ಮತ್ತೆ ಕೊರೊನಾ ಕಾಟ: ಇಂದು ಮತ್ತು ನಾಳೆ ಮೈಸೂರು ಮೃಗಾಲಯ ಬಂದ್

ಮತ್ತೆ ಕೊರೊನಾ ಕಾಟ: ಇಂದು ಮತ್ತು ನಾಳೆ ಮೈಸೂರು ಮೃಗಾಲಯ ಬಂದ್

ಮೈಸೂರು: ರಾಜ್ಯದಲ್ಲಿ ಕೋವಿಡ್​ ಪ್ರಕರಣಗಳ ಏರಿಕೆ ಹಿನ್ನೆಲೆ, ಗಡಿ ಜಿಲ್ಲೆಗಳಲ್ಲಿ ವೀಕೆಂಡ್​ ಕರ್ಫ್ಯೂ ಜಾರಿ ಮಾಡಲಾಗಿದ್ದು ಮುಂಜಾಗ್ರತಾ ಕ್ರಮವಾಗಿ ಚಾಮರಾಜೇಂದ್ರ ಮೃಗಾಲಯವನ್ನು ಮತ್ತೆ ಬಂದ್​ ಮಾಡಲಾಗಿದೆ.

ಇದನ್ನೂ ಓದಿ: ಪುತ್ರನ ಹೆಸರಿನಲ್ಲಿ ಮೈಸೂರು ಮೃಗಾಲಯದ ‘ಇಂಡಿಯನ್​ ಲೆಪರ್ಡ್​’ ದತ್ತು ಪಡೆದ ನಟ ರಿಷಬ್ ಶೆಟ್ಟಿ

ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ವ್ಯಾಪಕವಾಗಿ ದಾಖಲಾಗುತ್ತಿದ್ದು ಮತ್ತೆ ಕೊರೊನಾ ಆವರಿಸುವ ಆತಂಕ ಉಂಟು ಮಾಡಿದೆ. ಈ ಹಿನ್ನೆಲೆ ಇಂದು ಮತ್ತು ನಾಳೆ ಮೈಸೂರಿನ ಚಾಮರಾಜೇಂದ್ರ ಮೃಗಾಲಯವನ್ನ ಬಂದ್​ ಮಾಡಲಾಗಿದೆ. ಈ ಬಗ್ಗೆ ಮೃಗಾಲಯ ಪ್ರಾಧಿಕಾರ ಮಾಹಿತಿ ನೀಡಿದ್ದು, ವೀಕೆಂಡ್​ ಕರ್ಫ್ಯೂ ಇರೋದ್ರಿಂದ ಎರಡು ದಿನಗಳ ಕಾಲ ಪ್ರವಾಸಿಗರಿಗೆ ವೀಕ್ಷಣೆಗೆ ನಿರ್ಬಂಧಿಸಲಾಗಿದೆ.

ಇನ್ನು ಮೃಗಾಲಯದ ಪಕ್ಕದಲ್ಲೇ ಇರುವ ಕಾರಂಜಿ ಕೆರೆಗೂ ಕೂಡ ಪ್ರವಾಸಿಗರ ಭೇಟಿಯನ್ನ ನಿರ್ಬಂಧಿಸಲಾಗಿದೆ ಎಂದು ಮೃಗಾಲಯ ಪ್ರಾಧಿಕಾರ ನ್ಯೂಸ್​ಫಸ್ಟ್​ಗೆ  ಮಾಹಿತಿ ನೀಡಿದೆ.

Source: newsfirstlive.com Source link