ಖಾತೆ ಸಣ್ಣದು-ದೊಡ್ಡದು ಅಂತಾ ಬರಲ್ಲ, ನಿಭಾಯಿಸುವ ವ್ಯಕ್ತಿಯ ಮೇಲೆ ನಿರ್ಧಾರವಾಗುತ್ತೆ -ನೂತನ ಗೃಹ ಸಚಿವ

ಖಾತೆ ಸಣ್ಣದು-ದೊಡ್ಡದು ಅಂತಾ ಬರಲ್ಲ, ನಿಭಾಯಿಸುವ ವ್ಯಕ್ತಿಯ ಮೇಲೆ ನಿರ್ಧಾರವಾಗುತ್ತೆ -ನೂತನ ಗೃಹ ಸಚಿವ

ಚಿಕ್ಕಮಗಳೂರು: ಸಿಎಂ ಬಸವರಾಜ ಬೊಮ್ಮಾಯಿ ಅವರು ಕೊನೆಗೂ ನೂತನ ಸಚಿವರಿಗೆ ಜವಾಬ್ದಾರಿಯನ್ನ ನೀಡಿದ್ದಾರೆ. ಆಗಸ್ಟ್ 4 ರಂದು ಸಚಿವ ಸಂಪುಟ ರಚನೆ ಮಾಡಿದ್ದ ಸಿಎಂ ಪ್ರಮಾಣವಚನ ಸ್ವೀಕಾರ ಮಾಡಿದ 29 ಮಂದಿಗೂ ಇದೀಗ ಖಾತೆಗಳನ್ನ ಹಂಚಿಕೆ ಮಾಡಿದ್ದಾರೆ.

ನೂತನ ಸಂಪುಟದಲ್ಲಿ ಮೊದಲ ಬಾರಿಗೆ ಸಚಿವರಾಗಿ ಗೃಹ ಇಲಾಖೆ ಜವಾಬ್ದಾರಿ ಅಲಂಕರಿಸಿರುವ ಆರಗ ಜ್ಞಾನೇಂದ್ರ ಮಾಧ್ಯಮಗಳೊಂದಿಗೆ ಮಾತನಾಡಿ.. ಇಂದು ನನ್ನನ್ನು ಗುರುತಿಸಿ ಅತ್ಯಂತ ಮಹತ್ತರವಾದ ಖಾತೆ ನೀಡಿದ್ದು, ನನ್ನ ಪಕ್ಷದ ನಾಯಕರಿಗೆ ನಾನು ಆಭಾರಿಯಾಗಿದ್ದೇನೆ. ಇಷ್ಟು ದೊಡ್ಡ ಖಾತೆ ಕೊಡುತ್ತಾರೆ ಎಂದು ಕೊಂಡಿರಲಿಲ್ಲ, ಗೃಹ ಖಾತೆ ನೀಡಿರುವುದಕ್ಕಾಗಿ ಬಹಳ ಖುಷಿಯಾಗುತ್ತಿದೆ ಎಂದಿದ್ದಾರೆ.

ಇದನ್ನೂ ಓದಿ: ಬದಲಾವಣೆ ದೃಷ್ಟಿಯಿಂದ ಹೊಸಬರಿಗೆ ಕೆಲವು ಮಹತ್ವದ ಖಾತೆ -ಬೊಮ್ಮಾಯಿ ಸ್ಪಷ್ಟನೆ

ನನಗೆ ಯಾವ ಖಾತೆಯ ನಿರೀಕ್ಷೆಯೂ ಇರಲಿಲ್ಲ, ಯಾವ ಖಾತೆಯೂ ದೊಡ್ಡದಲ್ಲ. ಯಾವ ಖಾತೆಯೂ ಸಣ್ಣದಲ್ಲ. ಅದನ್ನ ನಿಭಾಯಿಸುವ ವ್ಯಕ್ತಿಯ ಮೇಲೆ ನಿರ್ಧಾರವಾಗುತ್ತೆ. ಯಾವ ಖಾತೆ ಕೊಟ್ರೂ ನಿಭಾಯಿಸ್ತೇನೆ ಅಂದಿದ್ದೆ. ನನ್ನ ಮೇಲೆ ವಿಶ್ವಾಸ ಇಟ್ಟಿರೋದಕ್ಕೆ ಬೊಮ್ಮಾಯಿ ಅವರಿಗೆ ಅಭಿನಂದನೆ ಸಲ್ಲಿಸ್ತೇನೆ. ಆರ್​ಎಸ್​ಎಸ್​ ನಲ್ಲಿ ಬೆಳೆದಿರುವುದಕ್ಕೆ ಹೆಮ್ಮೆಯಿದ್ದು, ಅದರಿಂದ ಶಿಸ್ತು ಕಲಿತಿದ್ದೇನೆ. ಅದು ನನಗೆ ಯೋಗ್ಯತೆಯನ್ನು ನೀಡಿದೆ ಎಂದರು.

ಇದನ್ನೂ ಓದಿ: ಇಂಥದ್ದೇ ಖಾತೆ ಬೇಕು ಅಂದ್ರು ಕೊಡಲಿಲ್ಲ; ಹೀಗೆ ಸಿಎಂ ವಿರುದ್ಧ ಅಸಮಾಧಾನ ಹೊರಹಾಕಿದ ಆನಂದ್​​ ಸಿಂಗ್​​

ಸವಾಲುಗಳು ಎಲ್ಲ ಇಲಾಖೆಗಳಲ್ಲಿ ಇರುತ್ತೆ. ಅದೇ ರೀತಿ ಈ ಇಲಾಖೆಯಲ್ಲೂ ಸಹ ಸವಾಲುಗಳಿವೆ. ಅದನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ. ರಾಜ್ಯದ ಜನರ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡ್ತೇನೆ ಎಂದಿದ್ದಾರೆ.

 

Source: newsfirstlive.com Source link