ಇಂದಿರಾ ಕ್ಯಾಂಟೀನ್​​​ಗೆ ಅನ್ನಪೂರ್ಣೇಶ್ವರಿ ಕ್ಯಾಂಟೀನ್ ಎಂದು ಹೆಸರಿಡಿ; ಸಿಎಂಗೆ ಸಿ.ಟಿ ರವಿ ಮನವಿ

ಇಂದಿರಾ ಕ್ಯಾಂಟೀನ್​​​ಗೆ ಅನ್ನಪೂರ್ಣೇಶ್ವರಿ ಕ್ಯಾಂಟೀನ್ ಎಂದು ಹೆಸರಿಡಿ; ಸಿಎಂಗೆ ಸಿ.ಟಿ ರವಿ ಮನವಿ

ಬೆಂಗಳೂರು: ಇಂದಿರಾ ಕ್ಯಾಂಟೀನ್‌ ಹೆಸರು ಬದಲಾಯಿಸುವಂತೆ ಮುಖ್ಯಮಂತ್ರಿ ಬಸವರಾಜ್​​ ಬೊಮ್ಮಾಯಿ ಅವರಿಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಮನವಿ ಮಾಡಿದ್ದಾರೆ. ರಾಜ್ಯಾದ್ಯಂತ ಇಂದಿರಾ ಕ್ಯಾಂಟೀನ್​​ ಹೆಸರನ್ನು ಅನ್ನಪೂರ್ಣೇಶ್ವರಿ ಕ್ಯಾಂಟೀನ್ ಎಂದು ಬದಲಿಸಿ ಎಂದು ಟ್ವೀಟ್​​​​ ಮಾಡುವ ಮೂಲಕ ವಿನಂತಿಸಿದ್ದಾರೆ.

ಕನ್ನಡಿಗರು ಊಟ ಮಾಡುವಾಗ ಇಂದಿರಾ ಗಾಂಧಿಯ ಕರಾಳ ದಿನ ನೆನಪು ಮಾಡಿಕೊಳ್ಳುವುದು ಬೇಡ. ಹಾಗಾಗಿ ಇಂದಿರಾ ಕ್ಯಾಂಟೀನ್​​ ಹೆಸರು ಬದಲಿಸಲು ಯಾವುದೇ ಯೋಚನೆ ಮಾಡಬೇಡಿ ಎಂದು ಸಿ.ಟಿ ರವಿ ಟ್ವೀಟ್​​ನಲ್ಲಿ ಬರೆದುಕೊಂಡಿದ್ದಾರೆ.

ಈ ಹಿಂದೆಯೂ ಇಂದಿರಾ ಕ್ಯಾಂಟೀನ್‌ಗಳಲ್ಲಿ ಅವ್ಯವಹಾರ ನಡೆಯುತ್ತಿದೆ. ಒಂದು ಕ್ಯಾಂಟೀನ್​ಗೆ ಒಂದು ಕೋಟಿ ಖರ್ಚು ಮಾಡಿದ್ದಾರೆ. ಇಂದಿರಾ ಕ್ಯಾಂಟೀನ್ ಮೂಲಕ ಕಾಂಗ್ರೆಸ್​ನವರು ಕೊಳ್ಳೆ‌ಹೊಡೆದಿದ್ದಾರೆ ಎಂದು ಸಿ.ಟಿ ರವಿ ಹಲವು ಬಾರಿ ಗಂಭೀರ ಆರೋಪ ಮಾಡಿದ್ದಾರೆ.

Source: newsfirstlive.com Source link