ಆಫ್ರಿಕನ್​ ಪ್ರಜೆ ಸಾವು ಕೇಸ್​; ವಿಚಾರಣೆ ಆರಂಭಿಸಿರುವ CID ಕಲೆ ಹಾಕಿರುವ ಮಾಹಿತಿ ಏನು ಗೊತ್ತಾ..?

ಆಫ್ರಿಕನ್​ ಪ್ರಜೆ ಸಾವು ಕೇಸ್​; ವಿಚಾರಣೆ ಆರಂಭಿಸಿರುವ CID ಕಲೆ ಹಾಕಿರುವ ಮಾಹಿತಿ ಏನು ಗೊತ್ತಾ..?

ಬೆಂಗಳೂರು: ಪೊಲೀಸ್ ವಶದಲ್ಲಿದ್ದ ಆಫ್ರಿಕನ್ ಪ್ರಜೆ ಸಾವು ಪ್ರಕರಣದ ತನಿಖೆಯನ್ನ ಸಿಐಡಿ ಅಧಿಕಾರಿಗಳು ಅಧಿಕೃತವಾಗಿ ತನಿಖೆ ಆರಂಭಿಸಿದ್ದಾರೆ. ಅದರಂತೆ ಜೆಸಿ ನಗರ ಠಾಣೆಯ ಇನ್ಸ್​ಪೆಕ್ಟರ್ ಮುನಿಕೃಷ್ಣ ಮತ್ತು ಠಾಣೆಯ ಸಿಬ್ಬಂದಿಯನ್ನು ವಿಚಾರಣೆ ಮಾಡ್ತಿರುವುದಾಗಿ ತಿಳಿದುಬಂದಿದೆ.

ಘಟನೆ ನಡೆಯಲು ಕಾರಣವೇನು? ಎಲ್ಲಿಂದ ಶುರುವಾಯ್ತು? ಮೃತ ಜೊವಾಲ್ ಮಲು ಅರೆಸ್ಟ್ ಆಗಲು ಕಾರಣವೇನು? ಹಿಂದಿನ ದಿನ ಏನೆಲ್ಲಾ ನಡೆದಿದೆ ಎಂಬುವುದರ ಬಗ್ಗೆ ಸಿಐಡಿ ಅಧಿಕಾರಿಗಳು ಮಾಹಿತಿ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಆಫ್ರಿಕನ್ ಪ್ರಜೆ ಸಾವು ಪ್ರಕರಣದ ತನಿಖೆ CID ಹೆಗಲಿಗೆ; ಹಲ್ಲೆಗೆ ಯತ್ನಿಸಿದವ್ರ ವಿರುದ್ಧ ಎಫ್​ಐಆರ್

ಮೃತಆಫ್ರಿಕನ್​ ಪ್ರಜೆಯನ್ನ ಆಸ್ಪತ್ರೆಗೆ ಸೇರಿಸಿದ ಸಿಬ್ಬಂದಿಯಿಂದ ವಿಡಿಯೋ ಸ್ಟೇಟ್ ಮೆಂಟ್ ಮೂಲಕ ಮಾಹಿತಿ ಪಡೆದಿರುವ ಸಿಐಡಿ, ಸಾವಿಗೆ ನಿಖರ ಕಾರಣ ತಿಳಿಯಲು ತನಿಖೆ ನಡೆಸುತ್ತಿದೆ. ಪೊಲೀಸರ ಹಲ್ಲೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಪಡೆದಿರುವ ಅಧಿಕಾರಿಗಳು FSL ವರದಿಗಾಗಿ ಕಾಯುತ್ತಿದ್ದಾರೆ. ಒಂದು ವೇಳೆ ಪೊಲೀಸರದ್ದೇ ತಪ್ಪಿದ್ದಲ್ಲಿ ಕಾನೂನಿನ ಅಡಿಯಲ್ಲಿ ಕ್ರಮಕೈಗೊಳ್ಳೋದು ಪಕ್ಕಾ ಅಂತಾ ಹೇಳಲಾಗುತ್ತಿದೆ.

ಇದನ್ನೂ ಓದಿ: ಪೊಲೀಸ್ ವಶದಲ್ಲಿ ವಿದೇಶಿ ಪ್ರಜೆ ಸಾವು; ಘಟನೆ ಖಂಡಿಸಿ ಆಫ್ರಿಕನ್​ರಿಂದ ಪ್ರತಿಭಟನೆ

Source: newsfirstlive.com Source link