ED ಅಧಿಕಾರಿಗಳ ಶಾಕ್​​​; ಕುಟುಂಬ ಸಮೇತ ಜಮೀರ್ ರಾಜಸ್ಥಾನ​​ ದರ್ಗಾಗೆ ಹೊರಟಿದ್ಯಾಕೆ?

ED ಅಧಿಕಾರಿಗಳ ಶಾಕ್​​​; ಕುಟುಂಬ ಸಮೇತ ಜಮೀರ್ ರಾಜಸ್ಥಾನ​​ ದರ್ಗಾಗೆ ಹೊರಟಿದ್ಯಾಕೆ?

ಐಎಂಎ ವಚನೆ ಪ್ರಕರಣದಲ್ಲಿ ಹೆಸರು ಕೇಳಿ ಬಂದ ಕೂಡಲೇ ED ಅಧಿಕಾರಿಗಳು ಮಾಜಿ ಸಚಿವ ಮತ್ತು ಕಾಂಗ್ರೆಸ್​ ಶಾಸಕ ಜಮೀರ್​​ ಅಹ್ಮದ್​​ ಖಾನ್​​ ನಿವಾಸದ ಮೇಲೆ ದಾಳಿ ನಡೆಸಿದ್ದರು. ED ಅಧಿಕಾರಿಗಳು ಜಮೀರ್​​ ಅಹ್ಮದ್​​ ಖಾನ್​​​​ರನ್ನು ಸತತ 24 ಗಂಟೆ ವಿಚಾರಣೆಗೆ ಒಳಪಡಿಸಿದ್ದರು. ಈ ಬೆಳವಣಿಗೆ ನಂತರ ಜಮೀರ್​​ ಖಾನ್ ಯಾರನ್ನು ಭೇಟಿ ಮಾಡಿರಲಿಲ್ಲ. ತನ್ನನ್ನು ಭೇಟಿ ಮಾಡಲು ಬಂದಿದ್ದ ಹಲವರನ್ನು ವಾಪಸ್ಸು ಕಳಿಸಿದ್ದರು. ಆದರೀಗ, ಯಾರಿಗೂ ಹೇಳದೆ ಜಮೀರ್​​​ ದರ್ಗಾಗೆ ತರೆಳಿದ್ದಾರೆ.

ಇಂದು ಇಡೀ ಕುಟುಂಬದ ಸಮೇತ ಜಮೀರ್​​​​ ಬೆಂಗಳೂರಿನ ಹೆಚ್.ಎ.ಎಲ್ ವಿಮಾನ ನಿಲ್ದಾಣದಿಂದ ರಾಜಸ್ಥಾನಕ್ಕೆ ಹೊರಟಿದ್ದಾರೆ. ರಾಜಸ್ಥಾನಕ್ಕೆ ಹುಸೇನ್ ಗಿರಿಯ ದರ್ಗಾಕ್ಕೆ ಕುಟುಂಬ ಸದಸ್ಯರ ಜತೆ ಜಮೀರ್​​ ಹೋಗಿದ್ದಾರೆ.

ED ಅಧಿಕಾರಿಗಳ ದಾಳಿಯ ಮೂರು ದಿನಗಳ ನಂತರ ಜಮೀರ್​​​, ವಿಶ್ರಾಂತಿ ಮತ್ತು ನೆಮ್ಮದಿಗಾಗಿ ದರ್ಗಾಗೆ ತೆರಳಿದ್ದಾರೆ ಎನ್ನಲಾಗುತ್ತಿದೆ.

Source: newsfirstlive.com Source link