ಗಡಿಭಾಗಗಳಲ್ಲಿ ದಿಢೀರ್ ಕರ್ಫ್ಯೂ: ತರಕಾರಿಗಳನ್ನು ರಸ್ತೆಗೆ ಎಸೆದು ವ್ಯಾಪಾರಸ್ಥರ ಆಕ್ರೋಶ

ಗಡಿಭಾಗಗಳಲ್ಲಿ ದಿಢೀರ್ ಕರ್ಫ್ಯೂ: ತರಕಾರಿಗಳನ್ನು ರಸ್ತೆಗೆ ಎಸೆದು ವ್ಯಾಪಾರಸ್ಥರ ಆಕ್ರೋಶ

ಕಲಬುರಗಿ: ಜಿಲ್ಲೆಯಲ್ಲಿ ಮತ್ತೆ ವೀಕೆಂಡ್ ಕರ್ಫ್ಯೂ ಜಾರಿ ಹಿನ್ನೆಲೆಯಲ್ಲಿ ರೈತರು ಹಾಗು ವ್ಯಾಪಾರಸ್ಥರು ಕಂಗಾಲಾಗಿದ್ದಾರೆ. ಲಾಕ್​ಡೌನ್​ ಸಡಲಿಕೆ ನಂತರ ವ್ಯಾಪಾರ ವಹಿವಾಟು ಸಹಜ ಸ್ಥಿತಿಗೆ ಮರಳುವುದರೊಳಗೆ ಮತ್ತೆ ಕರ್ಫ್ಯೂ ಜಾರಿಯಾಗಿದ್ದರಿಂದ ರೈತರು ಮತ್ತು ವ್ಯಾಪಾರಸ್ಥರನ್ನು ಸಂಕಷ್ಟಕ್ಕೆ ತಳ್ಳಿದೆ.

blank

ಮಧ್ಯಾಹ್ನ 2 ಗಂಟೆಯವರೆಗೂ ತರಕಾರಿ ಖರೀದಿ ಮತ್ತು ಮಾರಾಟಕ್ಕೆ ಅವಕಾಶ ಇದ್ದರೂ ಮಾರ್ಕೆಟ್​ಗೆ ಜನ ಬರುತ್ತಿಲ್ಲ ಎಂದು ಗೋಳಾಡುತ್ತಿರುವ ವ್ಯಾಪಾರಸ್ಥರು, ದಿಢೀರ್​ ಕರ್ಫ್ಯೂನಿಂದ ವಹಿವಾಟು ಬಂದ್​ ಆಗಿದೆ ಎನ್ನುತ್ತಿದ್ದಾರೆ.

blank

ಇನ್ನು ಕಲಬುರಗಿ ಹೊರವಲಯದ ಎಪಿಎಂಸಿ ತರಕಾರಿ ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟು ಫುಲ್ ಡಲ್ ಆಗಿದ್ದು ವ್ಯಾಪಾರ ಇಲ್ಲದೆ ತರಕಾರಿ ಹಾಳಾಗುವ ಆತಂಕದಲ್ಲಿ ಮಾರಲು ತಂದಿದ್ದ ತರಕಾರಿಗಳನ್ನು ರಸ್ತೆಗೆ ಚೆಲ್ಲಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ,

ಇದನ್ನೂ ಓದಿ: ಮೂರನೇ ಅಲೆಗೆ ತಯಾರಿ; ಮಕ್ಕಳಿಗಾಗಿಯೇ ತಯಾರಾಗಿದೆ ವಿಶೇಷ ಕೇರ್​ ಸೆಂಟರ್​..

Source: newsfirstlive.com Source link