ಉಸ್ತುವಾರಿ ಸಚಿವರ ಸಭೆಗೆ ಬರುತ್ತಿದ್ದ ಅಧಿಕಾರಿಗಳ ಕಾರು ಪಲ್ಟಿ; ಓರ್ವ ಅಧಿಕಾರಿ ಸಾವು

ಉಸ್ತುವಾರಿ ಸಚಿವರ ಸಭೆಗೆ ಬರುತ್ತಿದ್ದ ಅಧಿಕಾರಿಗಳ ಕಾರು ಪಲ್ಟಿ; ಓರ್ವ ಅಧಿಕಾರಿ ಸಾವು

ಉತ್ತರ ಕನ್ನಡ: ಉಸ್ತುವಾರಿ ಸಚಿವರ ಸಭೆಗೆ ಬರುತ್ತಿದ್ದ ಅಧಿಕಾರಿಗಳ ಕಾರು ಪಲ್ಟಿಯಾಗಿ ಓರ್ವ ಅಧಿಕಾರಿ ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಬಾಳೆಗುಳಿ ಬಳಿ ನಡೆದಿದೆ. ಸಿದ್ದಾಪುರ ಲೋಕೋಪಯೋಗಿ ಇಲಾಖೆಯ ಎಇಇ ಮುದುಕಣ್ಣನವರ್ ಮೃತ ದುರ್ದೈವಿ. ಇಂದು ಕಾರವಾರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನೆರೆ ಮತ್ತು ಕೊವಿಡ್ ಸಂಬಂಧ ಸಚಿವರ ನೇತೃತ್ವದಲ್ಲಿ ಸಭೆ ಹಿನ್ನೆಲೆ ತೆರಳುವಾಗ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.

ಇದನ್ನೂ ಓದಿ: ಭಟ್ಕಳದಲ್ಲಿ ಮತ್ತೆ NIA ದಾಳಿ.. ಮೂವರು ಶಂಕಿತ ಉಗ್ರರು ವಶಕ್ಕೆ

ಸಭೆಗೆ ತೆರಳುವಾಗ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿ ಈ ಅನಾಹುತ ಸಂಭವಿಸಿದ್ದು, ಕಾರಿನಲ್ಲಿ ಲೋಕೋಪಯೋಗಿ ಇಲಾಖೆಯ ಶಿರಸಿ, ಸಿದ್ದಾಪುರ ಹಾಗೂ ಮುಂಡಗೋಡ ತಾಲೂಕಿನ ಇಂಜಿನಿಯರ್​ಗಳು ಕೂಡ ಇದ್ದರು. ಕಾರಿನಲ್ಲಿದ್ದ ಇನ್ನುಳಿದ ನಾಲ್ವರು ಅಧಿಕಾರಿಗಳಿಗೆ ಗಂಭೀರ ಗಾಯವಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಸ್ಥಳಕ್ಕೆ ಅಂಕೋಲಾ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: ಮತ್ತೆ ನೈಟ್ & ವೀಕೆಂಡ್ ಕರ್ಫ್ಯೂ; ಮನೆಯಿಂದ ಆಚೆ ಬರೋ ಮುನ್ನ ಮಾರ್ಗಸೂಚಿ ನೋಡಿ ಬಿಡಿ

Source: newsfirstlive.com Source link