ಹಿಂದಿನ ಶಿಕ್ಷಣ ಸಚಿವರ ಕಾರ್ಯಗಳನ್ನು ಫಾಲೋಪ್ ಮಾಡುವೆ: ಬಿಸಿ ನಾಗೇಶ್

ಯಾದಗಿರಿ: ಹಿಂದಿನ ಶಿಕ್ಷಣ ಸಚಿವರ ಎಲ್ಲಾ ಕಾರ್ಯಗಳನ್ನು ಫಾಲೋಪ್ ಮಾಡುವೆ, ಆದಷ್ಟು ಬೇಗ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಫಲಿತಾಂಶ ಪ್ರಕಟ ಮಾಡುತ್ತೆನೆ ಎಂದು ನೂತನ ಶಿಕ್ಷಣ ಸಚಿವ ಬಿಸಿ ನಾಗೇಶ್ ಎಂದು ಹೇಳಿದ್ದಾರೆ.

ಯಾದಗಿರಿ ಬಿಜೆಪಿ ಪಕ್ಷದ ಕಚೇರಿಯಲ್ಲಿ ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಅವರು, ನನಗೆ ಮಂತ್ರಿಯಾಗುವ ಆಸೆಯೆ ಇರಲಿಲ್ಲ ಆದರೆ ಈಗ ಶಿಕ್ಷಣ ಖಾತೆ ಕೊಟ್ಟಿದ್ದಾರೆ. ನಾನು ಸಂತಸಗೊಂಡಿದ್ದೆನೆ, ನನ್ನ ಸಂಘಟನೆಯ ಬಲ ನನ್ನ ಜೊತೆಗೆ ಇದೆ ಬರುವ ಎಲ್ಲಾ ಚಾಲೆಂಜ್ ಸ್ವೀಕಾರ ಮಾಡುತ್ತೆನೆ ಎಂದಿದ್ದಾರೆ. ಇದನ್ನೂ ಓದಿ: ಸಂಸತ್ತು ಅಧಿವೇಶನ ನಡೆಯಲು ವಿಪಕ್ಷ ಸದಸ್ಯರು ಅಡ್ಡಿ: ಬಿ.ವೈ.ರಾಘವೇಂದ್ರ

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿಸಿ ನಾಗೇಶ್, ಈ ಹಿಂದಿನ ಶಿಕ್ಷಣ ಸಚಿವರ ಎಲ್ಲಾ ಕಾರ್ಯಗಳನ್ನು ಫಾಲೋಪ್ ಮಾಡುವೆ,ಆದಷ್ಟು ಬೇಗ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಫಲಿತಾಂಶ ಪ್ರಕಟ ಮಾಡುತ್ತೆನೆ. ಶಿಕ್ಷಕರ ವರ್ಗಾವಣೆ ಮತ್ತು ನೂತನ ಶಿಕ್ಷಕರ ನೇಮಕಾತಿಗೆ ಹೆಚ್ಚಿನ ಶ್ರಮವಹಿಸುತ್ತೆನೆ. ನನ್ನ ಮೇಲೆ ನಂಬಿಕೆಯಿಟ್ಟು ಇಂತಹ ಸಮಯದಲ್ಲಿ ಸವಾಲಿನ ಖಾತೆ ಕೊಟ್ಟ ಪಕ್ಷ ಮುಖಂಡರಿಗೆ ಧನ್ಯವಾದಗಳು ಎಂದು ಹೇಳಿದ್ದಾರೆ.

Source: publictv.in Source link