ಇಬ್ಬರು ರೌಡಿಶೀಟರ್‌ಗಳ ಮಧ್ಯೆ ವಿಲನ್ ಆದಳು ಯುವತಿ- ಪ್ರಕರಣ ಕೊಲೆಯಲ್ಲಿ ಅಂತ್ಯ

ಬೆಂಗಳೂರು: ಇಬ್ಬರು ರೌಡಿಶೀಟರ್ ಗಳು ಹತ್ತಾರು ವರ್ಷಗಳಿಂದ ಪ್ರಾಣ ಸ್ನೇಹಿತರಾಗಿದ್ದರು. ಆದರೆ ಈ ನಡುವೆ ಯುವತಿಯ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರೂ ಗಲಾಟೆ ಮಾಡಿಕೊಂಡಿದ್ದು, ಪ್ರಕರಣ ಕೊಲೆಯಲ್ಲಿ ಅಂತ್ಯವಾಗಿದೆ.

ಡಿಜೆ ಹಳ್ಳಿಯಲ್ಲಿ ಘಟನೆ ನಡೆದಿದ್ದು, ಫೈರೋಜ್‍ನ ಕುಟುಂಬಸ್ಥರೆಲ್ಲ ಸೇರಿ ಮಜರ್‍ನನ್ನು ಹತ್ಯೆ ಮಾಡಿದ್ದಾರೆ. ಈ ಮೂಲಕ ಇಬ್ಬರ ಸ್ನೇಹದ ನಡುವೆ ಯುವತಿ ವಿಲನ್ ಆಗಿದ್ದಾಳೆ. ಇದೀಗ ರೌಡಿಶೀಟರ್ ಫೈರೋಜ್ ಸೇರಿದಂತೆ ಎಲ್ಲರನ್ನೂ ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದಾರೆ.

ಡಿಜೆ ಹಳ್ಳಿಯ ರೌಡಿಶೀಟರ್ ಮಜರ್ ಮತ್ತು ಅದೇ ಏರಿಯಾದ ಫೈರೋಜ್ ಹತ್ತಾರು ವರ್ಷಗಳಿಂದ ಅಣ್ಣ ತಮ್ಮಂದಿರಂತೆ ಒಟ್ಟಿಗೆ ಓಡಾಡಿ ಊಟ ಮಾಡಿದೋರು. ಅಷ್ಟೇ ರೌಡಿಸಂ ಕೂಡ ಮಾಡಿ, ಇಬ್ಬರ ಮೇಲೂ ರೌಡಿಶೀಟ್ ಕೂಡ ಓಪನ್ ಆಗಿವೆ. ಇದರ ನಡುವೆ ರೌಡಿಶೀಟರ್ ಫೈರೋಜ್ ಮನೆಯ ಯುವತಿಯೊಬ್ಬರ ಸಂಬಂಧ, ರೌಡಿಶೀಟರ್ ಮಜರ್ ಮತ್ತು ಫೈರೋಜ್ ನಡುವೆ ವೈಮನಸ್ಸು ಉಂಟಾಗಿದೆ. ನಂತರ ಕೆಲ ದಿನಗಳಿಂದ ಇಬ್ಬರೂ ದೂರವಾಗಿದ್ದರು.

ಇತ್ತೀಚೆಗೆ ಇದೇ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆ ಸಹ ಶುರುವಾಗಿತ್ತು. ಗಲಾಟೆ ಮುಂದುವರಿದು, ನಿನ್ನೆ ರಾತ್ರಿ ಒಂದು ಹಂತದವರೆಗೆ ವಾಗ್ವಾದಗಳು ನಡೆದು ಇಬ್ಬರೂ ಸುಮ್ಮನಾಗಿದ್ದರು. ಆದರೆ ಇಂದು ಬೆಳಗ್ಗೆ ಏಳು ಗಂಟೆ ಸುಮಾರಿಗೆ ಮಜರ್ ಮತ್ತೆ ಫೈರೋಜ್ ಮನೆ ಬಳಿ ಸಂಧಾನಕ್ಕೆ ಹೋಗಿದ್ದ. ಈ ವೇಳೆ ಮತ್ತೆ ಮಜರ್ ಮತ್ತು ಫೈರೋಜ್ ಕುಟುಂಬದ ಜೊತೆಗೆ ಗಲಾಟೆ ನಡೆದಿದೆ. ಗಲಾಟೆಯಲ್ಲಿ ಫೈರೋಜ್ ಅವರ ಕುಟುಂಬದವರು ಸೇರಿಕೊಂಡು ಮಜರ್ ಮೇಲೆ ಮಾರಕಾಸ್ತ್ರಗಳಿಂದ ಮನಸೋ ಇಚ್ಛೆ ಹಲ್ಲೆ ಮಾಡಿ, ಕೊಲೆ ಮಾಡಿದ್ದಾರೆ.

ಮತ್ತೊಂದು ರೇಪ್ ಕೇಸ್- ಸಿದ್ದಾಪುರದಲ್ಲಿ 11ರ ಬಾಲೆ ಮೇಲೆ ಮಾವನಿಂದಲೇ ಅತ್ಯಾಚಾರ

ಸಾವನ್ನಪ್ಪಿರುವುದು ಖಚಿತವಾಗುತ್ತಿದ್ದಂತೆ, ಮೃತದೇಹವನ್ನು ಮನೆ ಮುಂದಿನ ರಸ್ತೆಯಲ್ಲಿ ಬಿಸಾಕಿ ಬಾಗಿಲು ಹಾಕಿಕೊಂಡಿದ್ದಾರೆ. ಈ ವಿಚಾರ ತಿಳಿದು ಸ್ಥಳಕ್ಕೆ ಬಂದ ಡಿಜೆ ಹಳ್ಳಿ ಪೊಲೀಸರು, ರೌಡಿಶೀಟರ್ ಫೈರೋಜ್ ಸೇರಿದಂತೆ ಎಲ್ಲರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

Source: publictv.in Source link