ಶಂಕಿತ ಭಯೋತ್ಪಾದಕನನ್ನು ಇಂದು ನ್ಯಾಯಾಲಯಕ್ಕೆ ಹಾಜರು ಪಡಿಸಲಿರುವ ಎನ್​ಐಎ

ಶಂಕಿತ ಭಯೋತ್ಪಾದಕನನ್ನು ಇಂದು ನ್ಯಾಯಾಲಯಕ್ಕೆ ಹಾಜರು ಪಡಿಸಲಿರುವ ಎನ್​ಐಎ

ಉತ್ತರ ಕನ್ನಡ: ಉಗ್ರ ಸಂಘಟನೆ ಜೊತೆ ಸಂಪರ್ಕ ಹೊಂದುವಂತೆ ಸಾಮಾಜಿಕ ಜಾಲತಾಣದ ಮೂಲಕ ಯುವಕರಿಗೆ ಪ್ರಚೋದನೆ ನೀಡುತ್ತಿದ್ದ ಆರೋಪದ ಮೇಲೆ ಇಬ್ಬರು ಶಂಕಿತ ಭಯೋತ್ಪಾದಕರನ್ನು ಎನ್.ಐ.ಎ ಅಧಿಕಾರಿಗಳು ನಿನ್ನೆ ಬಂಧಿಸಿದ್ದು, ಓರ್ವನನ್ನು ಇಂದು ನ್ಯಾಯಲಯಕ್ಕೆ ಹಾಜರು ಪಡಿಸಲಿದ್ದಾರೆ.

ಇದನ್ನೂ ಓದಿ: ಭಟ್ಕಳದಲ್ಲಿ ಮತ್ತೆ NIA ದಾಳಿ.. ಮೂವರು ಶಂಕಿತ ಉಗ್ರರು ವಶಕ್ಕೆ

ನಿನ್ನೆ ತಾಲೂಕಿನ ಮಂಕಿ ಗ್ರಾಮದಲ್ಲಿ ಎನ್.ಐ.ಎ ಹಾಗೂ ರಾಜ್ಯ ಪೊಲೀಸ್ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಇಬ್ಬರು ಶಕಿತ ಉಗ್ರರನ್ನು ಬಂಧಿಸಿದ್ದು, ಐಸಿಸ್ ಉಗ್ರ ಸಂಘಟನೆ ಜೊತೆ ಸಂಪರ್ಕ ಹೊಂದಿದ್ದರು ಎನ್ನಲಾಗಿದೆ.

ಈ ಸಂಬಂಧ ಇಬ್ಬರು ಬಂಧಿತರಲ್ಲಿ ಅಮೀನ್ ಜುಹೈಬ್ ಎನ್ನುವವನ ವಿಚಾರಣೆ ನಡೆಸಿ ಬಿಟ್ಟಿರುವ ಎನ್.ಐ.ಎ ಅಧಿಕಾರಿಗಳು, ಐಸೀಸ್ ಮಾಸಿಕ ಪತ್ರಿಕೆ ವಾಯ್ಸ್ ಆಫ್ ಹಿಂದ್ ದಕ್ಷಿಣ ಭಾರತದಲ್ಲಿ ಭಾಷಾಂತರ ಮಾಡುತ್ತಿದ್ದ ಎನ್ನಲಾದ ಜುಫ್ರಿ ಎಂಬಾತನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಿದ್ದಾರೆ. ಇನ್ನು ಬಂಧಿತನನ್ನು ಹೊನ್ನಾವರ ಪಟ್ಟಣದ ಜೆ.ಎಂ.ಎಫ್.ಸಿ ನ್ಯಾಯಾಲಯಕ್ಕೆ ಇಂದು ಹಾಜರು ಪಡಿಸುವದಾಗಿ ನ್ಯೂಸ್​ಫಸ್ಟ್​ಗೆ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ: ಮತ್ತೆ ನೈಟ್ & ವೀಕೆಂಡ್ ಕರ್ಫ್ಯೂ; ಮನೆಯಿಂದ ಆಚೆ ಬರೋ ಮುನ್ನ ಮಾರ್ಗಸೂಚಿ ನೋಡಿ ಬಿಡಿ

Source: newsfirstlive.com Source link