ಬದಲಾಯ್ತು ಹಿಟ್​ಮ್ಯಾನ್​​ ಚಾರ್ಮ್..ಇನ್ಮುಂದೆ ಸ್ಟಾರ್ಟ್​​ ಆಗುತ್ತೆ ​ರೋಹಿತ್​ ಕಮಾಲ್..!

ಬದಲಾಯ್ತು ಹಿಟ್​ಮ್ಯಾನ್​​ ಚಾರ್ಮ್..ಇನ್ಮುಂದೆ ಸ್ಟಾರ್ಟ್​​ ಆಗುತ್ತೆ ​ರೋಹಿತ್​ ಕಮಾಲ್..!

2018ರಲ್ಲಿ ‘SUN WILL RISE AGAIN TOMORROW’ ಅಂದಿದ್ದ ಕ್ರಿಕೆಟರ್​​, ಈಗ ತನ್ನ ಅಸಾಮಾನ್ಯ ಪ್ರದರ್ಶನದಿಂದ ಪ್ರಜ್ವಲಿಸುತ್ತಿದ್ದಾನೆ. ಇನ್​ಫ್ಯಾಕ್ಟ್​​…! ಈತ ಟೀಮ್​ ಇಂಡಿಯಾದ ಮ್ಯಾಚ್​ ವಿನ್ನರ್​​ ಅಂದ್ರೆ ತಪ್ಪಾಗಲ್ಲ. ಯಾರು ಆ ಕ್ರಿಕೆಟರ್​..? 2018ರ ಪ್ರವಾಸದ ವೇಳೆ ನಡೆದಿದ್ದೇನು.?

blank
ಅದು 2018ರ ಟೀಮ್ ಇಂಡಿಯಾದ ಇಂಗ್ಲೆಂಡ್​ ಪ್ರವಾಸ. ಸ್ಥಾನ ಸಿಕ್ಕೇ ಸಿಗುತ್ತೆ ಸಿಗೋ ಅವಕಾಶದಲ್ಲಿ ನಾನು ಏನೆಂಬುದನ್ನ ನಿರೂಪಿಸಬೇಕು ಎಂದುಕೊಂಡಿದ್ದ ಆಟಗಾರನಿಗೆ ನಿರಾಸೆ ಕಾದಿತ್ತು. ಟೆಸ್ಟ್​​ ಮಾದರಿಯಲ್ಲಿ ನೀಡ್ತಿದ್ದ ಇನ್​ಕನ್ಸಿಸ್ಟೆನ್ಸಿ ಪ್ರದರ್ಶನ ಅವಕಾಶವನ್ನ ಕಿತ್ತುಕೊಂಡಿತ್ತು. ಆಗ ಆದ ನೋವನ್ನ ಟ್ವೀಟ್​ ಮೂಲಕ ಹೊರ ಹಾಕಿದ್ದ ಆತ ‘SUN WILL RISE AGAIN TOMORROW’ ಎಂಬ ವಾಕ್ಯವನ್ನ ಬರೆದಿದ್ದ. ಆತ ಬೇರಾರೂ ಭಾರತದ ಸ್ಟಾರ್​ ಓಪನರ್​ ರೋಹಿತ್​ ಶರ್ಮಾ..!

blank

ಯೆಸ್​ ಅಂದು ‘SUN WILL RISE AGAIN TOMORROW’ ಎಂದು ಬರೆದ ರೋಹಿತ್​ ಸುಮ್ನೇ ಕೂರಲೇ ಇಲ್ಲ. ಕಠಿಣ ಪರಿಶ್ರಮ, ಸಾಧಿಸುವ ಛಲದೊಂದಿಗೆ ಸ್ಪಷ್ಟ ಗುರಿಯೆಡೆಗೆ ಹೋರಾಟವನ್ನೇ ನಡೆಸಿದ್ರು. ಲಿಮಿಟೆಡ್​ ಓವರ್​ ಫಾರ್ಮೆಟ್​​ನಲ್ಲಿ ಸಿಕ್ಕ ಅವಕಾಶವನ್ನ ಎರಡೂ ಎರಡೂ ಕೈಗಳಿಂದ ಬಾಚಿದ ರೋಹಿತ್​, ಟೆಸ್ಟ್​ ತಂಡಕ್ಕೂ ಕಮ್​ಬ್ಯಾಕ್​ ಮಾಡಿದ್ರು. ಇಷ್ಟೇ ಅಲ್ಲ.. ಓಪನರ್​ ಆಗಿ ಬಡ್ತಿಯನ್ನೂ ಪಡೆದುಕೊಂಡ್ರು.

blank

ಅಕ್ಟೋಬರ್​​ 2, 2019 ಸೌತ್​ಆಫ್ರಿಕಾ ಸರಣಿಯಲ್ಲಿ ವಿಶಾಖಪಟ್ಟಣದಲ್ಲಿ ಆರಂಭಿಕನಾಗಿ ಕಣಕ್ಕಿಳಿದ ಹಿಟ್​​ಮ್ಯಾನ್​ ಅಬ್ಬರಕ್ಕೆ ಹರಿಣಗಳ ಪಡೆ ತಬ್ಬಿಬ್ಬಾಗಿತ್ತು. ಕಮ್​ಬ್ಯಾಕ್​ ಪಂದ್ಯದ ಎರಡೂ ಇನ್ನಿಂಗ್ಸ್​​ನಲ್ಲಿ ಶತಕ ಸಿಡಿಸಿ ಮಿಂಚಿದ ಹಿಟ್​ಮ್ಯಾನ್​, ಮತ್ತೆ ಹಿಂತಿರುಗಿ ನೋಡಲೇ ಇಲ್ಲ. ಇಂಜುರಿಯಿಂದಾಗಿ ಆಸ್ಟ್ರೇಲಿಯಾ ಪ್ರವಾಸದ 2 ಟೆಸ್ಟ್​ ತಪ್ಪಿದ್ದು ಬಿಟ್ರೆ, ಉಳಿದೆಲ್ಲಾ ಪಂದ್ಯಗಳಲ್ಲೂ ರೋಹಿತ್​ಗೆ ಸ್ಥಾನ ಫಿಕ್ಸ್​ ಆಗೇ ಇದೆ.!

blank

ಈ ಹಿಂದಿನ ಪ್ರವಾಸದಲ್ಲಿ ಅವಕಾಶ ವಂಚಿತನಾಗಿದ್ದ ರೋಹಿತ್​, ಈಗ ತಂಡದ ಟ್ರಂಪ್​ ಕಾರ್ಡ್​​. ಮೊದಲ ಟೆಸ್ಟ್​​ ಪಂದ್ಯದ ಮೊದಲ ಇನ್ನಿಂಗ್ಸ್​​ನಲ್ಲಿ ಆ ಜವಾಬ್ದಾರಿಯನ್ನ ಅರಿತೇ ಆಡಿರುವ ರೋಹಿತ್​, ತಂಡಕ್ಕೆ ಡಿಸೇಂಟ್​​ ಸ್ಟಾರ್ಟ್​ ನೀಡಿದ್ದಾರೆ. ಮುಂದಿನ ಇನ್ನಿಂಗ್ಸ್​​​ಗಳಲ್ಲೂ ಹಿಟ್​​ ಮ್ಯಾನ್​ ಪ್ರದರ್ಶನ ಹೀಗೆ ಇರುತ್ತಾ..?

Source: newsfirstlive.com Source link