ಸಿಎಂ ಆದ 24 ಗಂಟೆಯೊಳಗೆ ದೇವೇಗೌಡರ ಮನೆಗೇಕೆ ಹೋಗಬೇಕಿತ್ತು? -ಗುಡುಗಿದ ಬಿಜೆಪಿ ಶಾಸಕ

ಸಿಎಂ ಆದ 24 ಗಂಟೆಯೊಳಗೆ ದೇವೇಗೌಡರ ಮನೆಗೇಕೆ ಹೋಗಬೇಕಿತ್ತು? -ಗುಡುಗಿದ ಬಿಜೆಪಿ ಶಾಸಕ

ಬೆಂಗಳೂರು: ಬಸವರಾಜ್ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾದ 24 ಗಂಟೆಯೊಳಗೆ ದೇವೇಗೌಡರ ಮನೆಗೆ ಏಕೆ ಹೋಗಬೇಕಿತ್ತು? ಎಂದು ಶಾಸಕ ಪ್ರೀತಂಗೌಡ ಗುಡುಗಿದ್ದಾರೆ.

ನೂರು ಮೀಟರ್ ಓಡೋಕೆ ಬಂದಿಲ್ಲ
ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು.. ಯಡಿಯೂರಪ್ಪ ಅವರು ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಕೊಟ್ಟಿದ್ದರು. ನಾನು ನೂರು ಮೀಟರ್ ಓಡಲಿಕ್ಕೆ ಬಂದಿಲ್ಲ, ಮ್ಯಾರಥಾನ್‌ ಓಡಲು ಬಂದಿದ್ದೇನೆ. ಯಾರ ಹತ್ತಿರನೂ ಮಂತ್ರಿ ಮಾಡಿ ಎಂದು ಕೇಳಿಲ್ಲ. ಮಂತ್ರಿ ಮಾಡಿಲ್ಲ ಅನ್ನೋದ್ಕಿಂತ ನಾನು ಕೇಳಿಲ್ಲ. ಮೈಸೂರು ಭಾಗದಲ್ಲಿ ಒಕ್ಕಲಿಗ ಸಮುದಾಯದ ಶಾಸಕರಿಗೆ ಮಂತ್ರಿ ಸ್ಥಾನ ಕೊಡಬೇಕಿತ್ತು. ಹಳೇ ಮೈಸೂರು ಭಾಗಕ್ಕೆ ಮಂತ್ರಿ ಸ್ಥಾನ ಕೊಟ್ಟಿಲ್ಲ ಅನ್ನೋ ನೋವು ಕಾರ್ಯಕರ್ತರಿಗಿದೆ.

ಇದನ್ನೂ ಓದಿ: BREAKING ನೂತನ ಸಚಿವರಿಗೆ ಖಾತೆ ಹಂಚಿಕೆ; ಯಾರಿಗೆ ಯಾವ ಜವಾಬ್ದಾರಿ..?

‘ಮನೆಗೆ ಕಲ್ಲು ಹೊಡೆದವರ ಮನೆಗೆ..?’
ಮುಖ್ಯಮಂತ್ರಿಯಾದ ಕೂಡಲೇ ಸುತ್ತೂರು, ಸಿರಿಗೆರೆ, ಸಿದ್ದಗಂಗಾ ಆದಿಚುಂಚನಗಿರಿ, ಮಠಕ್ಕೆ ಹೋಗ್ತಾರೆ ಅಂದ್ಕೊಂಡಿದ್ವಿ. ಆದರೆ ದೇವೇಗೌಡರ ಮನೆಗೆ ಹೋಗಿರುವುದು ಕಾರ್ಯಕರ್ತರಿಗೆ ನೋವಾಗಿದೆ. ದಿನ ಬೆಳಗ್ಗೆ ಜಿಲ್ಲೆಯಲ್ಲಿ ಗುದ್ದಾಡೋದು ನಾವು. ನಿಮ್ಮ ಮನೆಗೆ ಕಲ್ಲು ಹೊಡೆದವರ ಮನೆಗೆ ಕ್ಯಾಬಿನೆಟ್ ವಿಸ್ತರಣೆಗೂ ಮುನ್ನ ಹೋದರೆ ಹೇಗೆ ಎಂದು ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದರು.

ನಾನು ಕಾರ್ಯಕರ್ತರನ್ನು ಸಮಾಧಾನ ಮಾಡಿದ್ದೀನಿ. ನಾನೇನು ಮಂತ್ರಿ ಮಾಡಿ ಎಂದು ಕೇಳಿಲ್ಲ, ತಪ್ಪಿಸಿದರು ಎಂಬ ಪ್ರಶ್ನೆ ಬರಲ್ಲ. ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್ ಜೊತೆ ಗುದ್ದಾಡುತ್ತಿರೋದು ನಾವು. ಸಿಎಂ ಆದ 24 ಗಂಟೆಯೊಳಗೆ ದೇವೇಗೌಡರ ಮನೆಗೆ ಏಕೆ ಹೋಗಬೇಕಿತ್ತು ಎಂದು ಕಾರ್ಯಕರ್ತರು ನನ್ನನ್ನು ಪ್ರಶ್ನೆ ಮಾಡುತ್ತಿದ್ದಾರೆ.

blank

ಜೆಡಿಎಸ್ ಜೊತೆ ಗುದ್ದಾಡ್ತಿರೋದು ನಾವು
ಈ ಬಗ್ಗೆ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷರನ್ನು ಭೇಟಿ ಮಾಡುತ್ತೇನೆ. ನಾನು ಅಡ್ಜಸ್ಟ್ ಮೆಂಟ್ ರಾಜಕಾರಣ ‌ಮಾಡಲ್ಲ. ಮುಂದೆ ತಾ.ಪಂ, ಜಿ.ಪಂ ಚುನಾವಣೆ ಇದೆ. ಮುಖ್ಯಮಂತ್ರಿಗಳೇ ನಮ್ಮ ಜೇಬಿನಲ್ಲಿದ್ದಾರೆ ಎಂದು ಫಸ್ಟ್ ಫ್ಯಾಮಿಲಿ ಆಫ್ ಹಾಸನ್ ಅವರು ಸ್ಟೇಟ್ಮೆಂಟ್ ಕೊಡ್ತಿದ್ದರೆ ಕಾರ್ಯಕರ್ತರು ಧೃತಿಗೆಡಬೇಕಿಲ್ಲ, ನಾನು ನಿಮ್ಮ ಜೊತೆ ಇದ್ದೇನೆ. ಇನ್ನೊಬ್ಬರು ಹೋಗಿ ಅಡ್ಜಸ್ಟ್​ಮೆಂಟ್ ರಾಜಕಾರಣ ಮಾಡಬಾರದು ಎಂದು ಕಿಡಿಕಾರಿದರು.

ಮುಂದಿನ ದಿನಗಳಲ್ಲಿ ನಮ್ಮ ಜಿಲ್ಲೆಗೆ ಬರುವ ಯಾವುದೇ ಶಾಸಕರು ಜೆಡಿಎಸ್ ಶಾಸಕರ‌ ಮನೆಗೆ ಹೋಗಿ ಊಟ ಮಾಡಬಾರದು. ಕಾರ್ಯಕರ್ತರಿಗೆ ನೋವಾಗಿದೆ. ಮುಖ್ಯಮಂತ್ರಿಗಳೊಂದಿಗೆ ನೇರವಾಗಿ ಮಾಡ್ತೀನಿ. ದೇವೇಗೌಡರ ಭೇಟಿ ತಾ.ಪಂ, ಜಿ ಪಂ. ಚುನಾವಣೆ ಮೇಲೆ ಪರಿಣಾಮ ಬೀರಲಿದೆ ಎಂದು ಕಾರ್ಯಕರ್ತರು ಹೇಳುತ್ತಿದ್ದಾರೆ. ಹೊಳೆನರಸೀಪುರದ ನಾಯಕರು ಇಡೀ ಜಿಲ್ಲೆ ನಮ್ಮ ಜೇಬಿನಲ್ಲಿದೆ‌ ಅಂದ್ಕೊಂಡು ಓಡಾಡ್ತಿದ್ದಾರೆ. ಕಳೆದ ಕ್ಯಾಬಿನೆಟ್​​ನಲ್ಲಿ ಹತ್ತು ಜನ ಒಕ್ಕಲಿಗರಿದ್ದರು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬಿಜೆಪಿ ನಾಯಕರು ಮುಂದಿನ ಚುನಾವಣೆಯಲ್ಲಿ ಬಂದು ಜವಾಬ್ದಾರಿ ತೆಗೆದುಕೊಂಡು ಎಷ್ಟು ಸ್ಥಾನ ತಂದುಕೊಡುತ್ತಾರೆ ನೋಡೋಣ. ಮಂತ್ರಿಯಾಗಬೇಕೆಂದು ಆಸೆಯಿಲ್ಲ, ರಾಜಕೀಯ ಮಾಡಬೇಕೆಂಬ ಆಸೆಯಿದೆ ಅಂತಾ ಮುಖ್ಯಮಂತ್ರಿ ವಿರುದ್ಧ ಪರೋಕ್ಷವಾಗಿ ಅಸಮಾಧಾನವನ್ನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ನಮ್ಮ ಕಡೆಯಿಂದ ಸರ್ಕಾರಕ್ಕೆ ಯಾವುದೇ ಆತಂಕ ಇಲ್ಲ- ಸಿಎಂಗೆ ಹೆಚ್.​ಡಿ. ದೇವೇಗೌಡ ಅಭಯ

Source: newsfirstlive.com Source link