ಬಿಗ್​​ಬಾಸ್​ ಮನೆಯಲ್ಲಿ ಹಬ್ಬದ ಸಡಗರ.. ಹೇಗಿದೆ ಫಿನಾಲೆ ತಯಾರಿ..?

ಬಿಗ್​​ಬಾಸ್​ ಮನೆಯಲ್ಲಿ ಹಬ್ಬದ ಸಡಗರ.. ಹೇಗಿದೆ ಫಿನಾಲೆ ತಯಾರಿ..?

ಬಿಗ್​ ಬಾಸ್​ ಫಿನಾಲೆಗೆ ಅದ್ದೂರಿ ವೇದಿಕೆ ಸಜ್ಜಾಗಿದ್ದು, ಸಖತ್​ ಕಲರ್​ಫುಲ್​ ಇರಲಿದೆ ಇಂದಿನ ಸಂಚಿಕೆ. ಇನ್ನೂ 120ಕ್ಕೂ ಹೆಚ್ಚು ದಿನಗಳನ್ನ ಪೂರೈಸಿ, ಫಿನಾಲೆ ಹಂತ ತಲುಪಿರುವ ಟಾಪ್​ ಐದು ಸ್ಪರ್ಧಿಗಳ ಖುಷಿ ಒಂದುಕಡೆಯಾದ್ರೆ ಟ್ರೋಫಿ ಗೆಲ್ಲುವ ಕನಸು ಮತ್ತೊಂದು ಕಡೆ.

ಸಾಕಷ್ಟು ಎಳುಬೀಳುಗಳನ್ನ ಎದುರಿಸಿ ಟಾಪ್​ ಫೈವ್​ಗೆ ಬಂದಿರುವ ಮಂಜು ಪಾವಗಡ, ಅರವಿಂದ್​ ಕೆ.ಪಿ, ವೈಷ್ಣವಿ, ಪ್ರಶಾಂತ್​ ಹಾಗೂ ದಿವ್ಯಾ ಉರುಡುಗ ತಮ್ಮದೇ ಆದ ವಿಭಿನ್ನ ವ್ಯಕ್ತಿತ್ವಗಳಿಂದ ಜನರ ಮನಸನ್ನ ಗೆದ್ದಿದ್ದಾರೆ. ಆದರೆ ಗೆಲುವಿನ ಗರಿ ಒಬ್ಬರಿಗೆ ಮಾತ್ರ ಸೀಮಿತವಾಗಿದ್ದು, ಇಷ್ಟು ದಿನಗಳ ಶ್ರಮಕ್ಕೆ ನಾಳೆ ಉತ್ತರ ಸಿಗಲಿದೆ.

blank

ಇನ್ನೂ ಇಂದಿನ ಸಂಚಿಕೆಯಲ್ಲಿ ಇಬ್ಬರು ಎಲಿಮಿನೇಟ್​ ಆದ್ರೆ, ನಾಳಿನ ಸಂಚಿಕೆಯಲ್ಲಿ ಒಬ್ಬರು ಮನೆಯಿಂದ ಹೊರ ಬರಲಿದ್ದು, ಕಿಚ್ಚನ ಲೆಫ್ಟ್​ ರೈಟ್​ ನಿಲ್ಲುವವರು ಯಾರು ಎಂಬ ಕೂತುಹಲ ಮೂಡಿಸಿದೆ. ಸೋಶಿಯಲ್​ ಮಿಡಿಯಾದಲ್ಲಿ ಎಲ್ಲಾ ಸ್ಪರ್ಧಿಗಳ ಅಭಿಮಾನಿಗಳ ಪ್ರಮೋಶನ್​ ಜೋರಾಗಿದ್ದು ಇತ್ತ ಸ್ಪರ್ಧಿಗಳ ಎದೆಯಲ್ಲಿ ಢವಢವ ಶುರುವಾಗಿದೆ.

ಮಂಜು ಪಾವಗಡ ಗೆಲ್ಲಬಹುದು ಎಂದು ಒಂದು ವರ್ಗದ ಅನಿಸಿಕೆಯಾದ್ರೆ, ಮತ್ತೊಂದು ಕಡೆ ಅರವಿಂದ್​ ಗೆಲ್ಲುತ್ತಾರೆ ಎಂಬ ಕೂಗು ಕೇಳಿ ಬರುತ್ತಿದೆ. ದಿವ್ಯಾ ಉರುಡುಗ​, ವೈಷ್ಣವಿ ಗೌಡ ಹಾಗೂ ಪ್ರಶಾಂತ್​ ಸಂಬರಗಿ ಕೂಡ ರೇಸ್​ನಲ್ಲಿದ್ದಾರೆ.

blank

ಸ್ಪರ್ಧಿಗಳು ಅವರದ್ದೇ ಆದ ಪ್ಲಸ್​ ಮೈನಸ್​ ಹೊಂದಿದ್ದು ಇಷ್ಟು ದಿನಗಳ ಆಟದ ಶೈಲಿ ಅಭಿಪ್ರಾಯಗಳನ್ನ ನೋಡೋದಾದ್ರೆ ಟಾಪ್​ ಥ್ರೀನಲ್ಲಿ ಮಂಜು, ಅರವಿಂದ್​ ಹಾಗೂ ವೈಷ್ಣವಿ ನಿಲ್ಲುವ ಹೆಚ್ಚು ಚಾನ್ಸ್​ ಇದೆ. ಆದರೆ ಬಿಗ್​ ಬಾಸ್​ ಮನೆಯಲ್ಲಿ ಲೆಕ್ಕಾಚಾರಗಳು ನಡೆಯುವುದಿಲ್ಲ ಎಂಬುವುದು ಸಾಕಷ್ಟು ಬಾರಿ ಪ್ರೂವ್​ ಆಗಿದ್ದು, ಏನ್​ ಬೇಕಾದ್ರೂ ಆಗ್ಬಹುದು.

ಇದನ್ನೂ ಓದಿ: ಪ್ರಶಾಂತ್ ಸಂಬರಗಿಯೊಳಗೆ ‘ವೈಲ್ಡ್ ಟೈಗರ್’ ಇದೆ- ದಿವ್ಯಾ ಉರುಡುಗ ಹೀಗಂದಿದ್ದೇಕೆ..?

ಸಾಕಷ್ಟು ಅಡೆತಡೆಗಳನ್ನ ದಾಟಿ ಬಿಗ್​ ಬಾಸ್​ ಸೀಸನ್​ 8 ಯಶಸ್ವಿಯಾಗಿ ಮುಕ್ತಾಯದ ಹಂತಕ್ಕೆ ಬಂದಿದೆ. ಕಾರ್ಯಕ್ರಮಕ್ಕೆ ಮತ್ತಷ್ಟು ಮೇರಗು ನೀಡಲು ಸಾಂಡಲ್​ವುಡ್​ ಸ್ಟಾರ್​ಗಳ ಜಬರ್ದಸ್ತ್​ ಡ್ಯಾನ್ಸ್​ ಪರ್ಫಾರ್ಮೆನ್ಸ್​ ಜೊತೆಗೆ ಇಪ್ಪತ್ತೂ ಸ್ಪರ್ಧಿಗಳನ್ನ ಮತ್ತೋಮ್ಮೆ ಕಣ್ತುಂಬಿಕೊಳ್ಳಬಹುದು.

blank

ಸುದೀಪ್​ ಅವರ ಅದ್ಭುತ ನಿರೂಪಣೆ ಜೊತೆಗೆ ಸ್ಟಾರ್ಸ್​ಗಳ ಬರಪೂರ್​ ಮನರಂಜನೆ. ಟ್ರೋಫಿ ಅನೌನ್ಸಮೆಂಟ್​ ಟೆನ್ಷನ್​. ಬಿಗ್​ ಬಾಸ್​ ಮುಗಿದೇ ಬಿಟ್ಟಿತಲ್ಲ ಎಂಬ ದುಃಖ. ಈ ಎಲ್ಲ ಭಾವನೆಗಳ ಸಮ್ಮಿಶ್ರನದೊಂದಿಗೆ ಬಿಗ್​ ಬಾಸ್​ ಸೀಸನ್​ 8 ಕೊನೆಗೊಳ್ಳುತ್ತಿದ್ದು, ಟ್ರೋಫಿ ಗೆದ್ದು ಗೆಲುವಿನ ನಗು ಬೀರಲಿರುವ ಆ ಅದೃಷ್ಟ ಶಾಲಿ ಯಾರು ಎಂಬ ಕೂತುಹಲಕ್ಕೆ ಒಂದೇ ದಿನದಲ್ಲಿ ತೆರೆ ಬೀಳಲಿದೆ.

ಇದನ್ನೂ ಓದಿ: ಕಿಚ್ಚ ಸುದೀಪ್ ರೈಟ್ ನನ್ನ ಮಗಳು, ಲೆಫ್ಟ್​ನಲ್ಲಿ ಮಂಜು Or ಅರವಿಂದ್​ ಇರ್ತಾರೆ-ದಿವ್ಯಾ ತಾಯಿ

Source: newsfirstlive.com Source link