ರಾಜಮೌಳಿಗಾಗಿ ವೃತ್ತಿ ಜೀವನದಲ್ಲಿ ಎಂದೂ ಮಾಡದ ಕೆಲಸದ Jr NTR

ರಾಜಮೌಳಿಗಾಗಿ ವೃತ್ತಿ ಜೀವನದಲ್ಲಿ ಎಂದೂ ಮಾಡದ ಕೆಲಸದ Jr NTR

ಇತ್ತ ಐದೈದು ಭಾಷೆಗಳಲ್ಲಿ RRR ಸಿನಿಮಾದ ಹಾಡುಗಳನ್ನ ಬಿಡುಗಡೆ ಮಾಡಿಸಿ ರಾಜಮೌಳಿ ಆಂಡ್ ಟೀಮ್ ಅತ್ತ ಎಲ್ಲಿ ಹೊಗಿ ಕುಂತಿದೆ ಗೊತ್ತಾ..? ಶೂಟಿಂಗ್ ಮುಗಿದೊಯ್ತು.. ಇನ್ನೇನಿದ್ದರೂ ಹಾಡು-ಪಾಡು ಅಂದಿದ್ದ ಥ್ರಿಬಲ್​ ಆರ್​ ಟೀಮ್​​ ಜೂನಿಯರ್ ಎನ್​.ಟಿ.ಆರ್ ಹತ್ರ ಎಂದೂ ಮಾಡದ ಕೆಲಸವನ್ನ ಮಾಡಿಸಿದ್ದಾರೆ. ಅದೇನ್ ಮಾಡಿಸಿದ್ದಾರೆ? ಅದೆಲ್ಲಿ ಹೋಗಿದ್ದಾರೆ..?

blank

ಒಂದೊಂದೇ ಕುತೂಹಲದ ಕೊಬ್ರಿ ಮಿಠಾಯಿಯಂತಹ ಕಂಟೆಂಟ್​​​ಗಳನ್ನ ಹೊರ ಬಿಡ್ತಾ ಸಮಸ್ತ ಸಿನಿಮಾ ಪ್ರೇಕ್ಷಕ ಕುಲವನ್ನ ತುದಿಗಾಲಿನಲ್ಲಿ ನಿಲ್ಲಿಸಿರೋ ಥ್ರಿಬಲ್ ಆರ್ ತಂಡ ಮತ್ತೆ ಶೂಟಿಂಗ್ ಅಡ್ಡಕ್ಕೆ ಇಳಿದಿದೆ.. ಕೋಟಿ ಕೋಟಿ ಖರ್ಚು ಮಾಡಿ ಬರೋಬ್ಬರಿ ಎರಡೆರಡು ತಿಂಗಳು ಕ್ಲೈಮ್ಯಾಕ್ಸ್ ಭಾಗದ ವಾರ್ ಫೈಟಿಂಗ್ ದೃಶ್ಯಗಳನ್ನ ಚಿತ್ರೀಸಿದ್ದ ರಾಜಮೌಳಿ ಸಾರಥ್ಯದ ಥ್ರಿಬಲ್ ಆರ್ ಗ್ಯಾಂಗ್ ದೂರದೊಂದು ದೇಶದಲ್ಲಿ ಕ್ಯಾಮೆರಾ ಹಿಡಿದು ಕಾಲ ಕಳೆಯುತ್ತಿದೆ.

ವಿದೇಶದಲ್ಲಿ ಶೂಟಿಂಗ್​​ ಮಾಡ್ತಿರೋ RRR ತಂಡ..
ಯಾವ ಸೀನ್ ಶೂಟ್ ಮಾಡ್ತಿದೆ ಮೌಳಿ ಗ್ಯಾಂಗ್..?

ಮೊನ್ನ್ ಮೊನ್ನೆ ಐದೈದು ಭಾಷೆಗಳಲ್ಲಿ ದೋಸ್ತಿ ಸಾಂಗ್ ಬಿಟ್ಟು ಇಂಪ್ರೇಸ್ ಮಾಡಿದ್ದ ರೌದ್ರ ರಣ ರುಧಿರ ಟೀಮ್.. ಈಗ ಉಕ್ರೇನ್ ದೇಶದಲ್ಲಿದೆ. ರಾಜಮೌಳಿ ಆಂಡ್ ಟೀಮ್ ಉಕ್ರೆನ್ ದೇಶದಲ್ಲಿ ಬೀಡು ಬಿಟ್ಟಿದೆ.. ಥ್ರಿಬಲ್ ಆರ್ ಸಿನಿಮಾದ ಕ್ಲೈಮ್ಯಾಕ್ಸ್ ಒಂದರ ದೃಶ್ಯವನ್ನ ಉಕ್ರೇನ್​ ಸೇರೆ ಹಿಡಿಯಲಾಗುತ್ತಿದೆ. ಈ ಸೀನ್​​​ನಲ್ಲಿ ಕೋಮರಾಮ್ ಭೀಮ ಪಾತ್ರದಾರಿ ಜೂನಿಯರ್ ಎನ್​.ಟಿ.ಆರ್, ಅಲ್ಲುರಿ ಸೀತಾರಾಮ ರಾಜು ರಾಮ್ ಚರಣ್ ಆ್ಯಕ್ಟ್ ಮಾಡ್ತಿದ್ದಾರೆ..

blank

ಉಕ್ರೇನ್ ದೇಶದಲ್ಲಿರೋ ಥ್ರಿಬಲ್ ಆರ್ ತಂಡದ ನಾಯಕರು ಶೂಟಿಂಗ್ ಸೆಟ್​​ನಲ್ಲಿರೋ ಫೋಟೋಸ್​​ಗಳನ್ನ ಒಂದೊದಾಗಿಯೇ ಹೊರ ಬಿಟ್ಟು ಚಿತ್ರಜಗತ್ತಿಗೆ ಕ್ಯೂರಿಯಾಸಿಟಿ ಹುಟ್ಟಿಸುತ್ತಿದೆ. ಅಂತಹ ಫೋಟೋಗಲ್ಲಿ ಒಂದು ಇಂಟರೆಸ್ಟಿಂಗ್ ಜೂನಿಯರ್ ಎನ್​.ಟಿ.ಆರ್ ಹೊರ ಬಿಟ್ಟಿರೋ ಫೋಟೋಸ್​​​​. ತಾರಾಕ್ ರಾಮ್ ಫಸ್ಟ್ ಟೈಮ್ ತಮ್ಮ ಜೀವನದಲ್ಲಿ ಎಂದೂ ಮಾಡದ ಕೆಲಸವನ್ನ ಥ್ರಿಬಲ್ ಆರ್ ಗಾಗಿ ಮಾಡಿದ್ದಾರಂತೆ..

ಮೌಳಿಗಾಗಿ ಎಂದೂ ಮಾಡದ ಕೆಲಸ ಮಾಡಿದ್ರಾ ತಾರಕ್..!
ಜೂನಿಯರ್ ಎನ್​.ಟಿ.ಆರ್ ಸೋಶಿಯಲ್ ಸಮುದ್ರದ ದಡದಲ್ಲಿ ಒಂದು ಇಂಟ್ರಸ್ಟಿಂಗ್ ಸಂದೇಶದ ಜೊತೆ ಎರಡು ಫೋಟೋವನ್ನ ಹೊರ ಬಿಟ್ಟಿದ್ದಾರೆ.. ಈ ಹಿಂದೆ ತನ್ನ ವೃತ್ತಿ ಜೀವನದಲ್ಲಿ ಎಂದು ಮಾಡದ ಕೆಲಸವನ್ನ ಥ್ರಿಬಲ್ ಆರ್​ಗಾಗಿ ಮಾಡಿದ್ದಾರಂತೆ ತಾರಕ್​.. ಅದೇನು ಅನ್ನೋದಕ್ಕೆ ಉತ್ತರ ಐಡಿ ಕಾರ್ಡ್​.. ಫಸ್ಟ್ ಟೈಮ್ ಐಡಿ ಕಾರ್ಡ್ ಹಾಕೊಂಡು ತಮ್ಮದೆ ಸಿನಿಮಾ ಸೆಟ್​​ನಲ್ಲಿ ಓಡಾಡಿದ್ದಾರಂತೆ ಎನ್​​ಟಿಆರ್​. ಈ ವಿಚಾರವನ್ನ ಹಂಚಿಕೊಂಡಿರೋ ತಾರಕ್ ರಾಮ್ ‘‘ನನ್ನ ವೃತ್ತಿ ಜೀವನದಲ್ಲಿ ಫಸ್ಟ್ ಟೈಮ್ ಸಿನಿಮಾ ಸೆಟ್​​​ನಲ್ಲಿ ಐಡಿ ಕಾರ್ಡ್ ಹಾಕಿದ್ದೇನೆ’’ ಎಂದು ಟ್ವೀಟ್ ಸಂದೇಶ ಸಾರಿದ್ದಾರೆ.

blank

ಒಟ್ಟಿನಲ್ಲಿ ಥ್ರಿಬಲ್ ಆರ್ ತಂಡ ಹಿಂದೆಂದಿಗಿಂತಲೂ ವೇಗವಾಗಿ ಪ್ರಚಾರ ಪ್ಲಸ್ ಸಿನಿಮಾ ಕೆಲಸವನ್ನ ಅದ್ದೂರಿಯಾಗಿ ಮಾಡ್ತಿದೆ ರಾಜಮೌಳಿ ಸಿನಿ ಗ್ಯಾಂಗ್​​.. ಮುಂಬವರು ಅಕ್ಟೋಬರ್ 13ನೇ ತಾರೀಖ್ ರೌದ್ರ ರಣ ರುಧಿರ ಸಿನಿಮಾ ಪ್ರೇಕ್ಷಕರ ಮುಂದೆ ಬರಲಿದೆ

Source: newsfirstlive.com Source link