ಲ್ಯಾಗ್​ ಮಂಜು ಆಸೆ ಈಡೇರಿಸಿದ ಶಿವಣ್ಣ.. ಬಿಗ್​ಬಾಸ್ ಸ್ಪರ್ಧಿಗಳಿಗೆ ಸ್ಪೆಷಲ್ ವಿಶ್

ಲ್ಯಾಗ್​ ಮಂಜು ಆಸೆ ಈಡೇರಿಸಿದ ಶಿವಣ್ಣ.. ಬಿಗ್​ಬಾಸ್ ಸ್ಪರ್ಧಿಗಳಿಗೆ ಸ್ಪೆಷಲ್ ವಿಶ್

ಬಿಗ್​​ಬಾಸ್ ಫಿನಾಲೆಗೆ ಇನ್ನೇನು ಒಂದೇ ದಿನ ಬಾಕಿ ಇದ್ದು, ಈ ಸಮಯದಲ್ಲಿ ದೊಡ್ಮನೆ ಕುಡಿ ಕರುಣಾಡ ಚಕ್ರವರ್ತಿಯಿಂದ ವಿಶ್​ ಬಂದ್ರೆ ಹೇಗಿರುತ್ತೆ?! ಖುಷಿಯಲ್ಲಿ ಕುಪ್ಪಳಿಸದೇ ಇರಲಾದಿತೆ..? ಬಿಗ್​ ಮನೆಗೆ ಶಿವಣ್ಣ ಎಂಟ್ರಿ ಕೊಟ್ಟಿದ್ದೇ ತಡ ಮನೆಯವರೆಲ್ಲ ಕ್ಷಣ ದಂಗಾದ್ರು.

ಹೌದು, ಬಿಗ್​ ಬಾಸ್​ ಮನೆಯಲ್ಲಿ ಇದುವರೆಗೂ ಈಡೇರದ ಆಸೆ ಯಾವುದಾದ್ರು ಇದ್ರೆ ಕೇಳಬಹುದು ಎಂದು ಬಿಗ್​ ಬಾಸ್​ ದೊಡ್ಡ ಕಿವಿಯೊಂದನ್ನ ಕಳಿಸಿದ್ದರು. ಈ ಕಿವಿಯಲ್ಲಿ ಸ್ಪರ್ಧಿಗಳು ತಮ್ಮ ಆಸೆಯನ್ನ ಹೇಳಿಕೊಳ್ಳಬಹುದಾಗಿತ್ತು.

blank

ಇಂತಹ ಅದ್ಭುತ ಅವಕಾಶ ಸಿಕ್ಕಾಗ ಯಾರು ತಾನೆ ಸುಮ್ನಿರ್ತಾರೆ ಹೇಳಿ? ಬಿಗ್​ ಮನೆಯವ್ರು ತಮ್​ ತಮ್ಮ ಆಸೆಗಳನ್ನ ಹೇಳಿದ್ರು. ಪ್ರಶಾಂತ್​ ಸಂಬರಗಿ ಫ್ಯಾಮೀಲಿ ಫೋಟೋ ಕೇಳಿದ್ರೆ, ವೈಷ್ಣವಿ ಅಮ್ಮನ ವೈಸ್​ ನೋಟ್​ ಕೇಳಿದ್ರು. ಇನ್ನು ಅರವಿಂದ್​ ತಮ್ಮ ಸ್ಪೋರ್ಟ್ಸ್ ಬೈಕ್​ಅನ್ನ ಒಂದ್​ ಸಾರಿ ಬಿಗ್​ ಮನೆಯಲ್ಲಿ ನೋಡ್ಬೇಕು ಅಂದ್ರು. ಇತ್ತ ದಿವ್ಯಾ ಸುರೇಶ್​ ಸ್ನೇಹಿತರ ದಿನಕ್ಕೆ ಮಂಜುಗೆ ಸರ್ಪ್ರೈಸ್ ಕೊಟ್ಟು ಖುಷಿಯಲ್ಲಿ ತೇಲಿದ್ರು.

ಈ ಎಲ್ಲಾ ವಿಶ್​ಗಳಲ್ಲಿ ತುಂಬಾನೆ ಸ್ಪೆಷಲ್​ ಅನಿಸಿದ್ದು ದಿವ್ಯಾ ಉರುಡುಗ ಅವರ ವಿಶ್​. ಕಿಚ್ಚನ ಕೈ ಅಡುಗೆ ಕೇಳಿದ್ರು, ಇದಕ್ಕೆ ಸುದೀಪ್​ ಅಷ್ಟೇ ಪ್ರೀತಿಯಿಂದ ಅಡುಗೆ ಮಾಡಿ ಕೊಟ್ಟು ದೊಡ್ಮನೆಯಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗುವಂತೆ ಮಾಡಿದ್ರು. ಈ ಖುಷಿಯನ್ನ ಅರಗಿಸಿಕೊಳ್ಳುವ ಮೊದಲೇ ಮಂಜು ಅವರ ವಿಶ್​ ಬಿಗ್​ ಸರ್ಪ್ರೈಸ್ ನೀಡಿದೆ.

blank

ಮಂಜು ಪಾವಗಡ, ನನಗೆ ಹ್ಯಾಟ್ರಿಕ್​ ಹೀರೋ ಡಾ.ಶಿವರಾಜಕುಮಾರ್​ ತುಂಬಾ ಇಷ್ಟ. ಸಾಧ್ಯವಾದ್ರೆ ಅವರು ಆಶೀರ್ವಾದ ನನಗೆ ಬೇಕು. ಅವರು ವಿಶ್​ ಮಾಡುವ ಒಂದು ವಿಡಿಯೋ ಕಳುಹಿಸಿ ಅಂತಾ ವಿನಮ್ರವಾಗಿ ಬಿಗ್​ ಬಾಸ್​ಗೆ ಮನವಿ ಮಾಡಿದ್ರು.

ಅಭಿಮಾನಿಗಳ ಪ್ರೀತಿಗೆ ಯಾವತ್ತೂ ಸೋಲುವ ಶಿವಣ್ಣ.. ಮಂಜುಗೆ ವಿಶ್​ ಮಾಡಿ ವಿಡಿಯೋ ಕಳಿಸಿಯೇ ಬಿಟ್ರು. ಮಂಜು ನಿಮಗೆ ಒಳ್ಳೆದಾಗಲಿ ಆಲ್​ ದಿ ಬೆಸ್ಟ್​.. ಫಿನಾಲೆಗೆ ಯಾರ್ಯಾರು ಸೆಲೆಕ್ಟ್​ ಆಗಿದ್ದಿರೋ ಎಲ್ಲರಿಗೂ ಆಲ್​ ದಿ ಬೆಸ್ಟ್​. ಐ ಲವ್​ ಯೂ ಮಂಜು ಅಂತಾ ಒಂದು ಫ್ಲೈಯಿಂಗ್ ಕಿಸ್​ ನೀಡಿದ್ರು ಶಿವಣ್ಣ. ಇದಕ್ಕಿಂತ ದೊಡ್ಡ ಭಾಗ್ಯಾ ಇನ್ನೇನಿದೆ ಹೇಳಿ. ಮಂಜು ಖುಷಿಗೆ ಪಾರವೇ ಇರಲಿಲ್ಲ. ಏನ್​ ಆಗ್ತಿದೆ ಅಂತಾ ಗೊತ್ತಾಗದೇ ಮನೆಯವರು ಆಶ್ಚರ್ಯ, ಸಂಭ್ರಮದಲ್ಲಿ ಮೈಮರೆತಿದ್ರು.

blank

Source: newsfirstlive.com Source link