ಬೆಂಗಳೂರಲ್ಲಿ ಭೀಕರ ರಸ್ತೆ ಅಪಘಾತ; ಸ್ಥಳದಲ್ಲೇ ಮೂವರ ದುರ್ಮರಣ

ಬೆಂಗಳೂರಲ್ಲಿ ಭೀಕರ ರಸ್ತೆ ಅಪಘಾತ; ಸ್ಥಳದಲ್ಲೇ ಮೂವರ ದುರ್ಮರಣ

ಬೆಂಗಳೂರು: ಅಡ್ಡಾದಿಡ್ಡಿ ಆಟೋ ಚಲಾಯಿಸಿ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ಮೂವರು ಸಾವನ್ನಪ್ಪಿರುವ ದಾರುಣ ಘಟನೆ ಚಿಕ್ಕಜಾಲ ಬಳಿಯ ಬಾಗಲೂರಿನಲ್ಲಿ ನಡೆದಿದೆ.

ಆಟೋ ಚಾಲಕ ಸೇರಿ ಆಟೋದಲ್ಲಿದ್ದ ಇಬ್ಬರು ಪ್ರಯಾಣಿಕರು ಕೂಡ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಆಟೋ ಚಾಲಕ ಕಿರಣ್ (26), ಪ್ರಯಾಣಿಕರಾದ ಅನ್ವರ್ ಹುಸೇನ್ (28) ಮತ್ತು ರಾಹುಲ್( 21) ಮೃತ ದುರ್ದೈವಿಗಳು. ಇನ್ನು ಆಟೋದಲ್ಲಿದ್ದ ವಾಸಪ್ಪ ಎಂಬಾತನಿಗೆ ಗಂಭೀರವಾಗಿ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಮೂವರು ಪ್ರಯಾಣಿಕರನ್ನ ಕೂರಿಸಿಕೊಂಡು ಆಟೋ ಡ್ರೈವರ್ ಬೂದಿಗೆರೆ ಕಡೆಯಿಂದ ಬಾಗಲೂರು ಕಡೆಗೆ ಬರುತ್ತಿದ್ದ. ಅತಿವೇಗ & ಅಜಾಗರೂಕತೆಯಿಂದ ಚಾಲನೆ ಮಾಡ್ಕೊಂಡು ಆಟೋ ಚಾಲಕ ಬರುತ್ತಿದ್ದ ಎನ್ನಲಾಗಿದೆ. ಹೀಗಾಗಿ ಆಟೋ ಪಲ್ಟಿ ಹೊಡೆದಿದೆ. ನಂತರ ಪಲ್ಟಿಯಾದ ಆಟೋಗೆ ಕಾರು ಬಂದು ಗುದ್ದಿದೆ. ಇನ್ನು ಕಾರು ಚಾಲಕ ಘಟನಾ ಸ್ಥಳದಿಂದ ಎಸ್ಕೇಪ್ ಆಗಿದ್ದಾನೆ. ಕಾರು ಚಾಲಕ ಮತ್ತು ಆಟೋ ಚಾಲಕನ‌ ವಿರುದ್ಧ ಚಿಕ್ಕಜಾಲ ಟ್ರಾಫಿಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Source: newsfirstlive.com Source link