ಬದಲಾವಣೆ ದೃಷ್ಟಿಯಿಂದ ಹೊಸಬರಿಗೆ ಕೆಲವು ಮಹತ್ವದ ಖಾತೆ -ಬೊಮ್ಮಾಯಿ ಸ್ಪಷ್ಟನೆ

ಬದಲಾವಣೆ ದೃಷ್ಟಿಯಿಂದ ಹೊಸಬರಿಗೆ ಕೆಲವು ಮಹತ್ವದ ಖಾತೆ -ಬೊಮ್ಮಾಯಿ ಸ್ಪಷ್ಟನೆ

ಬೆಂಗಳೂರು: ಸಿಎಂ ಬಸವರಾಜ ಬೊಮ್ಮಾಯಿ ಅವರು ಕೊನೆಗೂ ನೂತನ ಸಚಿವರಿಗೆ ಜವಾಬ್ದಾರಿಯನ್ನ ನೀಡಿದ್ದಾರೆ. ಬಿಎಸ್ ಯಡಿಯೂರಪ್ಪ ರಾಜೀನಾಮೆ ಹಿನ್ನೆಲೆಯಲ್ಲಿ ನೂತನ ಸಿಎಂ ಆಗಿ ಬಸವರಾಜ್ ಬೊಮ್ಮಾಯಿ ಅವರು ಜುಲೈ 28 ರಂದು ಪ್ರಮಾಣವಚನ ಸ್ವೀಕಾರ ಮಾಡಿದ್ದರು. ಬಳಿಕ ಅಂದ್ರೆ ಆಗಸ್ಟ್ 4 ರಂದು ಸಚಿವ ಸಂಪುಟ ರಚನೆ ಮಾಡಿದ್ದರು. ಈ ವೇಳೆ ಪ್ರಮಾಣವಚನ ಸ್ವೀಕಾರ ಮಾಡಿದ 29 ಮಂದಿಗೂ ಇದೀಗ ಖಾತೆಗಳನ್ನ ಹಂಚಿಕೆ ಮಾಡಿದ್ದು ಅಲ್ಲಲ್ಲಿ ಅಸಮಾಧಾನದ ಹೊಗೆ ಏಳಲು ಆರಂಭಿಸಿದೆ.

ನೂತನ ಸಂಪುಟದಲ್ಲಿ ಹೊಸಬರಿಗೆ ಮಹತ್ವದ ಖಾತೆ ಹಂಚಿರುವ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಈ ಬಾರಿಯ ಸಂಪುಟದಲ್ಲಿ ಬದಲಾವಣೆ ತರುವ ದೃಷ್ಟಿಯಿಂದ ಹೊಸಬರಿಗೆ ಖಾತೆ ಹಂಚಿಕೆ ಮಾಡಲಾಗಿದೆ ಎಂದಿದ್ದಾರೆ.

ಇದನ್ನೂ ಓದಿ: BREAKING ನೂತನ ಸಚಿವರಿಗೆ ಖಾತೆ ಹಂಚಿಕೆ; ಯಾರಿಗೆ ಯಾವ ಜವಾಬ್ದಾರಿ..?

ಇನ್ನು ಸಚಿವ ಆನಂದ್​ಸಿಂಗ್​ ಸಚಿವ ಸ್ಥಾನಕ್ಕೆ ಅಸಮಾಧಾನ ವ್ಯಕ್ತ ಪಡಿಸಿದ ಕುರಿತು ಪ್ರತಿಕ್ರಿಯಿಸಿದ ಅವರು.. ಅವರೆಲ್ಲ ನನ್ನ ಆತ್ಮೀಯರು. ಅವರನ್ನು ಕರೆದು ಮಾತನಾಡಿ ಗೊಂದಲವನ್ನ ನಿವಾರಿಸುತ್ತೇನೆ ಎಂದರು. ದೇವೇಗೌಡರ ಮನೆಗೆ ಸಿಎಂ ಹೋಗಿದ್ದರಿಂದ ನನಗೆ ಸಚಿವ ಸ್ಥಾನ ಕೈ ತಪ್ಪಿದೆ ಎಂಬ ಪ್ರೀತಂಗೌಡ ಅಸಮಾಧಾನ ವಿಚಾರ ಹಿನ್ನೆಲೆ ಪ್ರತಿಕ್ರಿಯಿಸಿ ನಾನು ಅವರೊಂದಿಗೆ ಮಾತನಾಡಿ ಎಲ್ಲ ಅಸಮಾಧಾನಗಳನ್ನೂ ನಿವಾರಿಸುತ್ತೇನೆ ಎಂದಿದ್ದಾರೆ.

ಇದನ್ನೂ ಓದಿ: ಇಂಥದ್ದೇ ಖಾತೆ ಬೇಕು ಅಂದ್ರು ಕೊಡಲಿಲ್ಲ; ಹೀಗೆ ಸಿಎಂ ವಿರುದ್ಧ ಅಸಮಾಧಾನ ಹೊರಹಾಕಿದ ಆನಂದ್​​ ಸಿಂಗ್​​

Source: newsfirstlive.com Source link