ಕರ್ನಾಟಕ ಕ್ರಶ್​​​ ರಶ್ಮಿಕಾ ಮಂದಣ್ಣ ಈ ವಿಷ್ಯದಲ್ಲಿ ಮಾತ್ರ ಸೌತ್​​ ಇಂಡಿಯಾಗೆ ನಂಬರ್​​​ 1

ಕರ್ನಾಟಕ ಕ್ರಶ್​​​ ರಶ್ಮಿಕಾ ಮಂದಣ್ಣ ಈ ವಿಷ್ಯದಲ್ಲಿ ಮಾತ್ರ ಸೌತ್​​ ಇಂಡಿಯಾಗೆ ನಂಬರ್​​​ 1

ಕಿರಿಕ್ ಪಾರ್ಟಿ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ರಶ್ಮಿಕಾ ಮಂದಣ್ಣ, ಕೇವಲ 5 ವರ್ಷಗಳಲ್ಲಿ 4 ಭಾಷೆಗಳಲ್ಲಿ ಮಿರಮಿರ ಮಿಂಚ್ತಿದ್ದಾರೆ.. ಅಷ್ಟೇ ಅಲ್ಲ ಶಾರ್ಟ್​ ಟೈಂನಲ್ಲೇ ಕರ್ನಾಟಕದ ಕ್ರಶ್ ಸೌತ್​ ಇಂಡಿಯಾದ ನಟಿಮಣಿಯರಿಗೆ ಸೈಡ್​ ಹೊಡೆದಿದ್ದಾರೆ. ಜೊತೆಗೆ ಸೌತ್ ಇಂಡಿಯಾ ಮತ್ತು ಸ್ಯಾಂಡಲ್​ವುಡ್​ನಲ್ಲೆ ರಶ್ಮಿಕಾನೆ ನಂ1 ನಟಿ ಆಗಿ ಕಂಗೊಳಿಸಿದ್ದಾರೆ. ಅರೆರೆ ಅದ್ಯಾವ ವಿಷ್ಯದಲ್ಲಿ ರಶ್ಮಿಕಾ ಸೌತ್ ಇಂಡಿಯಾದ ಲೇಡಿ ಸ್ಟಾರ್​ಗಳ ಹಿಂದಿಕ್ಕಿದ್ದಾರೆ ಅಂತೀರ.. ಇಲ್ಲದೆ ನೋಡಿ ಆ ಇಂಟ್ರೆಸ್ಟಿಂಗ್ ವಿಷ್ಯ…

blank

ರಶ್ಮಿಕಾ ಮಂದಣ್ಣ ಸೌತ್ ಇಂಡಿಯಾದಲ್ಲಿ ಬಹು ಬೇಡಿಕೆಯ ನಟಿ.. ಸ್ಟಾರ್​ ಡೈರೆಕ್ಟರ್​ಗಳಿಗೆ , ನಿರ್ಮಾಪಕರಿಗೆ, ಅಷ್ಟೇ ಯಾಕೆ ಟ್ರಾಲ್​ ಪೇಜ್​ಗಳಿಗೆ ರಶ್ಮಿಕಾನೆ ಅಚ್ಚು ಮೆಚ್ಚು.. ಇದ್ಯಾವದಕ್ಕು ತಲೆ ಕೆಡಿಸಿಕೊಳ್ಳದೆ ತನ್ನ ಪಾಡಿಗೆ ತನ್ನ ಕೆಲಸ ಮಾಡ್ತಿರುವ ರಶ್ಮಿಕಾಗೆ ಅವಕಾಶಗಳ ಹೂಮಾಲೆ ಸಿಕ್ಕಿದೆ…

blank

ಕನ್ನಡ, ತೆಲುಗು, ತಮಿಳು ಹಿಂದಿ ನಾಲ್ಕು ಭಾಷೆಯಲ್ಲು ರಶ್ಮಿಕಾ ಬಹು ಬೇಡಿಕೆಯ ನಟಿ..ಅಲ್ಲದೆ ಸೋಷಿಯಲ್​ ಮೀಡಿಯಾ ಎಂಬ ಅಂಗೈ ಅರಮೆಯಲ್ಲಿ ರಶ್ಮಿಕಾನೆ ರಾಣಿ.. ಸಾಲು ಸಾಲು ಚಿತ್ರಗಳಲ್ಲಿ ಕೊಡಗಿನ ಕುವರಿ ಮೋಡಿ ಮಾಡಿದ್ದು, ಮಿಲಿಯನ್ ಗಟ್ಟಲೆ ಜನ ರಶ್ಮಿಕಾನ ಇನ್​ಸ್ಟಾಗ್ರಾಂ ನಲ್ಲಿ ಫಾಲೋ ಮಾಡ್ತಿದ್ದಾರೆ…ವಿಶೇಷ ಅಂದ್ರೆ ಸೌತ್ ಇಂಡಿಯಾದ ಸ್ಟಾರ್​ ನಟಿ ಮಣಿಯರಿಗಿಂತ ಅತೀ ಹೆಚ್ಚು ಫಾಲೋವರ್ಸ್​ ಹೊಂದಿದ್ದಾರೆ ಕನ್ನಡದ ಕುವರಿ ರಶ್ಮಿಕಾ…

blank

ಯೆಸ್..ರಶ್ಮಿಕಾ ಇನ್​ಸ್ಟಾಗ್ರಾಂನಲ್ಲಿ ಒಂದಲ್ಲ ಎರಡಲ್ಲ ಬರೋಬರಿ 19.9 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ.ವಿಷ್ಯ ಅಂದ್ರೆ ಇಷ್ಟು ದೊಡ್ಡ ಪ್ರಮಾಣದ ಫಾಲೋವರ್ಸ್​ ಬೇರೆ ಯಾವುದೇ ನಟಿಯರಿಗೆ ಇಲ್ಲ.. ಸಿನಿಮಾಗಳ ಅವಕಾಶ ಹೆಚ್ಚಿದಂತೆ ರಶ್ಮಿಕಾ ಬಳಗವು ಸೋಷಿಯಲ್​ ಮೀಡಿಯಾ ಸಾಮ್ರಾಜ್ಯ ವಿಸ್ತರಿಸುತ್ತ ಹೋಗ್ತಿದೆ..

blank

ಪೊಗರು ಚಿತ್ರದ ನಂತ್ರ ರಶ್ಮಿಕಾ ಕನ್ನಡ ಸಿನಿಮಾಗಳಲ್ಲಿ ಬಣ್ಣ ಹಚ್ಚಿಲ್ಲ.. ಅದರೂ ಸ್ಯಾಂಡಲ್​ವುಡ್​​ನಲ್ಲಿ ಇಂದಿಗೂ ರಶ್ಮಿಕಾನೆ ನಂ1.. ಅದ್ಹೇಗೆ ಅಂದ್ರೆ ಅತೀ ಹೆಚ್ಚು ವೀಕ್ಷಣೆ ಪಡೆದ ಹಾಡುಗಳಲ್ಲಿ ರಶ್ಮಿಕಾ ಅಭಿನಯದ ಚಿತ್ರದ ಹಾಡುಗಳೆ ಇವೆ.. ಪೊಗರು ಚಿತ್ರದ ಖರಾಬು ಹಾಡು 258 ಮಿಲಿಯನ್ ವ್ಯೂಸ್​ ಆಗಿದ್ರೆ.. ರಶ್ಮಿಕಾ ಅಭಿನಯದ ಮೊದಲ ಚಿತ್ರ ಕಿರಿಕ್ ಪಾರ್ಟಿ ಸಿನಿಮಾದ ಬೆಳಗೆದ್ದು ಯಾರ ಮುಖವ ನಾನು ನೋಡಿದೆ ಹಾಡು 104 ಮಿಲಿಯನ್ ಮಂದಿ ನೋಡಿದ್ದಾರೆ.

blank

ರಶ್ಮಿಕಾ ಅಭಿನಯದ ಕನ್ನಡ ಸಿನಿಮಾದ ಹಾಡುಗಳಷ್ಟೇ ಅಲ್ಲ ,ತೆಲುಗು ಚಿತ್ರದ ಹಾಡುಗಳು ಕೂಡ ಸೋಷಿಯಲ್​ ಮೀಡಿಯಾದಲ್ಲಿ ಸಖತ್ ಸೌಂಡ್​ ಮಾಡ್ತಿವೆ.

Source: newsfirstlive.com Source link