ನೋಡನೋಡುತ್ತಲೇ ಪ್ರಪಾತಕ್ಕೆ ಉರುಳಿದ ಕಾರ್.. ಮಹಿಳೆಯರು ಮುಂದೆಯೇ ನಡೀತು ಪವಾಡ

ನೋಡನೋಡುತ್ತಲೇ ಪ್ರಪಾತಕ್ಕೆ ಉರುಳಿದ ಕಾರ್.. ಮಹಿಳೆಯರು ಮುಂದೆಯೇ ನಡೀತು ಪವಾಡ

ಚೀನಾದಲ್ಲಿ ಇತ್ತೀಚೆಗೆ ಅನಾಹುತಕಾರಿ ಘಟನೆಯೊಂದು ನಡೆದಿದ್ದು ನೋಡ ನೋಡುತ್ತಲೇ ಪ್ರಪಾತದ ಪಕ್ಕದಲ್ಲಿ ನಿಲ್ಲಿಸಿದ್ದ ಕಾರ್ ಪ್ರಪಾತಕ್ಕೆ ಉರುಳಿಬಿದ್ದಿದೆ. ಈ ವೇಳೆ ಕಾರ್​ನಲ್ಲಿ ಇಬ್ಬರು ಪ್ರಯಾಣಿಕರಿದ್ದರು ಹಾಗೂ ಇಬ್ಬರೂ ಪವಾಡಸದೃಶ ಎಂಬಂತೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

blank

ಒಂದೇ ಕುಟುಂಬದ ಮೂವರು ಪ್ರವಾಸಕ್ಕೆಂದು ಶಿಂಜಿಯಾಂಗ್ ಡುಕು ಹೈವೇನಲ್ಲಿ ಹೊರಟಿದ್ದರು. ಈ ವೇಳೆ ಪ್ರಪಾತದ ವೀಕ್ಷಣೆಗೆಂದು ಕಾರ್ ನಿಲ್ಲಿಸಿದ್ದಾರೆ. ಕಾರ್​ನ ಡ್ರೈವ್ ಮಾಡುತ್ತಿದ್ದ ವ್ಯಕ್ತಿ ಹೊರಗಿಳಿದು ಪ್ರಪಾತ ವೀಕ್ಷಣೆ ಮಾಡುತ್ತಿರುವಾಗಲೇ ಕಾರ್ ತಗ್ಗು ಪ್ರದೇಶದತ್ತ ಚಲಿಸಿದೆ. ಈ ವೇಳೆ ಕಾರ್​​ನಲ್ಲಿ ಇಬ್ಬರು ಮಹಿಳೆಯರಿದ್ದು ಓರ್ವ ಮಹಳೆ ಡೋರ್ ತೆಗೆದು ಹೊರಗೆ ಜಂಪ್ ಮಾಡಿದ್ದಾಳೆ.

blank

ಮತ್ತೋರ್ವ ಮಹಿಳೆ ಮುಂದಿನ ಸೀಟ್​ನಲ್ಲಿ ಕೂತಿದ್ದರಿಂದ ತಕ್ಷಣವೇ ಕಾರ್​ನಿಂದ ಹೊರಗೆಬರಲು ಸಾಧ್ಯವಾಗಿಲ್ಲ. ನೋಡನೋಡುತ್ತಲೇ ಕಾರ್ ಪ್ರಪಾತಕ್ಕೆ ಉರುಳಿದೆ. ನಂತರ ಕಾರ್​ನಲ್ಲಿದ್ದ ಮಹಿಳೆ ಒಂದಿಷ್ಟು ಗಾಯಗಳೊಂದಿಗೆ ಬದುಕುಳಿದಿದ್ದಾಳೆ. ಕಾರ್ ಪ್ರಪಾತಕ್ಕೆ ಉರುಳಿಬೀಳುವ ದೃಶ್ಯ ಮೊಬೈಲ್​ನಲ್ಲಿ ಸೆರೆಯಾಗಿದ್ದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Source: newsfirstlive.com Source link