ಸಂಜಯ್ ದತ್ ನನ್ನ ಸಿನಿಮಾಕೆ ಬೇಕೆ ಬೇಕು ಅಂತಿರೋ ಟಾಲಿವುಡ್​ ಸ್ಟಾರ್ ಡೈರೆಕ್ಟರ್ ಯಾರು ಗೊತ್ತಾ?

ಸಂಜಯ್ ದತ್ ನನ್ನ ಸಿನಿಮಾಕೆ ಬೇಕೆ ಬೇಕು ಅಂತಿರೋ ಟಾಲಿವುಡ್​ ಸ್ಟಾರ್ ಡೈರೆಕ್ಟರ್ ಯಾರು ಗೊತ್ತಾ?

ಟಾಲಿವುಡ್​​​ನ ಪ್ರಿನ್ಸ್ ಮಹೇಶ್ ಬಾಬು ಅವರ 28ನೇ ಚಿತ್ರದ ಬಗ್ಗೆ ಜೋರು ಮಾತುಕಥೆ ಶುರುವಾಗಿದೆ.. ಮಹೇಶ್ ಬಾಬು ಅವರ 28ನೇ ಸಿನಿಮಾದ ಬಗ್ಗೆ ಜೋರು ಮಾತುಕತೆ ಶುರುವಾಗಲು ಕಾರಣ ಕೆಜಿಎಫ್​​ನ ಅಧೀರ.. ಅಧೀರ ಪಾತ್ರದಾರಿ ಸಂಜಯ್ ದತ್ ಬಂದ್ರೆನೆ ನಮ್ಮ ಸಿನಿಮಾ ಗೆಲ್ಲೋದು ನಿಲ್ಲೋದು ಅಂತಿದ್ದಾರಂತೆ ನಿರ್ದೇಶಕ ತ್ರಿವಿಕ್ರಮ್​​​..

ಕೆಜಿಎಫ್​​​ ಚಾಪ್ಟರ್ 1.. ಈ ಸಿನಿಮಾದಲ್ಲಿ ಕಂಡು ಬಂದ ಪಾತ್ರಗಳು ಇಡೀ ಇಂಡಿಯಾ ಫೇಮಸ್ ಆಗಿ ಬಿಟ್ಟವು.. ಕೆಜಿಎಫ್​​ನಲ್ಲಿ ಪಾತ್ರಗಳನ್ನ ಮಾಡಿದ ಕಲಾವಿದರು ಅಕ್ಕ ಪಕ್ಕದ ಭಾಷೆಯ ಸಿನಿಮಾ ಮಂದಿಗೆ ಬೇಕೆ ಬೇಕು ಅನ್ನೋಷ್ಟರ ಮಟ್ಟಿಗೆ ಕೆಜಿಎಫ್ ಕ್ರೇಜ್ ಕ್ರಿಯೆಟ್ ಮಾಡಿದೆ.. ಈಗ ಪಕ್ಕದ ಟಾಲಿವುಡ್​​ನ ಮಂದಿಗೆ ಅಧೀರ ಪಾತ್ರದಾರಿ ಸಂಜಯ್ ದತ್​​​​ ಕನವರಿಗೆ ಶುರುವಾಗಿದೆ..

blank

ಇನ್ನೂ ಸಂಜಯ್ ದತ್ ಅವನ್ನ ಪೂರ್ಣ ಪ್ರಾಮಾಣದಲ್ಲಿ ಕೆಜಿಎಫ್ ಸಿನಿಮಾದಲ್ಲಿ ಜನಮನ ಕಂಡಿಲ್ಲ.. ಆಗ್ಲೇ ಅಧೀರ ಪಾತ್ರದ ಬಗ್ಗೆ ಬೇಜಾನ್ ನಿರೀಕ್ಷೆಗಳಿವೆ.. ಅಧೀರ ಪಾತ್ರದ ಬಗ್ಗೆ ಎಷ್ಟರ ಮಟ್ಟಿಗೆ ಕ್ರೇಜ್ ಕ್ರಿಯೆಟ್ ಆಗಿದೆ ಅಂದ್ರೆ ಪಕ್ಕದ ಟಾಲಿವುಡ್​ ಸ್ಟಾರ್ ಡೈರೆಕ್ಟರ್ ತ್ರಿವಿಕ್ರಮ್ ನಿರ್ದೇಶನದ ಮಹೇಶ್ ಬಾಬು ನಟನೆಯ 28ನೇ ಸಿನಿಮಾಕ್ಕೆ ಸಂಜಯ್ ದತ್ ಬೇಕೇ ಬೇಕು ಎಂದು ಕಾದುಕುಳಿತಿರುವಷ್ಟು ಡಿಮ್ಯಾಂಡ್ ಸೃಷ್ಟಿಯಾಗಿದೆ..

blank

ಪಕ್ಕದ ಟಾಲಿವುಡ್​​ನಲ್ಲಿ ಸ್ಟಾರ್ ನಟರಂತೆ ಸ್ಟಾರ್ ಡೈರೆಕ್ಟರ್ಸ್​​​ ಕೂಡ ಸಾಲು ಸಾಲಾಗಿಯೇ ಇದ್ದಾರೆ.. ಈಗ ಟಾಲಿವುಡ್​ ಪ್ರಿನ್ಸ್ ಮಹೇಶ್ ಬಾಬು ಅವರ 28ನೇ ಸಿನಿಮಾದ ಬಗ್ಗೆ ಹೊಸ ಮಾತುಕಥೆ ಶುರುವಾಗಿದೆ.. ಆ ಚರ್ಚೆಯಲ್ಲಿ ನಮ್ಮ ಕೆಜಿಎಫ್​​ನ ಅಧೀರ ಕ್ಯಾನ್ಸರ್ ಗೆದ್ದಿರೋ ವೀರ ಸಂಜು ಬಾಬಾನ ಬಗ್ಗೆ ಮಾತು ಕಥೆ ಜೋರಾಗಿ ಕೇಳಿ ಬರುತ್ತಿದೆ..

blank

ತ್ರಿವಿಕ್ರಮ್ ಶ್ರೀನಿವಾಸ್.. ಟಾಲಿವುಡ್​​​ನ ಸ್ಟಾರ್ ನಿರ್ದೇಶಕ.. ರೈಟರ್ ಆಗಿ ತೆಲುಗು ಚಿತ್ರರಂಗಕ್ಕೆ ಬಲಗಾಲಿಟ್ಟ ತ್ರಿವಿಕ್ರಮ್ ಅವರನ್ನ ಮಾಟಲ ಮಾಂತ್ರಿಕಡು ಅಂತ ಕರಿತ್ತಾರೆ.. ‘‘ಅಲ್ಲಾ ವೈಕುಂಠ ಪುರಂ ಲೋ’’ ಸಿನಿಮಾದ ಸೂಪರ್ ಸಕ್ಸಸ್​​ನಲ್ಲಿರುವ ನಿರ್ದೇಶಕ ತ್ರಿವಿಕ್ರಮ್ ಸದ್ಯ ಪವನ್ ಕಲ್ಯಾಣ್ ನಟನೆಯ ಹೊಸ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.. ಈ ಸಿನಿಮಾದ ನಂತರ ತ್ರಿವಿಕ್ರಮ್ ಯಾವ ಸಿನಿಮಾ ಮಾಡ್ತಿದ್ದಾರೆ ಅನ್ನೋ ಕ್ಯೂರಿಯಸ್​​​ ಪ್ರಶ್ನೆಗೆ ಮಾರ್ಬಲಸ್ ಉತ್ತರ ಸಿಕ್ಕಿದೆ.. 11 ವರ್ಷದ ನಂತರ ಮತ್ತೊಮ್ಮೆ ಮಹೇಶ್ ಬಾಬು ಜೊತೆ ಸಿನಿಮಾ ಮಾಡ್ತಿದ್ದಾರೆ ತ್ರಿವಿಕ್ರಮ್ ಶ್ರೀನಿವಾಸ್..

blank

2005ರಲ್ಲಿ ‘ಅಥಡು’ ಅನ್ನೋ ಹಿಟ್ ಸಿನಿಮಾವನ್ನ ತ್ರಿವಿಕ್ರಮ್0 ಮತ್ತು ಮಹೇಶ್ ಬಾಬು ಕ್ಲಾಸಿಕ್ ಕಾಂಬಿನೇಷನ್ ಮಾಡಿ ಗೆದ್ದಿತ್ತು.. ಈ ‘ಅಥಡು’ ಚಿತ್ರದ ಅಭಿನಯಕ್ಕೆ ಮಹೇಶ್ ಬಾಬು ಅವರಿಗೆ ಬೆಸ್ಟ್ ಆ್ಯಕ್ಟರ್ ಅನ್ನೋ ನಂದಿ ಅವಾರ್ಡ್ ಕೂಡ ದಕ್ಕಿತ್ತು.. ‘ಅಥಡು’ ಸಿನಿಮಾದ ನಂತರ 2010ರಲ್ಲಿ ‘ಖಲೇಜ’ ಸಿನಿಮಾವನ್ನ ಮಾಡಿದ್ದ ಮಹೇಶ್ ಬಾಬು – ತ್ರಿವಿಕ್ರಮ್ ಸಿನಿ ಕಾಂಬೋ ಮತ್ತೆ ಒಂದಾಗಿ ಸಿನಿಮಾ ಮಾಡೋ ನಿರ್ಧಾರ ಮಾಡಿದೆ.. ಈ ಚಿತ್ರಕ್ಕೆ ಸಂಜಯ್ ದತ್ ವಿಲನ್ ಆದ್ರೆ ನಮ್ಮ ಸಿನಿಮಾ ಪ್ಯಾನ್ ಇಂಡಿಯ ಲೆವಲ್​​ನಲ್ಲಿ ಸೌಂಡ್ ಮಾಡುತ್ತೆ ಅನ್ನೋದು ಚಿತ್ರತಂಡ ಲೆಕ್ಕಚಾರ..

Source: newsfirstlive.com Source link