ಸಿಲಿಕಾನ್​ ಸಿಟಿಗೆ ಕ್ಲಸ್ಟರ್ ಕೇಸ್​ ಕಂಟಕ.. ವ್ಯಾಕ್ಸಿನೇಷನ್​ಗೆ ವೇಗ ಹೆಚ್ಚಿಸಲು ಪ್ಲಾನ್

ಸಿಲಿಕಾನ್​ ಸಿಟಿಗೆ ಕ್ಲಸ್ಟರ್ ಕೇಸ್​ ಕಂಟಕ.. ವ್ಯಾಕ್ಸಿನೇಷನ್​ಗೆ ವೇಗ ಹೆಚ್ಚಿಸಲು ಪ್ಲಾನ್

ಬೆಂಗಳೂರು: ಕೇರಳ ಮಹಾರಾಷ್ಟ್ರ ರಾಜ್ಯಗಳಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆ ರಾಜ್ಯ ಸರ್ಕಾರ ಕೆಲವು ಕ್ರಮಗಳನ್ನ ತೆಗೆದುಕೊಂಡಿದೆ. ಕೇರಳ, ಮಹಾರಾಷ್ಟ್ರ ಗಡಿ ಜಿಲ್ಲೆಗಳಲ್ಲಿ ವೀಕೆಂಡ್ ಕರ್ಫ್ಯೂ ಹಾಗೂ ರಾಜ್ಯದಾದ್ಯಂತ ನೈಟ್ ಕರ್ಫ್ಯೂ ಜಾರಿ ಮಾಡಿದೆ. ಈ ಬೆನ್ನಲ್ಲೇ ರಾಜಧಾನಿಯಲ್ಲೂ ಸಹ ವ್ಯಾಪಕ ಪ್ರಕರಣಗಳು ದಾಖಲಾಗುತ್ತಿದ್ದು ಆತಂಕ ಹುಟ್ಟಿಸಿದೆ.

ಇದನ್ನೂ ಓದಿ:  ಮೆಟ್ರೋ ಪ್ರಯಾಣಿಕರೇ; ನಾಳೆಯಿಂದ ಮೆಟ್ರೋ ಸಂಚಾರದಲ್ಲಿ ಬದಲಾವಣೆ.. ಇಲ್ಲಿದೆ ಡೀಟೇಲ್ಸ್

ಬಿಬಿಎಂಪಿ ವ್ಯಾಪ್ತಿಯಲ್ಲಿ ಕ್ಲಸ್ಟರ್ ಕೇಸ್​ಗಳು ಹೆಚ್ಚಳವಾಗ್ತಿದ್ದು, ಎರಡನೇ ಅಲೆಯಲ್ಲಿ ಕಾಣಿಸಿಕೊಂಡಿದ್ದ ಕ್ಲಸ್ಟರ್ ಕೇಸ್ ಗಳು ಮತ್ತೆ ಏರಿಕೆ ಕಂಡಿವೆ. ಕ್ಲಸ್ಟರ್​ಗೆ ನಗರದ ಅಪಾರ್ಟ್ಮೆಂಟ್​​ಗಳೇ ಹೆಚ್ಚು ಟಾರ್ಗೆಟ್ ಆಗ್ತಿದ್ದು, ಜೊತೆಗೆ ಪ್ರತ್ಯೇಕ ಮನೆಗಳು, ಹಾಸ್ಟೆಲ್ ಗಳನ್ನೂ ಬಿಡುತ್ತಿಲ್ಲ. ನಿನ್ನೆ ಸಿಎಂ ಸಭೆಯಲ್ಲಿ ಈ ವಿಚಾರವೂ ಪ್ರಸ್ತಾಪಗೊಂಡಿದ್ದು, ಸಭೆ ಬಳಿಕ ಮುಖ್ಯ ಆಯುಕ್ತ ಗೌರವ್ ಗುಪ್ತಾ ಪಾಲಿಕೆ ಅಧಿಕಾರಿಗಳಿಗೆ ಕ್ಲಸ್ಟರ್ ಕೇಸ್ ಗಳ ನಿಯಂತ್ರಣಕ್ಕೆ ಹೆಚ್ಚು ಒತ್ತು ನೀಡುವಂತೆ ಸೂಚನೆ ನೀಡಿದ್ದಾರೆ.

ಕ್ಲಸ್ಟರ್ ಕೇಸ್ ಗಳು ಕಂಡು ಬಂದಿರುವ ಪ್ರದೇಶಗಳಲ್ಲಿ ಕೋವಿಡ್ ಟೆಸ್ಟ್ ಗಳ‌ ಹೆಚ್ಚಳ ಮಾಡುವುದು. ಕ್ಲಸ್ಟರ್ ಕೇಸ್ ಕಾಣಿಸಿಕೊಂಡ ಪ್ರತಿ ಪ್ರದೇಶದಲ್ಲಿ ಕಂಟೈನ್ಮೆಂಟ್ ಝೋನ್ ರಚನೆ ಸೇರಿದಂತೆ ವ್ಯಾಕ್ಸಿನೇಷನ್​ಗೆ ವೇಗ ನೀಡುವಂತೆ ಆಯುಕ್ತರು ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

Source: newsfirstlive.com Source link