ನೀಲಿ ಚಿತ್ರ​ ಕೇಸ್​: ರಾಜ್​​ ಕುಂದ್ರಾಗೆ ಸದ್ಯಕ್ಕಿಲ್ಲ ರಿಲೀಫ್; ಜೈಲೇ ಗತಿ

ನೀಲಿ ಚಿತ್ರ​ ಕೇಸ್​: ರಾಜ್​​ ಕುಂದ್ರಾಗೆ ಸದ್ಯಕ್ಕಿಲ್ಲ ರಿಲೀಫ್; ಜೈಲೇ ಗತಿ

ಅಶ್ಲೀಲ ಚಿತ್ರ ನಿರ್ಮಾಣ ಆರೋದಪದಲ್ಲಿ ಜೈಲು ಸೇರಿದ ಬಾಲಿವುಡ್​​ ನಟಿ ಶಿಲ್ಪಾ ಶೆಟ್ಟಿ ಪತಿ ಮತ್ತು ಉದ್ಯಮಿ ರಾಜ್​​ ಕುಂದ್ರಾರನ್ನು ಕೂಡಲೇ ಬಿಡುಗಡೆ ಮಾಡಿ ಎಂದು ಸಲ್ಲಿಸಲಾಗಿದ್ದ ಅರ್ಜಿಯನ್ನು ಬಾಂಬೆ ಹೈಕೋರ್ಟ್​​ ತಿರಸ್ಕರಿಸಿದೆ. ತಮ್ಮ ಬಂಧನವನ್ನು ಪ್ರಶ್ನಿಸಿ ರಾಜ್​​ ಕುಂದ್ರಾ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ ಬಾಂಬೆ ಹೈಕೋರ್ಟ್​, ನಿಮ್ಮ ಬಂಧನ ತಪ್ಪೇನಲ್ಲ ಎಂದಿದೆ.

ಈ ಹಿಂದೆ ಜುಲೈ 27ನೇ ತಾರೀಕು ನ್ಯಾಯಲಯವೂ ರಾಜ್ ಕುಂದ್ರಾಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿತ್ತು. ಈ ಬಂಧನ ಪ್ರಶ್ನಿಸಿ ಕೂಡಲೇ ಬಿಡುಗಡೆ ಮಾಡಿ ಎಂದು ಬಾಂಬೆ ಹೈಕೋರ್ಟ್​ಗೆ ಆರೋಪಿ ರಾಜ್​ ಕುಂದ್ರಾ ಮತ್ತು ರಿಯಾನ್ ಥಾರ್ಪೆ ಮೇಲ್ಮನವಿ ಸಲ್ಲಿಸಿದ್ದರು.

blank

ರಾಜ್​​ ಕುಂದ್ರಾ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್​, ನಿಮ್ಮ ಬಂಧನ ಪ್ರಕ್ರಿಯೆ ಸರಿಯಾಗಿ ನಡೆದಿದೆ. ಸೆಷನ್​​ ನ್ಯಾಯಲಯ ನಿಮ್ಮನ್ನು ಪೊಲೀಸರ ಕಸ್ಟಡಿಗೆ ನೀಡಿದರಲ್ಲಿ ಯಾವುದೇ ದೋಷವಿಲ್ಲ ಎಂದು ತೀರ್ಪು ನೀಡಿದೆ.

11 ಮಂದಿ ಬಂಧನ
ಇದುವರೆಗೂ ರಾಜ್​ ಕುಂದ್ರಾ ಸೇರಿದಂತೆ 11 ಮಂದಿಯನ್ನು ಪೋರ್ನ್​​ ಸಿನಿಮಾ ನಿರ್ಮಾಣ ಆರೋಪ ಕೇಸ್​​​ ಸಂಬಂಧ ಪೊಲೀಸರು ಬಂಧಿಸಿದ್ದಾರೆ. ಮುಂಬೈ ಪೊಲೀಸರು ಇನ್ನೂ ವಿಚಾರಣೆ ಮುಂದುವರಿಸಿದ್ದಾರೆ.

Source: newsfirstlive.com Source link