ಕನ್ನಡಿಗನ ಕ್ರಿಕೆಟ್ ಕರಿಯರ್​ಗೆ ಮುಳುವಾಯ್ತಾ ಇಂಜುರಿ..!

ಕನ್ನಡಿಗನ ಕ್ರಿಕೆಟ್ ಕರಿಯರ್​ಗೆ ಮುಳುವಾಯ್ತಾ ಇಂಜುರಿ..!

ಆಸ್ಟ್ರೇಲಿಯಾ ಪ್ರವಾಸದ ಬಳಿಕ ಬೆಂಚ್​ ಕಾದಿದ್ದ ಮಯಾಂಕ್, ಇಂಗ್ಲೆಂಡ್ ಸರಣಿಯಲ್ಲಿ ಆರಂಭಿಕನಾಗಿ ಕಣಕ್ಕಿಳಿಲು ಸಜ್ಜಾಗಿದ್ದರು. ಆದ್ರೆ, ಇಂಜುರಿ ಸಿಕ್ಕ ಅವಕಾಶವನ್ನ ಕೈ ತಪ್ಪುವಂತೆ ಮಾಡಿದೆ. ಜೊತೆಗೆ ಇದೇ ಇಂಜುರಿ ಕರಿಯರ್​ಗೆ ಮುಳುವಾಗುತ್ತೆ ಎಂದು ಹೇಳಲಾಗ್ತಿದೆ.blank

ಪ್ರತಿಷ್ಠಿತ ಇಂಗ್ಲೆಂಡ್​ ಪ್ರವಾಸದಲ್ಲಿ ಸಮಸ್ಯೆಗಳು ಟೀಮ್ ಇಂಡಿಯಾದ ಬೆನ್ನು ಬಿದ್ದಿದ್ವು. ಶುಭಮನ್​​ ಇಂಜುರಿಯಿಂದ ಆರಂಭಿಕ ಹಿನ್ನಡೆ ಅನುಭವಿಸಿದ್ದ ಟೀಮ್ ಇಂಡಿಯಾ, ಮೊದಲ ಟೆಸ್ಟ್​ ಆರಂಭಕ್ಕೆ ಕೆಲ ಗಂಟೆಗಳ ಹಿಂದೆ, ಮಯಾಂಕ್​​ ಸೇವೆ ಕಳೆದುಕೊಂಡಿತ್ತು. ಸದ್ಯದಲ್ಲಿ ಅಗರ್​ವಾಲ್​ ಅಲಭ್ಯತೆ ತಂಡಕ್ಕೆ ಕಾಡಿಲ್ಲ. ಆದ್ರೆ, ಈ ಇಂಜರಿ ಮಯಾಂಕ್​ ಕರಿಯರ್​ಗೆ ಮುಳುವಾಗೋ ಸಾಧ್ಯತೆಯಿದೆ.

ಆಸ್ಟ್ರೇಲಿಯಾ ಪ್ರವಾಸದಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಮಯಾಂಕ್, ನಂತರದ ಸರಣಿಗಳಲ್ಲಿ ಬೆಂಚ್​ಗೆ ಸೀಮಿತವಾಗಿದ್ರು. ಆದ್ರೆ, ಟೆಸ್ಟ್​ ಚಾಂಪಿಯನ್​ಶಿಪ್ ಫೈನಲ್​​ ಬಳಿಕ ಶುಭ್​​ಮನ್ ಇಂಜುರಿಗೆ ತುತ್ತಾಗಿದ್ದು, ಮಯಾಂಕ್​​ ಅಗರ್ವಾಲ್​​​ ಪಾಲಿಗೆ ವರದಾನವಾಗಿ ಪರಿಣಮಿಸಿತ್ತು. ಗಿಲ್​ ಅಲಭ್ಯತೆಯಲ್ಲಿ ಇನ್ನಿಂಗ್ಸ್​ ಆರಂಭಿಸೋ ಅವಕಾಶದ ಬಾಗಿಲು ತೆರೆದಿತ್ತು. ಆದ್ರೆ, ನೆಟ್ಸ್​ನಲ್ಲಾದ ಇಂಜುರಿ ಮಯಾಂಕ್ ಕಮ್​ಬ್ಯಾಕ್​ ಆಸೆಗೆ ತಣ್ಣೀರೆರಚಿತು.

blank

ಮಯಾಂಕ್​ಗೆ ಮತ್ತೆ ಬೆಂಚ್​ ಕಾಯಬೇಕಾದ ಪರಿಸ್ಥಿತಿ ಬರುತ್ತಾ..?

ಸದ್ಯ ಮೊದಲ ಟೆಸ್ಟ್​​​​ಗೆ ಅಲಭ್ಯರಾಗಿರುವ ಮಯಾಂಕ್, ನಂತರ ಸಂಪೂರ್ಣ ಟೆಸ್ಟ್​ ಸರಣಿಯಲ್ಲೇ ಬೆಂಚ್​ ಕಾಯಬೇಕಾಗುತ್ತಾ..? ಎಂಬ ಪ್ರಶ್ನೆ ಹುಟ್ಟುಕೊಂಡಿದೆ. ಇದಕ್ಕೆ ಕಾರಣ ಮತ್ತೊರ್ವ ಕನ್ನಡಿಗ ಕೆ.ಎಲ್.ರಾಹುಲ್. ಮಯಾಂಕ್ ಬದಲಿಗೆ ಆರಂಭಿಕನಾಗಿ ಕಣಕ್ಕಿಳಿದಿರುವ ಕೆ.ಎಲ್.ರಾಹುಲ್, ಭರವಸೆಯ ಪ್ರದರ್ಶನ ನೀಡಿದ್ದಾರೆ. ರಾಹುಲ್​ ಕಟ್ಟಿದ ಜವಾಬ್ಧಾರಿಯುತ ಇನ್ನಿಂಗ್ಸ್​​, ಮಯಾಂಕ್​ಗೆ ಸರಣಿ ಪೂರ್ತಿ ಮತ್ತೆ ಬೆಂಚ್​​ಗೆ ಕಾಯಬೇಕಾದ ಪರಿಸ್ಥಿತಿ ತಂದೊಡ್ಡಿದೆ.

ಮಾಯಾಂಕ್​ಗೆ ಶುರುವಾಯ್ತಾ ಸ್ಥಾನ ಕಳೆದುಕೊಳ್ಳುವ ಭೀತಿ..?

ರಾಹುಲ್ ಭರವಸೆಯ ಪ್ರದರ್ಶನ ಮಯಾಂಕ್​ಗೆ ಟೆಸ್ಟ್​ ತಂಡದಿಂದಲೇ ಗೇಟ್​​ ಪಾಸ್​​ ನೀಡಿದ್ರೂ ಅಚ್ಚರಿ ಇಲ್ಲ. ಯಾಕಂದ್ರೆ ಈಗಾಗಲೇ ಟೆಸ್ಟ್ ಆರಂಭಿಕರಾಗಿ ಶುಭ್​ಮನ್​ ಗಿಲ್ ಇದ್ದಾರೆ. ಮತ್ತೊಂದೆಡೆ ಪೃಥ್ವಿ ಶಾ ಬ್ಯಾಕ್ ಆಪ್​ ಓಪನರ್​​ ಆಗಿ ಇಂಗ್ಲೆಂಡ್​​ಗೆ ಹಾರಿದ್ದಾರೆ. ಗಿಲ್​, ಪೃಥ್ವಿ, ರಾಹುಲ್​ ಈ ಮೂವರ ಅಬ್ಬರದ ನಡುವೆ ಮಯಾಂಕ್​ ಹೆಸರು ಕಳೆದು ಹೋದ್ರೂ ಅಚ್ಚರಿಯಿಲ್ಲ.

blank

ಈ ಸರಣಿ ಮುಕ್ತಾಯ ಕಂಡ ಬಳಿಕ ಟೀಮ್ ಇಂಡಿಯಾ, ಮತ್ತೆ ಟೆಸ್ಟ್​ ಪಂದ್ಯವನ್ನಾಡೋದು ಬರೋಬ್ಬರಿ 6 ತಿಂಗಳ ಬಳಿಕ…! ಈ ಆರು ತಿಂಗಳ ಕಾಲಾವಧಿಯಲ್ಲಿ ಮಯಾಂಕ್​ ಸಂಪೂರ್ಣವಾಗಿ ತಂಡದಿಂದ ಕಡೆಗಣಿಸಲ್ಪಟ್ಟರೂ ಅಚ್ಚರಿ ಇಲ್ಲ.. ಹೀಗಾಗಿಯೇ ಒಂದು ಇಂಜುರಿ ವೃತ್ತಿ ಜೀವನಕ್ಕೆ ಮುಳುವಾಗುತ್ತಾ ಎಂಬ ಅನುಮಾನ ಹುಟ್ಟಿಹಾಕಿರೋದು..!

Source: newsfirstlive.com Source link