ಒಲಿಂಪಿಕ್ಸ್​ಗಿಂತಲೂ ಟ್ರೆಂಡಿಂಗ್! ನೋಡುಗರ ಕಂಗಳ ತಂಪು ಮಾಡ್ತಿರೋ ಈ ಬ್ಯೂಟಿ ಯಾರು ಗೊತ್ತಾ?

ಒಲಿಂಪಿಕ್ಸ್​ಗಿಂತಲೂ ಟ್ರೆಂಡಿಂಗ್! ನೋಡುಗರ ಕಂಗಳ ತಂಪು ಮಾಡ್ತಿರೋ ಈ ಬ್ಯೂಟಿ ಯಾರು ಗೊತ್ತಾ?

ಈ ಭಾರಿ ಒಲಿಂಪಿಕ್, ಆಟವೇನೋ ರೋಚಕವಾಗೆ ಇದೆ. ಅದಕ್ಕೆ ಅದರದ್ದೇಯಾದ ಅಭೀಮಾನಿ ಬಳಗವನ್ನು ಪಡೆದಿದೆ. ಆದ್ರೆ ಇಡಿ ವಿಶ್ವಾದ್ಯಂತ ಹುಡುಗರು, ಇದುವರೆಗೂ ಒಲಿಂಪಿಕ್ ನೋಡಿಯೇ ಇಲ್ಲದಿದ್ದರು, ಒಬ್ಬರಿಗೆ ಮೆಡಲ್ ಕೊಡಲೇ ಬೇಕು ಅಂತ ಹಠ ಹಿಡಿದು ಕೂತ್ತಿದ್ದಾರೆ. ಅರೆ ಅವಱರು ಗೊತ್ತಾ?..!

ಹೌದು.. ಜಪಾನ್ ರಾಜಧಾನಿ ಟೋಕಿಯೋದಲ್ಲಿ ಒಲಿಂಪಿಕ್ ಕ್ರೀಡಾಕೂಟ ನಡೆಯುತ್ತಿದೆ. ಕೆಲವು ಕ್ರೀಡಾಪಟುಗಳು ತಮ್ಮ ಸ್ಪರ್ಧೆಯ ಪ್ರದರ್ಶನದಿಂದ ಚರ್ಚೆಯಾಗುತ್ತಿದ್ರೆ, ಇನ್ನು ಕೆಲವ್ರು ತಮ್ಮ ಸೌಂದರ್ಯ, ಮೈಮಾಟದಿಂದ ಸುದ್ದಿಯಾಗ್ತಿದ್ದಾರೆ. ಅದ್ರಂತೆ ಸೌಂದರ್ಯದ ಖಣಿಯೇ ಆಗಿರೋ ಅಪ್ಸೆರೆಯೊಬ್ಬಳು ಇಂಟರ್​ನ್ಯಾಷನಲ್ ಕ್ರಷ್ ಆಗ್ಬಿಟ್ಟಿದ್ದಾಳೆ..! ಅದು ಎಷ್ಟರ ಮಟ್ಟಿಗೆ ಅಂದ್ರೆ.. ಸೋದರರೇ ಇಲ್ಲಿ ಸ್ಪರ್ಧೆ ಮುಖ್ಯವಲ್ಲ. ಚಿನ್ನ, ಬೆಳ್ಳಿ, ಕಂಚು ಯಾವ ಪದಕ ಇದೆಯೋ ಅದನ್ನೆಲ್ಲ ಮೊದಲು ಈಕೆಗೆ ಕೊಟ್ಟುಬಿಡಿ.. ಒಂದು ವೇಳೆ ಈಕೆ ಸ್ಪರ್ಧೆಯಲ್ಲಿ ಭಾಗವಹಿಸದೇ ಇದ್ರೂ ಮನೆಗೆ ಹೋಗಿಯಾದ್ರೂ ಕೊಟ್ಟು ಬನ್ನಿ ಅಂತಾ ಸೋಶಿಯಲ್ ಮೀಡಿಯಾದಲ್ಲಿ ಜನ ಹೇಳ್ತಿದ್ದಾರೆ.

blank

ಅಂದ್ಹಾಗೆ ಈ ಮೋಹಕ ಹುಡುಗಿ ಹೆಸರು ಏನು ಅಂದ್ರೆ ಅದು ತ್ಸುಯು.. ಹೆಸರೇನಪ್ಪ ಹೀಗೆದೆ ಅನ್ಬೇಡಿ. ಹೆಸರು ಹೇಗಾದ್ರೂ ಇರ್ಲಿ ಅದು ಮುಖ್ಯ ಅಲ್ಲ. ಈ ಚಲುವೆ ತೈವಾನ್ ದೇಶದ ಮಾಡಲ್. ಅಲ್ಲೆಲ್ಲೊ ಇದ್ದ ಈ ಹುಡುಗಿಗೆ ಟೋಕಿಯೋ ಒಲಿಂಪಿಕ್ಸ್ ಬಹುದೊಡ್ಡ ಸ್ಟಾರ್​​ಗಿರಿಯನ್ನ ತಂದುಕೊಟ್ಟಿದೆ. ಅದು ಎಷ್ಟರ ಮಟ್ಟಿಗೆ ಅಂದ್ರೆ ಇವಳು ಇಂಟರ್ ನ್ಯಾಷಿನಲ್ ಕ್ರಷ್ ಆಗಿ ಬಿಟ್ಟಿದ್ದಾಳೆ. ಅದೆಷ್ಟೋ ಹುಡುಗರ ಮೊಬೈಲ್ ವಾಲ್ ಪೇಪರ್ ಆಗಿ, ಅದೆಷ್ಟೂ ಯುವಕರ ಕಾಯಂ ಕನಸಿನ ರಾಣಿ ಆಗಿದ್ದಾಳೆ. ಇವಳು ಎಲ್ಲಿಯವಳು ಎನ್ನುವ ಚರ್ಚೆಯೇ ಒಂದು ಕೂಟ ನಡೆಸಿ ಮಾತುಕತೆ ಮಾಡತನಕದವರೆಗೂ ಇವಳ ಬಗ್ಗೆ ಚರ್ಚೆ ಆಯ್ತು. ಕೆಲವ್ರು ಚೀನಾದವ್ರು ಅಂತಾ ಹೇಳಿದ್ರೆ, ಇನ್ನು ಕೆಲವ್ರು ತೈವಾನ್ ಅಥವಾ ಕೋರಿಯಾದವಳು ಎನ್ನುತ್ತಿದ್ರೂ. ತಾಳ್ಮೆ ಇರಲಿ ಯುವಕರೇ.. ಈಕೆ ತೈವಾನ್ ದೇಶದ ಬೆಡಗಿ.

ಇದನ್ನೂ ಓದಿ: ‘ದಯವಿಟ್ಟು ಅಳಬೇಡಿ, ನಿಮ್ಮ ಬಗ್ಗೆ ಹೆಮ್ಮೆ ಇದೆ’ -ಭಾವನಾತ್ಮಕ ಗಳಿಗೆಗೆ ಸಾಕ್ಷಿಯಾದ ಮೋದಿಯ ಆ ಮಾತು

ಅಂತು ಈ ಒಲಿಂಪಿಕ್ಸ್ ಈಕೆಗೆ ದೊಡ್ಡ ಸ್ಟಾರ್ ಗಿರಿಯನ್ನೆ ತಂದು ಕೊಡ್ತು, ಆದ್ರೆ ಅಸಲಿ ವಿಷ್ಯಾ ಏನಪ್ಪಾ ಅಂದ್ರೆ, ಈಕೆಗೂ ಟೋಕಿಯೋದಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ ಗೂ ಯಾವುದೇ ಸಂಬಂಧವಿಲ್ಲ. ಅಯ್ಯೂ ಶಾಕ್ ಆಗ್ಬೇಡಿ. ಈ ಬೆಡಗಿ ಆರ್ಚರಿಯಲ್ಲಿ ಪರಿಣಿತಳೆ, ಆದ್ರೆ ಈ ಬಾರಿ ಒಲಿಂಪಿಕ್ ಅಲ್ಲಿ ಅಥವಾ ಕಳೆದ ಯಾವ ಒಲಿಂಪಿಕ್ ಸ್ಪರ್ಧೆಯಲ್ಲಿ ಇವಳು ಭಾಗವಹಿಸಿಲ್ಲ. ಆದ್ರೆ ಈಕೆ ಆರ್ಚರಿ ಹಿಡಿದ ಫೋಟೋ ಮಾತ್ರ ನಮ್ಮ ನಿಮ್ಮ ಮೊಬೈಲ್ ನಲ್ಲಿ ಒಮ್ಮೆಯಾದರೂ ಬಂದು ಹೋಗಿರುತ್ತೆ. ಈಕೆಗೆ ಮೆಡಲ್ ಕೊಟ್ಟು ಬಿಡಿ, ನಮ್ಮ ಮನಸ್ಸನ್ನು ಕದ್ದಿದ್ದಾಳೆ, ಗೆದ್ದಿದ್ದಾಳೆ ಎಂದು ಕೂಗಿ ಕೂಗಿ ಹೇಳುತ್ತಿದ್ದಾರೆ.

blank

ಹಾಗಾದ್ರೆ ವೈರಲ್ ಆದ ಈ ಫೋಟೋ ಬಗ್ಗೆ ನಾವೊಂದಷ್ಟು ವಿಷಯ ತಿಳಿದುಕೊಳ್ಳಣ. ಅದೇನಪ್ಪ ಅಂದ್ರೆ. ತೈವಾನ್ ನಲ್ಲಿ ಐಡಲ್ ಸ್ಟಾರ್ ಅತ್ಲೇಟಿಕ್ ಚಾಂಪಿಯನ್ ಶಿಪ್ ಸ್ಫರ್ಧೆ ನಡೆಯುತ್ತೆ. ಇದರಲ್ಲಿ, ಸುಂದರವಾಗಿರೊ ಮಾಡಲ್ ಗಳನ್ನು ಅತ್ಲೆಟ್ ಐಡಲ್ ಮಾಡಲು ಒಂದು ಪುಟ್ಟ ಸ್ಪರ್ಧೆಯನ್ನು ನಡೆಸುತ್ತಾರೆ. ಈ ಸ್ಪರ್ಧೆಯಲ್ಲಿ ಯಾವ ಚಲುವೆ ಅಥವಾ ಚಲುವ ಎಲ್ಲರ ಗಮನ ಸೆಳೆಯುತ್ತಾರೊ, ಅವರನ್ನು ಐಡಲ್ ಅತ್ಲೇಟ್ ಎಂದು ಗೋಷಿಸಿ ಆ್ಯಡ್ ಗಳಲ್ಲಿ ಬಳಸಿಕೊಳ್ತಾರೆ. ಇದೆ ಚಾಂಪಿಯನ್ ಶಿಪ್ ನಲ್ಲಿ ನಮ್ಮ ನೆಚ್ಚಿನ ತ್ಸುಯು ಚಲುವೆಯರ ನಡುವೆ ಎದ್ದು ನಿಂತ ಚೆಲುವೆ.

ಮಾಡಲ್ ಆಗಿ ಆರ್ಚರಿಯಲ್ಲಿ ಭಾಗವಹಿಸಿದ ತ್ಸುಯು, ತನ್ನ ಪ್ರತಿಭೆ ಪ್ರದರ್ಶನ ಮಾಡಿ, ಅದರಲ್ಲೂ ತಾನು ಪರಿಣಿತಳು ಎಂದು ತೋರಿರೊದ್ರಲ್ಲಿ ಡೌಟೇ ಇಲ್ಲ. ಆದರೆ ಒಲಿಂಪಿಕ್ ನ ಈ ಸಂದರ್ಭದಲ್ಲಿ ಈಕೆ ಹೀಗೆ ವಿಶ್ವಪ್ರಸಿದ್ಧ ಪಡಿತಾಳೆ ಅಂತ, ಸ್ವತಃ ಆಕೆಯೂ ಅಂದುಕೊಂಡಿರಲಿಲ್ಲ. ಅದೃಷ್ಟ ಎಲ್ಲೆಲ್ಲಿ ಅವಿತು ಕುಳಿತಿರುತ್ತೋ ನೋಡಿ. ಈ ಒಂದು ಪ್ರಸಿದ್ಧಿಗೆ ಆ ಬೆಡಗಿ ಎಳ್ಳಷ್ಟು ಶ್ರಮ ಹಾಕಿಲ್ಲ. ತನ್ನ ಅರಿವಿಗೆ ಭಾರದಂತೆ., ಅವಳು ವರ್ಲ್ಡ್ ಫೇಮಸ್ ಆಗಿ ಹೋಗಿದ್ದಾಳೆ. ಇದೆಲ್ಲ ಎಲ್ಲಿಂದ ಶುರುವಾಯ್ತು ಅಂತೀರ ?

blank

ಈ ಬೆಡಗಿಯೇ ಇವತ್ತು ವಿಶ್ವ ಪ್ರಸಿದ್ಧ. ಅದು ಹೇಗಾಯ್ತು ಅನ್ನೋದು ನಿಜಕ್ಕೂ ಜೋಕಿಂಗ್. ಒಬ್ಬ ಸಾಮಾನ್ಯ ಟ್ವಿಟರ್ ಬಳಕೆದಾರ. ಯಾವಾಗಲೂ ಫೇಕ್ ಟ್ವಿಟ್ ಮಾಡುವ ಹಾಗೆ ಒಂದು ಸುದ್ದಿಯನ್ನು ಹರಿದು ಬಿಟ್ಟ. ತೈವಾನ್ ಗಾಯಕಿ ತ್ಸುಯು ಈ ಭಾರಿ ಒಲಿಂಪಿಕ್ ನಲ್ಲಿ ಆಟವಾಡ್ತಾ ಇದ್ದಾಳೇ ಎಂದು ಪೋಸ್ಟ್ ಮಾಡೆ ಬಿಟ್ಟ. ಇದು ಎಂದು ಟ್ವಿಟರ್ ಖಾತೆಗೆ ಬಂದು ಬಿತ್ತೋ.. ಜಲಪಾತದಲ್ಲಿ ನೀರು ಹರಿದಂತೆ ರಭಸದಿಂದ ಎಲ್ಲರ ಮೊಬೈಲ್ ಬಂದು ಸೇರಿತ್ತು. ಅದು ಕೇವಲ 1 ಗಂಟೆಯಲ್ಲಿ 46 ಸಾವಿರ ಲೈಕ್ಸ್ ಹಾಗೂ 5 ಸಾವಿರ ರೀಟ್ವಿಟ್ ಗಳು ಆ ಒಂದು ಪೋಸ್ಟ್ ಗೆ ಸಿಕ್ಕಿತು. ಆಮೇಲೆ ಇದರ ಸುದ್ದಿಯನ್ನು ಕೇಳಲೇ ಬೇಡಿ.. ಇವಳ ಫಾಲೋಯರ್ಸ್ ನಿಂದ ಹಿಡಿದು, ಈಕೆ ಹಾಡಿದ ಎಲ್ಲ ಹಾಡುಗಳು 10 ಕೋಟಿ ವೀಕ್ಷಣೆ ಗಳಸಿಬಿಟ್ಟಿದೆ.

ಒಟ್ಟಿನಲ್ಲಿ ಎಷ್ಟೋ ಹುಡುಗರ ನಿದ್ದೆ ಕದ್ದ ಕನಸಿನ ರಾಣಿ, ನಮಗೆಲ್ಲ ಕೈಗೆಟಕದ ಮಾಣಿಕ್ಯದಂತೆ ದೂರದಲ್ಲಿ ಇದ್ದು ಮನರಂಜಿಸುತ್ತಾಳೇ. ಆದ್ರೆ ಈ ಬೆಡಗಿಯ ಸೌಂದರ್ಯಕ್ಕೆ ಮಾರು ಹೋದ ಯುವಕರ ಬಳಗ, ಅವಳ ಫ್ಯಾನ್ ಪೇಜ್ ತೆಗೆದುಕೊಂಡು, ಚಲುವೆಯ ಪ್ರಮೋಷನ್ ಮಾಡ್ತಾ ಇದ್ದಾರೆ. ಹಾಗೆ instagram ನಲ್ಲಿ ಇವಳ ಹೆಸರು ಟೈಪ್ ಮಾಡಿದರೆ, ಅವಳ official ಖಾತೆ ಇಲ್ಲ, ಬದಲಿಗೆ ಪ್ಯಾನ್ ಖಾತೆಗಳು ಸಾಲಾಗಿ ಇದ್ದು ಎಲ್ಲ ಖಾತೆಗಳಿಗೂ ಮಿನಿಮಮ್ ಲಕ್ಷ ಜನ ಫಾಲೋವರ್ಸ್ ಇದ್ದಾರೆ. ಇನ್ನು ಟ್ವಿಟರ್ ನಲ್ಲಂತೂ ಹ್ಯಾಷ್ ಟ್ಯಾಗ್ ತ್ಸುಯುಗಳು ರಾರಾಜಿಸುತ್ತಿದೆ. ಇವಳ ಅಭಿಮಾನಿಗಳಂತೂ ವಿಶ್ವಾದ್ಯಂತ ಮುಂದಿನ ಅಪ್ ಡೇಟ್ಸ್ ಗಾಗೆ ಕಾಯ್ತಾ ಇದ್ದಾರೆ. ಇವಳನ್ನು ನೋಡಿ ನೆನೆದು ಮಲಗಿದರೆ ನಿಮ್ಮ ಕನಸಲ್ಲಿ ಬಂದು ಕಾಡದ ಇರಳು ಈ ಬೆಡಗಿ.
ಕೇವಲ ತನ್ನ ಲುಕ್ಸ್ ಗಳಿಂದ ಜಗತ್ತನ್ನೆ ತನ್ನತ್ತ ಸೆಳೆದುಕೊಂಡ ಆ ಚಲುವೆಗೆ ಇನ್ಯಾರು ಸಾಟಿ. ಒಲಿಂಪಿಕ್ ನಲ್ಲಿ ಭಾಗವಹಿಸಿಲ್ಲ.. ಆದರೂ ಈಕೆಗೆ ಮೆಡಲ್ ಕೊಟ್ಟುಬಿಡಿ ಅನ್ನುತ್ತಿರೋ ಇವಳ ಅಭಿಮಾನಿಗಳು ಆವಳ ಸೌಂದರ್ಯಕ್ಕೆ ಮಾರು ಹೋಗಿದ್ದಾರೆ. ಈಗ ತ್ಸುಯು ಜಗತ್ತಪ್ರಸಿದ್ಧ, ಮುಂದೆ ಈಕೆ ಹಾಲಿವುಡ್ ಅಂಗಳದಲ್ಲಿ ಸ್ಟಾರ್ ನಟಿ ಆದರೂ ಅನುಮಾನ ಪಡೆವಂತಿಲ್ಲ. ಸಧ್ಯಕ್ಕೆ ಈಕೆಯ ಮುದ್ದು ಮುಖವನ್ನು ನೋಡಿ, ನೋಡುತ್ತಾ ಇರೋದು ನಮ್ಮ ಪಾಲಿಗೆ ಉಳಿದಿರೋದು.

Source: newsfirstlive.com Source link