ಕನ್ನಡದ ನಿರ್ದೇಶಕನ ವಿರುದ್ಧವೇ ನಿರ್ಮಾಪಕ ದೂರು ದಾಖಲಿಸಿದ್ದು ಯಾಕೆ?

ಕನ್ನಡದ ನಿರ್ದೇಶಕನ ವಿರುದ್ಧವೇ ನಿರ್ಮಾಪಕ ದೂರು ದಾಖಲಿಸಿದ್ದು ಯಾಕೆ?

ಬೆಂಗಳೂರು: ಸಿನಿಮಾ ಪ್ರಮೋಷನ್​​ಗೆ ವಿಡಿಯೋಗಳನ್ನ ಕೊಡ್ತಿಲ್ಲ ಎಂದು ಆರೋಪಿಸಿ ನಿರ್ದೇಶಕನ ವಿರುದ್ದವೇ ನಿರ್ಮಾಪಕ ದೂರು ದಾಖಲಿಸಿದ್ದಾರೆ. ಸದ್ಯ ಆಡಿಯೋ ಲಾಂಚ್ ಆಗಿ ತೆರೆಕಾಣಲು ಸಿದ್ದವಾಗಿರುವ ಶಾರ್ದೂಲ ಸಿನಿಮಾದ ತುಣುಕುಗಳನ್ನ ನಿರ್ದೇಶಕ ಕೌಶಿಕ್ ತಮ್ಮ ಬಳಿಯಲ್ಲಿಯೇ ಇಟ್ಟುಕೊಂಡಿದ್ದು, ಸಿನಿಮಾ ಪ್ರಮೋಷನ್​ಗೆ ಬೇಕಾದ ಚಿತ್ರೀಕರಣದ ಮೇಕಿಂಗ್ ವಿಡಿಯೋಗಳನ್ನ ಕೊಡ್ತಿಲ್ಲ ಎಂದು ಆರೋಪಿಸಿ, ಶಾರ್ದೂಲ ಸಿನಿಮಾದ ನಿರ್ಮಾಪಕರಾದ ರೋಹಿತ್, ನಿರ್ದೇಶಕ ಅರವಿಂದ್ ಕೌಶಿಕ್ ವಿರುದ್ಧ ನಿರ್ಮಾಪಕರ ಸಂಘಕ್ಕೆ ದೂರು ನೀಡಿದ್ದಾರೆ.

ಭೈರವ ಸಿನಿಮಾಸ್ ಪ್ರೊಡಕ್ಷನ್ ನಲ್ಲಿ ತೆರೆಗೆ ಸಿದ್ದವಾಗಿರುವ ಶಾರ್ದೂಲ ಸಿನಿಮಾ ಅರವಿಂದ್ ಕೌಶಿಕ್‌ ನಿರ್ದೇಶಿಸಿ, ರೋಹಿತ್ ನಿರ್ಮಾಣ ಮಾಡಿದ್ದು, ರಾಜಧಾನಿ ಸಿನಿಮಾ ಖ್ಯಾತಿಯ ಚೇತನ್ ಚಂದ್ರ ನಾಯಕರಾಗಿ ನಟಿಸಿದ್ದಾರೆ.

blank

Source: newsfirstlive.com Source link