ಗಾಲ್ಫ್​​ನಲ್ಲಿ ಅದಿತಿ ಅಶೋಕ್​ ಕೈತಪ್ಪಿದ ಪದಕ- 4ನೇ ಸ್ಥಾನಕ್ಕೆ ತೃಪ್ತಿಪಟ್ಟ ಬೆಂಗಳೂರು ಹುಡುಗಿ

ಗಾಲ್ಫ್​​ನಲ್ಲಿ ಅದಿತಿ ಅಶೋಕ್​ ಕೈತಪ್ಪಿದ ಪದಕ- 4ನೇ ಸ್ಥಾನಕ್ಕೆ ತೃಪ್ತಿಪಟ್ಟ ಬೆಂಗಳೂರು ಹುಡುಗಿ

ಟೋಕಿಯೋ ಒಲಿಂಪಿಕ್ಸ್​ನಲ್ಲಿ ಕನ್ನಡತಿ ಅದಿತಿ ಅಶೋಕ್ ನಿರಾಸೆ ಅನುಭವಿಸಿದ್ದಾರೆ. ಇಂದು ನಡೆದ 4ನೇ ಹಾಗೂ ಅಂತಿಮ ಸುತ್ತಿನ ಹೋರಾಟದಲ್ಲಿ, 4ನೇ ಸ್ಥಾನ ಗಳಿಸಿದ ಅದಿತಿ ಅಶೋಕ್ ಪದಕ ಗಿಟ್ಟಿಸುವಲ್ಲಿ ಎಡವಿದರು. ಆದ್ರೆ ಅದಿತಿ, ಒಂದು ಹಂತದ ತನಕ ನ್ಯೂಜಿಲೆಂಡ್​ನ ಕೊ ಲಿಡಿಯಾ ಹಾಗೂ ಜಪಾನ್​ನ ಇನಾಮಿ ಮೊನಿಗೆ ಪ್ರಬಲ ಪೈಪೋಟಿಯನ್ನೇ ನೀಡಿದರು. ಕೊನೆಯ ಎರಡು ಹೋಲ್​ಗಳಲ್ಲಿ ನ್ಯೂಜಿಲೆಂಡ್​ನ ಕೊ ಲಿಡಿಯಾ, ಜಪಾನ್​ನ ಇನಾಮಿ ಮೊನಿ ಮುನ್ನಡೆ ಸಾಧಿಸಿದರು. ಇದರೊಂದಿಗೆ ಭಾರತದ ಗಾಲ್ಫರ್ ಅದಿತಿ 4ನೇ ಸ್ಥಾನಕ್ಕೆ ತೃಪ್ತಿ ಪಡೆಬೇಕಾಯ್ತು.

ಇನ್ನು ಅಂತಿಮ ಹೋರಾಟದಲ್ಲಿ ಅಮೆರಿಕದ ನೆಲ್ಲಿ ಕೋರ್ಡಾ 17 ಅಂಕಗಳೊಂದಿಗೆ ಮೊದಲ ಸ್ಥಾನ ಕಾಯ್ದುಕೊಂಡರೆ, ನ್ಯೂಜಿಲೆಂಡ್​ನ ಕೊ ಲಿಡಿಯಾ, ಜಪಾನ್​ನ ಇನಾಮಿ ಮೊನಿ ಜಂಟಿ 2ನೇ ಸ್ಥಾನಗಳಿಸುವಲ್ಲಿ ಯಶಸ್ವಿಯಾದರು. ಟ್ರೈಬ್ರೇಕರ್​​ನಲ್ಲಿ ಜಪಾನಿನ ಇನಾಮಿ ಮೊನಿ, ಮೊದಲ ಸ್ಥಾನಗಳಿಸುವ ಮೂಲಕ ಬೆಳ್ಳಿ ಪದಕ ಗಳಿಸಿದ್ರು. ಅಮೆರಿಕದ ನೆಲ್ಲಿ ಕೋರ್ಡಾ ಚಿನ್ನದ ಪದಕ ಮತ್ತು  ನ್ಯೂಜಿಲೆಂಡ್​ನ ಕೊ ಲಿಡಿಯಾ ಕಂಚಿನ ಪದಕ ಪಡೆಯುವಲ್ಲಿ ಯಶಸ್ವಿಯಾದ್ರು.

Source: newsfirstlive.com Source link