ಖಾತೆ ಹಂಚಿಕೆ ಬೆನ್ನಲ್ಲೇ ಸಚಿವ ನಿರಾಣಿ-ಶೆಟ್ಟರ್​​​​ ಭೇಟಿ; ಹಲವು ಚರ್ಚೆ

ಖಾತೆ ಹಂಚಿಕೆ ಬೆನ್ನಲ್ಲೇ ಸಚಿವ ನಿರಾಣಿ-ಶೆಟ್ಟರ್​​​​ ಭೇಟಿ; ಹಲವು ಚರ್ಚೆ

ಹುಬ್ಬಳ್ಳಿ: ಸಿಎಂ ಬಸವರಾಜ್​​ ಬೊಮ್ಮಾಯಿ ಮಿನಿಸ್ಟರ್ಸ್​ ಖಾತೆ ಹಂಚಿಕೆ ಮಾಡಿದ ಬೆನ್ನಲ್ಲೇ ನೂತನ ಸಚಿವ ಮುರುಗೇಶ್‌ ನಿರಾಣಿ ಮಾಜಿ ಸಿಎಂ ಜಗದೀಶ್​​ ಶೆಟ್ಟರ್​​​ ಅವರನ್ನು ಭೇಟಿ ಮಾಡಿರುವುದು ರಾಜ್ಯ ರಾಜಕೀಯದಲ್ಲಿ ಭಾರೀ ಕುತೂಹಲ ಮೂಡಿಸಿದೆ. ಇಂದು ಹುಬ್ಬಳ್ಳಿಯಲ್ಲಿರುವ ಜಗದೀಶ್​​ ಶೆಟ್ಟರ್​​ ನಿವಾಸಕ್ಕೆ ಭೇಟಿ ನೀಡಿದ್ದ ನಿರಾಣಿ ಮಹತ್ವದ ಮಾತುಕತೆ ನಡೆಸಿದರು.

ಮಾಜಿ ಮುಖ್ಯಮಂತ್ರಿ ಜಗದೀಶ್​​ ಶೆಟ್ಟರ್​​ ಅವರೊಂದಿಗೆ ಸುಮಾರು ಒಂದು ಗಂಟೆಗಳ ಕಾಲ ನಿರಾಣಿ ಮಾತುಕತೆ ನಡೆಸಿದರು. ಸಚಿವರಾದ ಬಳಿಕ ಮೊದಲ ಬಾರಿಗೆ ಭೇಟಿಯಾಗಿ ನಿರಾಣಿ ಜಗದೀಶ್​ ಶೆಟ್ಟರ್​​​ ಆಶೀರ್ವಾದ ಪಡೆದರು.

ಇದನ್ನೂ ಓದಿ: ED ದಾಳಿ ಶಾಕ್​​​; ಕುಟುಂಬ ಸಮೇತ ಜಮೀರ್ ರಾಜಸ್ಥಾನ​​ ದರ್ಗಾಗೆ ಹೊರಟಿದ್ಯಾಕೆ?

ಈ ಸಂಬಂಧ ಸುದ್ದಿಗಾರರೊಂದಿಗೆ ಮಾತಾಡಿದ ನಿರಾಣಿ, ಬಿಜೆಪಿ ಹಿರಿಯ ನಾಯಕ ಶೆಟ್ಟರ್​​ ನಮ್ಮ ಮಾರ್ಗದರ್ಶಕರು. 2023ರಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಇದಕ್ಕೆ ಜಗದೀಶ್ ಶೆಟ್ಟರ್ ಸಹಕಾರ ಬೇಕು. ಶೆಟ್ಟರ್​​ಗೆ ಸ್ಥಾನಮಾನ ಕೊಡಿ ಎಂದು ಹೇಳುವಷ್ಟು ದೊಡ್ಡವರು ನಾವಲ್ಲ. ನಮ್ಮ ಪಕ್ಷ ಎಂದಿಗೂ ದೊಡ್ಡವರನ್ನು ಕಡೆಗಣಿಸಿಲ್ಲ ಎಂದರು.

Source: newsfirstlive.com Source link