ನಗ್ನವಾಗಿದ್ದಾಗ ನನ್ನ ಖಾಸಗಿ ಭಾಗ ತೋರಿಸಿದ್ರು; ರಾಜ್​​ ಕುಂದ್ರಾ ವಿರುದ್ಧ ನಟಿ ಆರೋಪ

ನಗ್ನವಾಗಿದ್ದಾಗ ನನ್ನ ಖಾಸಗಿ ಭಾಗ ತೋರಿಸಿದ್ರು; ರಾಜ್​​ ಕುಂದ್ರಾ ವಿರುದ್ಧ ನಟಿ ಆರೋಪ

ಪೋರ್ನ್​​ ಸಿನಿಮಾ ನಿರ್ಮಾಣ ಆರೋಪ ಪ್ರಕರಣದಲ್ಲಿ ಜೈಲಿನಲ್ಲಿರುವ ಬಾಲಿವುಡ್​​ ನಟಿ ಶಿಲ್ಪಾ ಶೆಟ್ಟಿ ಪತಿ ಮತ್ತು ಉದ್ಯಮಿ ರಾಜ್​​ ಕುಂದ್ರಾ ಬಗ್ಗೆ ಮತ್ತೊಂದು ಅಚ್ಚರಿ ವಿಚಾರವೀಗ ಬೆಳಕಿಗೆ ಬಂದಿದೆ. ರಾಜ್​​​​ ಕುಂದ್ರಾ ಅಶ್ಲೀಲ ಸಿನಿಮಾಗಳಲ್ಲಿ ಸಂಬಂಧಪಟ್ಟವರ ಅನುಮತಿ ಪಡೆಯದೆ ಹಲವು ನಟಿಯರು ಮತ್ತು ಮಾಡೆಲ್​​ಗಳ ಖಾಸಗಿ ಭಾಗಗಳನ್ನು ಬಳಡಿಸಿಕೊಂಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.

blank

 

ಮುಂಬೈ ಪೊಲೀಸರು ರಾಜ್​​ ಕುಂದ್ರಾ ಬಂಧನ ಮಾಡಿದ ಬೆನ್ನಲ್ಲೇ ಹೀಗೆ ಹಲವು ನಟಿಯರು ಮತ್ತು ಮಾಡೆಲ್​​ಗಳು ಗಂಭೀರ ಆರೋಪ ಮಾಡಿದ್ದರು. ಬಾಲಿವುಡ್​​ ನಟಿ ಪೂನಂ ಪಾಂಡೆ ಕೂಡ ರಾಜ್​ ಕುಂದ್ರಾ ವಿರುದ್ಧ ಇಂಥದ್ದೇ ಆರೋಪ ಎಸಗಿದ್ದರು. ಈ ಬೆನ್ನಲ್ಲೀಗ ಮತ್ತೊಬ್ಬರು ಇದೇ ವಿಚಾರವಾಗಿ ಪೊಲೀಸ್​ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ: ನೀಲಿ ಚಿತ್ರ​ ಕೇಸ್​: ರಾಜ್​​ ಕುಂದ್ರಾಗೆ ಸದ್ಯಕ್ಕಿಲ್ಲ ರಿಲೀಫ್; ಜೈಲೇ ಗತಿ

ರಾಜ್​​ ಕುಂದ್ರಾ ವಿರುದ್ಧ ಮತ್ತೋರ್ವ ಸಂತ್ರಸ್ತ ಯುವತಿ ಮುಂಬೈನ ಮಲ್ವಾನಿ ಠಾಣೆಯಲ್ಲಿ ಹೀಗೊಂದು ದೂರು ದಾಖಲಿಸಿದ್ದಾರೆ. ಸಿನಿಮಾ ಶೂಟಿಂಗ್​​ ವೇಳೆ ಕುಂದ್ರಾ ನನ್ನ ಖಾಸಗಿ ಭಾಗಗಳನ್ನು ಬಳಸೋದಿಲ್ಲ ಎಂದು ಭರವಸೆ ನೀಡಿದ್ದರು. ಆದರೆ, ನನ್ನ ಸಿನಿಮಾವನ್ನು ಇಂಟರ್​​ನೆಟ್​ನಲ್ಲಿ ಅಪ್ಲೋಡ್​​ ಮಾಡುವಾಗ ಯಾವುದೇ ಎಡಿಟ್​​ ಮಾಡಿಲ್ಲ. ಬದಲಿಗೆ ನನ್ನ ಖಾಸಗಿ ಭಾಗಗಳನ್ನು ಸಿನಿಮಾದಲ್ಲಿ ಅನುಮತಿ ಪಡೆಯದೆ ಬಳಸಿಕೊಳ್ಳಲಾಗಿದೆ ಎಂದು ಮುಂಬೈ ಪೊಲೀಸರಿಗೆ ನೀಡಿದ ದೂರಿನಲ್ಲಿ ಸಂತ್ರಸ್ತ ಯುವತಿ ಹೇಳಿಕೆ ದಾಖಲಿಸಿದ್ದಾಳೆ.

Source: newsfirstlive.com Source link