ಬ್ರಿಟಿಷ್ ರಾಯಭಾರಿಗೆ‌ ಕನ್ನಡ ಕಲಿಸಿದ್ದು ದಿ ವಾಲ್ ರಾಹುಲ್ ದ್ರಾವಿಡ್..!

ಬ್ರಿಟಿಷ್ ರಾಯಭಾರಿಗೆ‌ ಕನ್ನಡ ಕಲಿಸಿದ್ದು ದಿ ವಾಲ್ ರಾಹುಲ್ ದ್ರಾವಿಡ್..!

ಬೆಂಗಳೂರು: ಇತ್ತೀಚೆಗೆ ಭಾರತದ ಬ್ರಿಟಿಷ್​ ರಾಯಭಾರಿ ಅಲೆಕ್ಸ್​​ ಎಲ್ಲಿಸ್​ ಬೆಂಗಳೂರಿಗೆ ಬಂದಿದ್ದರು. ಈ ವೇಳೆ ಮೈಸೂರು ಮಸಾಲೆ ದೋಸೆ ತಿಂದು ಸಖತ್ತಾಗಿದೆ ಎಂದು ಕನ್ನಡದಲ್ಲಿ ಬರೆದುಕೊಂಡಿದ್ದರು. ಜೊತೆಗೆ  ಮುಖ್ಯಮಂತ್ರಿಗಳಿಗೆ ಕನ್ನಡದಲ್ಲಿಯೇ ನಮಸ್ಕಾರ ಎಂದು ಸಂಬೋಧಿಸಿ ಟ್ವೀಟ್​ ಮಾಡಿ ಕನ್ನಡಿಗರ ಮೆಚ್ಚುಗೆಗೆ ಪಾತ್ರರಾಗಿದ್ದು ಗೊತ್ತೇ ಇದೆ.

ಇದನ್ನೂ ಓದಿ: ಮತ್ತೆ ಕನ್ನಡ ಪ್ರೇಮ ಮೆರೆದ ಭಾರತದ ಬ್ರಿಟಿಷ್​ ರಾಯಭಾರಿ.. ಈ ಬಾರಿ ಹೇಳಿದ್ದೇನು?

ಮತ್ತೆ ಬ್ರಿಟಿಷ್​ ರಾಯಭಾರಿ ಅಲೆಕ್ಸ್​​ ಎಲ್ಲಿಸ್​ ಸದ್ಯ ಸುದ್ದಿಯಲ್ಲಿದ್ದು, ಕ್ರಿಕೆಟ್​ ದಂತಹಂಥೆ ರಾಹುಲ್​ ದ್ರಾವಿಡ್​ರಿಂದ ಕನ್ನಡ ಪಾಠ ಕಲಿತಿದ್ದಾರೆ.

ಇದನ್ನೂ ಓದಿ: ಮೈಸೂರು ಮಸಾಲೆ ದೋಸೆಗೆ ಬ್ರಿಟಿಷ್​ ರಾಯಭಾರಿ ಫಿದಾ -‘ಸಖತ್​ ಆಗಿದೆ’ ಅಂತ ಕನ್ನಡದಲ್ಲೇ ಟ್ವೀಟ್​​

ಕ್ರಿಕೆಟ್​ ವಾಲ್​ ಎಂದೆ ಖ್ಯಾತಿಯಾದ ರಾಹುಲ್​ ದ್ರಾವಿಡ್​ರನ್ನು ಭೇಟಿ ಮಾಡಿದ ಬ್ರಿಟಿಷ್​ ರಾಯಭಾರಿ ರಾಹುಲ್​ರಿಂದ ಕನ್ನಡ ಕಲಿಯಲು ಪ್ರಯತ್ನ ಪಟ್ಟಿದ್ದಾರೆ. ಕನ್ನಡದ ಒಂದು ಪದವನ್ನು ನಾನು ಈಗ ರಾಹುಲ್​ರಿಂದ ಕಲಿಯುತ್ತಿದ್ದೇನೆ ಎಂದು ಹೇಳಿದ ಅವರು, ರಾಹುಲ್​ ಹೇಳಿಕೊಟ್ಟ ‘ಬೇಗ ಓಡಿ’ ಪದವನ್ನು ಕನ್ನಡದಲ್ಲಿ ಉಚ್ಛರಿಸಿ ಖುಷಿ ಪಟ್ಟಿದ್ದಾರೆ. ಈ ಸಂದರ್ಭವನ್ನು ಟ್ವೀಟರ್​ನಲ್ಲಿ ಹಂಚಿಕೊಂಡ ಅವರು ನನಗೆ ಕನ್ನಡ ಕಲಿಸಿಕೊಟ್ಟ ಕೋಚ್​ ರಾಹುಲ್​ ದ್ರಾವಿಡ್​ಗಿಂತ ಮತ್ತೊಬ್ಬ ಉತ್ತಮ ಶಿಕ್ಷಕರಿಲ್ಲ ಎಂದಿದ್ದಾರೆ.

Source: newsfirstlive.com Source link