ಮನೆ ಗೋಡೆ ಕುಸಿದು ಬಿದ್ದು ಬಾಲಕಿ ಸಾವು

ಚಿತ್ರದುರ್ಗ: ಮನೆಯ ಗೋಡೆ ಕುಸಿದು ಬಾಲಕಿ ಸಾವನ್ನಪ್ಪಿರುವ ದುರಂತ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಬಾಣಗೆರೆ ಗ್ರಾಮದಲ್ಲಿ ನಡೆದಿದೆ.

ಹರ್ಷಿತಾ (11) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ಮಳೆಯಿಂದಾಗಿ ನೆನೆದಿದ್ದ ಗೋಡೆ ಕುಸಿದು ಬಿದ್ದು ದುರಂತ ಸಂಭವಿಸಿದೆ. ಮನೆಯಲ್ಲಿ ಮಲಗಿದ್ದ ವೇಳೆ ಹರ್ಷಿತಾ ಸಾವನ್ನಪ್ಪಿದ್ದು, ತಂದೆ ರವಿ(40) ಗಂಭೀರವಾಗಿ ಗಾಯಗೊಂಡಿದ್ದಾರೆ. ಆದರೆ ಅದೃಷ್ಟವಶಾತ್ ತಾಯಿ ಕವಿತಾ(35), ಮತ್ತೋರ್ವ ಪುತ್ರಿ ಅಮೂಲ್ಯ ಘಟನೆಯಲ್ಲಿ ಪಾರಾಗಿದ್ದಾರೆ. ಈ ದುರಂತ ಹೊಳಲ್ಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜರುಗಿದೆ.

ಇದೀಗ ಈ ವಿಷಯ ತಿಳಿದು ಕೇಂದ್ರ ಸಚಿವರಾದ ಎ.ನಾರಾಯಣಸ್ವಾಮಿರವರು ಚಿತ್ರುದುರ್ಗ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿ ಮೃತರ ಕುಟುಂಬಕ್ಕೆ ಪ್ರಕೃತಿ ವಿಕೋಪದಡಿ ಪರಿಹಾರ ನೀಡಿ ಈ ಕೂಡಲೇ ತುರ್ತಾಗಿ ವಸತಿ ಮಂಜೂರು ಮಾಡಲು ಸೂಚಿಸಿದ್ದಾರೆ. ಅಲ್ಲದೇ ಮೃತರ ಕುಟುಂಬಕ್ಕೆ ಇಪ್ಪತು ಸಾವಿರ ರೂಪಾಯಿಗಳನ್ನು ವೈಯಕ್ತಿಕವಾಗಿ ಮೃತರ ಕುಟುಂಬಕ್ಕೆ ನೀಡಲು ಹೊಳಲ್ಕೆರೆ ತಾಲೂಕಿನ ಬಿಜೆಪಿ ಮಂಡಲ ಅಧ್ಯಕ್ಷರಾದ ಸಿದ್ದೇಶ್ ರವರ ಮುಖಾಂತರ ತಲುಪಿಸಿ ಕುಟುಂಬಕ್ಕೆ ಸಾಂತ್ವನ ತಿಳಿಸಿದ್ದಾರೆ.

blank

ಈ ಸಂದರ್ಭದಲ್ಲಿ ಮೋಹನ್ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರು, ಬಿಜೆಪಿ ಮುಖಂಡ ಕುಮಾರ್ ಗ್ರಾಮ ಪಂಚಾಯತ್ ಸದಸ್ಯರಾದ ಗಂಗಣ್ಣ, ಶ್ರೀಕಾಂತ್, ನಾಗರಾಜ್, ಗೋವಿಂದಪ್ಪ, ಮುಂತಾದ ಮುಖಂಡರು ಉಪಸ್ಥಿತರಿದ್ದರು. ಇದನ್ನೂ ಓದಿ:ಸತತ 100 ದಿನಗಳಿಂದ 2,000 ಜನರಿಗೆ ಅನ್ನ ಸಂತರ್ಪಣೆ ಸೇವೆ 

Source: publictv.in Source link