ಸಂಕಷ್ಟದಲ್ಲೂ ಪ್ರಮಾಣಿಕತೆ ಮೆರೆದ ಬೆಂಗಳೂರಿಗರು; BBMPಗೆ ಹರಿದು ಬಂತು ಕೋಟಿ ಕೋಟಿ ಹಣ

ಸಂಕಷ್ಟದಲ್ಲೂ ಪ್ರಮಾಣಿಕತೆ ಮೆರೆದ ಬೆಂಗಳೂರಿಗರು; BBMPಗೆ ಹರಿದು ಬಂತು ಕೋಟಿ ಕೋಟಿ ಹಣ

ಬೆಂಗಳೂರು: ಕೋವಿಡ್ ಆರ್ಥಿಕ ಸಂಕಷ್ಟದ ನಡುವೆಯೂ ಬಿಬಿಎಂಪಿಗೆ ಆಸ್ತಿ ತೆರಿಗೆ ಹರಿದು ಬಂದಿದೆ. ಕೋವಿಡ್​ ಕಾಲಘಟ್ಟದಲ್ಲಿಯೂ ಬಿಬಿಎಂಪಿಯಲ್ಲಿ ದಾಖಲೆ ಪ್ರಮಾಣದ ಆಸ್ತಿ ತೆರಿಗೆ ಸಂಗ್ರಹವಾಗಿದೆ. ಕೊರೊನಾ ಕಾಲದಲ್ಲಿ ದೈನಂದಿನ ಜೀವನವನ್ನೂ ನಡೆಸಲು ಪರದಾಡಬೇಕಿದ್ದ ಸ್ಥಿತಿಯಲ್ಲಿ ಬೆಂಗಳೂರು ಜನ ಕೋವಿಡ್ ಆರ್ಥಿಕ ಸಂಕಷ್ಟದ ನಡುವೆಯೂ ತೆರಿಗೆ ಪಾವತಿಸೋದನ್ನ ಮರೆತಿಲ್ಲ.

ಕೇವಲ ನಾಲ್ಕು ತಿಂಗಳಲ್ಲಿ ಬೆಂಗಳೂರಿಗರು ಕೋಟಿ ಲೆಕ್ಕದಲ್ಲಿ ಆಸ್ತಿ ತೆರಿಗೆ ಪಾವತಿಸಿದ್ದು ಆರ್ಥಿಕ ವರ್ಷದ ಆರಂಭದ 4 ತಿಂಗಳಲ್ಲೇ ಶೇ.75ರಷ್ಟು ತೆರಿಗೆ ಪಾವತಿಸಿದ ಸಿಲಿಕಾನ್ ಸಿಟಿ ಮಂದಿ ಬಿಬಿಎಂಪಿ ಆರ್ಥಿಕ ಸಂಕಷ್ಟ ಎದುರಿಸುವದನ್ನು ತಪ್ಪಿಸಿದೆ. 2021 -22ರಲ್ಲಿ 3500 ಕೋಟಿ ಆಸ್ತಿ ತೆರಿಗೆ ವಸೂಲಿಗೆ ಟಾರ್ಗೆಟ್ ಇಟ್ಟುಕೊಂಡಿದ್ದ ಪಾಲಿಕೆ ಈವರೆಗೆ 1915.18 ಕೋಟಿ ತೆರಿಗೆ ಮೊತ್ತವನ್ನ ಸಂಗ್ರಹಿಸಿ ಆ ಮೂಲಕ ಹಿಂದಿನ ಎಲ್ಲಾ ದಾಖಲೆಗಳನ್ನ ಬ್ರೇಕ್ ಮಾಡಿದೆ.

ಇದನ್ನೂ ಓದಿ: ಸಿಲಿಕಾನ್​ ಸಿಟಿಗೆ ಕ್ಲಸ್ಟರ್ ಕೇಸ್​ ಕಂಟಕ.. ವ್ಯಾಕ್ಸಿನೇಷನ್​ಗೆ ವೇಗ ಹೆಚ್ಚಿಸಲು ಪ್ಲಾನ್

ಆರಂಭದ ನಾಲ್ಕೇ ತಿಂಗಳಲ್ಲಿ ಎರಡು ಸಾವಿರ ಕೋಟಿ ಸಮೀಪ ತಲುಪಿದ ತೆರಿಗೆ ವಸೂಲಿ ಕಳೆದ ಬಾರಿಗಿಂತ 111 ಕೋಟಿ ಹೆಚ್ಚು ಆಸ್ತಿ ತೆರಿಗೆ ಸಂಗ್ರಹ ಮಾಡಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 18 ಲಕ್ಷ ಆಸ್ತಿಗಳಿದ್ದು ಜುಲೈ ಅಂತ್ಯಕ್ಕೆ 1915 ಕೋಟಿ ಪಾವತಿಯಾಗಿದ್ದು, ಮಹದೇವಪುರ ವಲಯದಲ್ಲಿ ಅತೀ‌ ಹೆಚ್ಚು ಪ್ರಾಪರ್ಟಿ ಟ್ಯಾಕ್ಸ್ ಸಂಗ್ರಹವಾಗಿದೆ.

blank

ಇದನ್ನೂ ಓದಿ:  ಮೆಟ್ರೋ ಪ್ರಯಾಣಿಕರೇ; ನಾಳೆಯಿಂದ ಮೆಟ್ರೋ ಸಂಚಾರದಲ್ಲಿ ಬದಲಾವಣೆ.. ಇಲ್ಲಿದೆ ಡೀಟೇಲ್ಸ್

Source: newsfirstlive.com Source link