‘ನಾವ್ಯಾರೂ ಕೈಗೆ ಬಳೆ ತೊಟ್ಟುಕೊಂಡಿಲ್ಲ.. ಇಂದಿರಾ ಕ್ಯಾಂಟೀನ್ ಹೆಸರು ಮುಟ್ಟಲಿ ಗೊತ್ತಾಗುತ್ತೆ’

‘ನಾವ್ಯಾರೂ ಕೈಗೆ ಬಳೆ ತೊಟ್ಟುಕೊಂಡಿಲ್ಲ.. ಇಂದಿರಾ ಕ್ಯಾಂಟೀನ್ ಹೆಸರು ಮುಟ್ಟಲಿ ಗೊತ್ತಾಗುತ್ತೆ’

ಬೆಂಗಳೂರು: ಇಂದಿರಾ ಕ್ಯಾಂಟೀನ್ ಹೆಸರು ಬದಲಿಸುವಂತೆ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ. ರವಿ ಮುಖ್ಯಮಂತ್ರಿಗಳಿಗೆ ಸಲಹೆ ನೀಡಿದ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್.. ನಾವ್ಯಾರೂ ಕೈಗಳಿಗೆ ಬಳೆ ತೊಟ್ಕೊಂಡು ಕೂತಿಲ್ಲ.. ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ವಿಚಾರ ಮುಟ್ಟಲಿ ಗೊತ್ತಾಗುತ್ತೆ ಎಂದು ಎಚ್ಚರಿಕೆ ನೀಡಿದ್ದಾರೆ.

ಕೇಂದ್ರ ಸರ್ಕಾರ ತೆಗೆದುಕೊಂಡಿರುವ ರಾಜೀವ್ ಗಾಂಧಿ ಲೇಖ್ ರತ್ನ ಪ್ರಶಸ್ತಿ ಬದಲಾವಣೆಯ ತೀರ್ಮಾನದ ಬಗ್ಗೆ ಪ್ರತಿಕ್ರಿಯಿಸಿ.. ಈ ನಡೆ ಖಂಡನೀಯ.. ಇಡೀ ದೇಶದ ಯುವಕರಿಗೆ, ಮತದಾನದ ಹಕ್ಕು, ಪ್ರೋತ್ಸಾಹದ ಕಾರ್ಯಕ್ರಮ, ಯುವಕರ ಕ್ರಾಂತಿ ಕಾರಕ ಹೆಜ್ಜೆಗೆ ಹಲವು ಕಾರ್ಯಕ್ರಮ ನೀಡಿದ್ದು ರಾಜೀವ್ ಗಾಂಧಿ.

ಇದನ್ನೂ ಓದಿ: ಇಂದಿರಾ ಕ್ಯಾಂಟೀನ್​​​ಗೆ ‘ಅನ್ನಪೂರ್ಣೇಶ್ವರಿ ಕ್ಯಾಂಟೀನ್’ ಎಂದು ಹೆಸರಿಡಿ; ಸಿಎಂಗೆ ಸಿ.ಟಿ ರವಿ ಮನವಿ

ಕಾಂಗ್ರೆಸ್ ಪಕ್ಷ ಸುಮ್ಮನೆ ನೋಡಿಕೊಂಡು ಕೂರಲ್ಲ..

ಧ್ಯಾನ್ ಚಂದ್ ದೇಶದ ಆಸ್ತಿ.. ಅವರ ಹೆಸರಿನಲ್ಲಿ ಶಿಕ್ಷಣ ಸಂಸ್ಥೆಗಳು, ಪ್ರಶಸ್ತಿ ನೀಡಲಿ. ಗಾಂಧಿ ಕುಟುಂಬದ ಹೆಸರು ಇದೆ ಎಂದು ಹೆಸರು ಬದಲಾವಣೆ ಮಾಡಲು ಹೊರಟಿದ್ದಾರೆ. ಕಾಂಗ್ರೆಸ್ ಪಕ್ಷ ಸುಮ್ಮನೆ ನೋಡಿಕೊಂಡು ಕೂರಲ್ಲ.. ನಾವು ದ್ವೇಷದ ರಾಜಕಾರಣ ಮಾಡಲ್ಲ. ಸರ್ದಾರ್ ವಲ್ಲಭಭಾಯಿ ಪಟೇಲ್ ಸ್ಟೇಡಿಯಂಗೆ ತಮ್ಮ ಹೆಸರನ್ನು ಹಾಕಿಕೊಂಡ್ರಿ ಎಂದಿದ್ದಾರೆ.

ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ವಿಚಾರ ಮುಟ್ಲಿ ಗೊತ್ತಾಗುತ್ತೆ..

ಇಂದಿರಾ ಕ್ಯಾಂಟೀನ್ ಗೆ ಹೆಸರು ಬದಲಿಸುವೆ ಎಂದು ರಾಷ್ಟ್ರೀಯ ಕಾರ್ಯದರ್ಶಿ ಆಗ್ರಹಿಸಿದ್ದಾರೆ. ನಾವ್ಯಾರೂ ಕೈಗೆ ಬಳೆ ತೊಟ್ಟುಕೊಂಡು ಕೂತಿಲ್ಲ. ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ವಿಚಾರ ಮುಟ್ಲಿ ಗೊತ್ತಾಗುತ್ತೆ. ಡೀಸೆಲ್, ಪೆಟ್ರೋಲ್ ಬೆಲೆ ಇಳಿಸುವಂತೆಯೂ ಸಾರ್ವಜನಿಕರ ಅಭಿಪ್ರಾಯ ಇದೆ. ಅದರ ಬಗ್ಗೆಯೂ ಬಿಜೆಪಿ ನಾಯಕರು ಗಮನ ಹರಿಸಲಿ.

ವಾಜಪೇಯಿ ಹೆಸರಿನಲ್ಲಿ ಸಾರಿಗೆ ಇದೆ. ಹಾಗಂತ ನಾವು ವಿರೋಧ ಮಾಡಿದ್ವಾ?

ವಾಜಪೇಯಿ ಹೆಸರಿನಲ್ಲಿ ಸಾರಿಗೆ ಇದೆ. ಹಾಗಂತ ನಾವು ವಿರೋಧ ಮಾಡಿದ್ವಾ? ರಾಜೀವ್ ಗಾಂಧಿ ಈ ರಾಷ್ಟ್ರಕ್ಕೆ ಏನೂ ಮಾಡ್ಲಿಲ್ವ? 18 ವರ್ಷದ ಯುವ ಜನತೆಗೆ ಮತದಾನದ ಹಕ್ಕು ನೀಡಿದ್ದು ರಾಜೀವ್ ಗಾಂಧಿ. CT ರವಿ ಈ ವಿಚಾರವನ್ನ ಮುಟ್ಟಿ ನೋಡಲಿ, ಹೆಸರು ಬದಲಾವಣೆ ವಿಚಾರದಲ್ಲಿ ಟಚ್ ಮಾಡಲಿ, ಕಾಂಗ್ರೆಸ್ ಪಕ್ಷ, ಈ ದೇಶದ ಜನ ಏನ್ ಮಾಡ್ತಾರೆ ಅಂತ ಗೊತ್ತಾಗಲಿದೆ ಎಂದು ಖಡಕ್​ ಆಗಿ ಹೇಳಿದ್ದಾರೆ.

ಇನ್ನು ಖಾತೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ..ಖಾತೆ ಯಾರಿಗಾದರೂ ನೀಡ್ಲಿ, ಯಾರನ್ನಾದರೂ ಮಂತ್ರಿ ಮಾಡಿಕೊಳ್ಳಲಿ ನಮಗೂ ಅದಕ್ಕೂ ಸಂಬಂಧ ಇಲ್ಲ ಎಂದಿದ್ದಾರೆ. ಇತ್ತ ಜಮೀರ್ ನಿವಾಸದ ಮೇಲೆ ಜಾರಿ ನಿರ್ದೇಶನಾಲಯದ ದಾಳಿ ವಿಚಾರವಾಗಿ ಪ್ರತಿಕ್ರಿಯೆ ನೀಡಿ.. ಜಮೀರ್​ಗೆ ಬಂಧನ ಭೀತಿ ಇಲ್ಲ.. ಅವರೇ ಹ್ಯಾಪಿ ಅಂತ ಹೇಳಿದ್ದಾರೆ ಎಂದಿದ್ದಾರೆ.

Source: newsfirstlive.com Source link