ಒಲಂಪಿಕ್ಸ್ ತಯಾರಿ ಕುರಿತು ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಒಲಿಂಪಿಕ್ಸ್​ನಲ್ಲಿ ಪಾಲ್ಗೊಳ್ಳುವ ದೇಶದ ಎಲ್ಲಾ ಕ್ರೀಡಾಪಟುಗಳಿಗೂ ಶುಭಾಶಯ ಕೋರಿದ್ರು.

ಟೋಕಿಯೋಗೆ ಹೋಗುವ ಪ್ರತಿಯೊಬ್ಬ ಆಟಗಾರನೂ ಕೂಡ ಸ್ವಂತ ಹೋರಾಟ ಮತ್ತು ಅನೇಕ ವರ್ಷಗಳ ಶ್ರಮವನ್ನು ಹೊಂದಿದ್ದಾರೆ. ಅವರು ತಮಗಾಗಿ ಮಾತ್ರವಲ್ಲದೇ ದೇಶಕ್ಕಾಗಿ ಹೋಗುತ್ತಿದ್ದಾರೆ. ಕ್ರೀಡಾ ಸ್ಪೂರ್ತಿಯಿಂದ ಉತ್ತಮ ಆಟಗಾರನಾಗಬಹುದು. ಹಳ್ಳಿಗಳಿಂದ ಅನೇಕ ಆಟಗಾರರು ಒಲಂಪಿಕ್’ಗೆ ಬರುತ್ತಾರೆ. ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡ ಎಲ್ಲಾ ಕ್ರೀಡಾಪಟುಗಳಿಗೆ ನೀವು ಸ್ಪೂರ್ತಿ ತುಂಬಿ. ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿರುವ ಅಭಿಯಾನದಲ್ಲಿ ಪಾಲ್ಗೊಳ್ಳಿ.
-ಪ್ರಧಾನಿ ನರೇಂದ್ರ ಮೋದಿ

ಒಲಿಂಪಿಕ್ಸ್​​ಗೆ ಹೋಗುವ ತಯಾರಿಯಲ್ಲಿದ್ದ ಕ್ರೀಡಾಪಟುಗಳನ್ನು ಬೆಂಬಲಿಸಿ ಪ್ರಧಾನಿ ನರೇಂದ್ರ ಮೋದಿ ಆಡಿರುವ ಮಾತುಗಳಿವು. ಅಷ್ಟೇ ಅಲ್ಲ, ಜುಲೈ 13 ರಂದು ಟೋಕಿಯೋ ಒಲಿಂಪಿಕ್ಸ್​​ನಲ್ಲಿ ಪಾಲ್ಗೊಳ್ಳುವ ಎಲ್ಲಾ ಅಥ್ಲೆಟಿಕ್​ಗಳ ಜೊತೆ ವರ್ಚುವಲ್​ ವಿಡಿಯೋ ಮೂಲಕ ಕುಶಲೋಪರಿ ವಿಚಾರಿಸಿದ್ರು. ದಿನನಿತ್ಯದ ಬ್ಯುಸಿ ಶೆಡ್ಯೂಲ್​ ನಡುವೆ ಕೂಡ ಮೋದಿ, ಒಲಿಂಪಿಕ್ಸ್​ನಲ್ಲಿ ಭಾಗವಹಿಸುವ ಎಲ್ಲಾ ಅಥ್ಲೆಟಿಕ್​ಗಳ ಜೊತೆ ಮಾತ್ನಾಡಿ, ಅವರ ಮನದ ಮಾತುಗಳನ್ನ ಮಗುವಿನಂತೆ ಆಳಿಸಿ ಕ್ರೀಡಾಪಟುಗಳಿಗೆ ಧೈರ್ಯ ತುಂಬಿದ್ರು.
ಕ್ರೀಡಾಪಟುಗಳ ಜೊತೆ ಮಾತ್ರವಲ್ಲ, ಅವರ ಹೆತ್ತವರ ಜೊತೆ ಕೂಡ ಮಾತ್ನಾಡಿದ ಮೋದಿ ತಮ್ಮ ಮಕ್ಕಳ ಕಾರ್ಯದ ಬಗ್ಗೆ ಪ್ರಶಂಸನೀಯ ಮಾತುಗಳನ್ನಾಡಿದಾಗ, ಆ ಹೆತ್ತ ದೇಹಗಳು ಹೆಮ್ಮೆಯಿಂದ ಸಂತೋಷ ಪಟ್ಟಿತ್ತು. ಅಥ್ಲೆಟಿಕ್​ಗಳ ಸಮಸ್ಯೆಗಳನ್ನ ಕೂಡ ಆಲಿಸಿದ ಮೋದಿ, ಆಟಗಾರರಿಗೆ ಮತ್ತಷ್ಟು ಶಕ್ತಿ ಬರುವಂತಹ ಮಾತುಗಳಿಂದ ಧೈರ್ಯ ತುಂಬಿದ್ರು.

ಪ್ರಧಾನಿಯ ಮನದ ಮಾತಿನ ಮುತ್ತುಗಳು ಕ್ರೀಡಾಪಟುಗಳ ಹೃದಯವನ್ನ ಸ್ಫೂರ್ತಿಯ ಮಾಲೆಯಾಗಿ ಅಲಂಕರಿಸಿದವು. ದೇಶದ ಒಲಿಂಪಿಕ್ಸ್ ತಂಡವನ್ನು ಬೆಂಬಲಿಸುವ ಅಭಿಯಾನ ಕೂಡ ಪ್ರಾರಂಭ ಮಾಡುವ ಮೂಲಕ ಕ್ರೀಡಾಪಟುಗಳಿಗೆ ಪ್ರಧಾನಿ ಮತ್ತಷ್ಟು ಚೈತನ್ಯ ತುಂಬಿತು.

ಇಲ್ಲಿ ನಾವು ಮತ್ತೊಂದು ಪ್ರಮುಖ ಅಂಶವನ್ನ ಗಮನಿಸಬೇಕು. ಒಲಿಂಪಿಕ್ಸ್​​​ನಲ್ಲಿ ಪಾಲ್ಗೊಳ್ಳುವ ಆಟಗಾರರ ಪಯಣ ಎಂಬುವುದು ಹೂವಿನ ಹಾಸಿಗೆಯಲ್ಲ..ನಿಜಕ್ಕೂ ಅದು ಮುಳ್ಳಿನ ಕಿರೀಟ. ಯಾಕಂದ್ರೆ ಗೆದ್ದರೆ ಹೊಗಳಿಕೆಯ ಸರಮಾಲೆ..ಸೋತರೆ ನಿಂದನೆಯ ಸುರಿಮಳೆ. ಆದ್ರೆ ಪ್ರಧಾನಿ ನರೇಂದ್ರ ಮೋದಿ ಮಾತ್ರ ಸೋಲು ಗೆಲುವು ಕಂಡ ಎಲ್ಲಾ ಕ್ರೀಡಾಪಟುಗಳ ಜೊತೆಗೂ ಸ್ಫೂರ್ತಿಧಾಯಕ ಮಾತುಗಳನ್ನಾಡ್ಡಾವು ಮೂಲಕ ಆಟಗಾರರಿಗೆ ಚೈತನ್ಯ ತುಂಬಿದ್ದಾರೆ. ಗೆದ್ದಾಗ ಮಾತ್ರವಲ್ಲ ಸೋತಾಗಲು ಆಟಗಾರರಿಗೆ ಧೈರ್ಯ ತುಂಬಿ ಅವರ ಸಾಮರ್ಥ್ಯವನ್ನ ಕೊಂಡಾಡಿದ್ದಾರೆ. ಈ ಮೂಲಕ ಆಟಗಾರರ ಸ್ಮತಿಪಟಲದಲ್ಲಿ ಅಚ್ಚಳಿಯದ ಸ್ಥಾನ ಪಡೆದಿದ್ದಾರೆ.

ಟೋಕಿಯೋದಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್​ನಲ್ಲಿ ಲವ್ಲಿನಾ, ಪಿವಿ ಸಿಂಧೂ, ರೋಹಿತ್ ದಹಿಯಾ ಸೇರಿದಂತೆ ಹಲವು ಅಥ್ಲೆಟಿಕ್​ಗಳು ಪ್ರೇಕ್ಷಕರು ಕಣ್ಮನ ಸೆಳೆದ್ರೆ, ಇನ್ನೂ ಕೆಲ ಆಟಗಾರರು ಒಲಿಂಪಿಕ್ಸ್​​ ಕ್ಷಿತಿಜಲ್ಲಿ ಹೊಳೆಯುವ ನಕ್ಷತ್ರವಾಗಿ ಕಂಗೊಳಿಸುತ್ತಿದ್ದಾರೆ. ಹಲವು ನೆಚ್ಚಿನ ಆಟಗಾರರಿಂದ ಮೆಚ್ಚುವಂತಹ ಆಟ ಮೂಡಿ ಬರ್ತಿದ್ದು,ಪದಕದ ಕನಸಿಗೆ ಗಟ್ಟಿ ಅಡಿಪಾಯ ಹಾಕಿದ್ದಾರೆ.

ಒಲಿಂಪಿಕ್ಸ್​ಗೂ ಮೊದಲು ಪ್ರಧಾನಿ ಆಡಿರುವ ಮಾತುಗಳು ಆಟಗಾರರಲ್ಲಿ ಹೊಸ ರೀತಿಯ ಚೈತನ್ಯ ಮೂಡಿಸಿತ್ತು. ಮೋದಿಯ ಮಾತುಗಳು ಅಥ್ಲೆಟಿಕ್​ಗಳಿಗೆ ಹೊಸ ಶಕ್ತಿ ತುಂಬಿತ್ತು. ಅಲ್ಲದೇ ಅವರ ಮನದಲ್ಲಿ ಭರವಸೆಯ ಬೆಳಕನ್ನ ಮತ್ತಷ್ಟು ಮೂಡಿಸಿತ್ತು. ಖುದ್ದು ಪ್ರಧಾನಿ ಮೋದಿ ಕೂಡ ಹಲವು ಪಂದ್ಯಗಳನ್ನ ವೀಕ್ಷಣೆ ಮಾಡಿ ಆಟಗಾರರಿಗೆ ಶುಭ ಹಾರೈಸಿದ್ರು.

Source: newsfirstlive.com Source link