ಅಭಿಮಾನಿ ತಂದಿದ್ದ ಕೇಕ್ ತಿನ್ನಲು ನಿರಾಕರಣೆ – ಟ್ರೋಲಿಗರ ಕೆಂಗಣ್ಣಿಗೆ ಗುರಿಯಾದ ಕಾಜೋಲ್

ಮುಂಬೈ: ಬಾಲಿವುಡ್ ನಟಿ ಕಾಜೋಲ್ ಗುರುವಾರ ಸರಳವಾಗಿ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. 47ನೇ ವಸಂತಕ್ಕೆ ಕಾಲಿಟ್ಟ ಕಾಜೋಲ್‍ಗೆ ವಿಶ್ ಮಾಡಲು ಅಭಿಮಾನಿಯೊಬ್ಬರು ತಂದಿದ್ದ ಕೇಕ್ ತಿನ್ನಲು ನಿರಾಕರಿಸಿದ್ದಾರೆ. ಸದ್ಯ ಈ ವೀಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಕಾಜಲ್ ಟ್ರೋಲಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಆಗಸ್ಟ್ 5 ರಂದು ಕಾಜೋಲ್ ಹುಟ್ಟುಹಬ್ಬದ ಪ್ರಯುಕ್ತ ಹಲವಾರು ಅಭಿಮಾನಿಗಳು ಕಾಜೋಲ್ ಮನೆ ಮುಂದೆ ಕೇಕ್ ಹಿಡಿದು ನಿಂತ ಕಾಯುತ್ತಿರುತ್ತಾರೆ. ಈ ವೇಳೆ ಕಾಜೋಲ್ ತಮ್ಮ ಬಾಡಿಗಾಡ್ರ್ಸ್ ಜೊತೆಗೆ ಹೊರಗೆ ಬಂದು ಕೇಕ್ ಕತ್ತರಿಸುತ್ತಾರೆ.

ವೀಡಿಯೋದಲ್ಲಿ ಕಾಜಲ್ ಅಭಿಮಾನಿಯೊಬ್ಬರು ಕೇಕ್ ತಂದು ಬರ್ತ್‍ಡೇ ಸಾಂಗ್ ಹೇಳಿ ವಿಶ್ ಮಾಡುತ್ತಾರೆ. ಈ ವೇಳೆ ಕೇಕ್ ಕತ್ತರಿಸಿ ಮನೆಯೊಳಗೆ ಹೋಗಿಬಿಡುತ್ತಾರೆ. ಅಷ್ಟೇ ಅಲ್ಲದೇ ಅಭಿಮಾನಿಗಳಲ್ಲೊಬ್ಬರು ಒಂದು ಪೀಸ್ ಕೇಕ್ ನೀಡುತ್ತಾರೆ. ಆದರೆ ಕಾಜಲ್ ಅದನ್ನು ಸ್ವೀಕರಿಸದೇ ಬೇಡ ಎಂದು ನಿರಾಕರಿಸುವುದನ್ನು ಕಾಣಬಹುದಾಗಿದೆ. ಕಾಜಲ್‍ರ ಈ ವರ್ತನೆ ಕಂಡು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

 

View this post on Instagram

 

A post shared by Viral Bhayani (@viralbhayani)

ಕೆಲವರು ಕಾಜೋಲ್‍ಗೆ ದುರಹಂಕಾರ ಎಂದು ಕಾಮೆಂಟ್ ಮಾಡುತ್ತಿದ್ದರೆ, ಮತ್ತೆ ಕೆಲವರು ನಿಮ್ಮ ಸಮಯ, ಹಣ ಮತ್ತು ಶ್ರಮವನ್ನು ಏಕೆ ವ್ಯರ್ಥಮಾಡಿಕೊಳ್ಳುತ್ತೀರಾ? ಇವರ ಬದಲಾಗಿ ಅನಾಥ ಮಕ್ಕಳ ಹುಟ್ಟುಹಬ್ಬವನ್ನು ಆಚರಿಸುವುದು ಉತ್ತಮ ಎಂದು ಕಾಮೆಂಟ್ ಮಾಡುತ್ತಿದ್ದಾರೆ.  ಇದನ್ನೂ ಓದಿ:ದಿವ್ಯಾ ಉರುಡುಗ ಹೇರ್ ಕಟ್ ಮಾಡಿದ ಅರವಿಂದ್

Source: publictv.in Source link