ಇಡೀ ರಾಜ್ಯದ ಎಲ್ಲಾ ಜಿಲ್ಲೆಯಲ್ಲಿ ಗೋಶಾಲೆ ಮಾಡಬೇಕು..- ಪ್ರಭು ಚೌವ್ಹಾಣ್

ಇಡೀ ರಾಜ್ಯದ ಎಲ್ಲಾ ಜಿಲ್ಲೆಯಲ್ಲಿ ಗೋಶಾಲೆ ಮಾಡಬೇಕು..- ಪ್ರಭು ಚೌವ್ಹಾಣ್

ಬೀದರ್: ರಾಜ್ಯ ಸರ್ಕಾರದ ಸಂಪುಟದಲ್ಲಿ ಸಚಿವ ಪ್ರಭು ಚೌವ್ಹಾಣ್ ಅವರಿಗೆ ಪಶುಸಂಗೋಪನೆ ಖಾತೆ ಸಿಕ್ಕಿದೆ. ಈ ಹಿನ್ನೆಲೆ ಹೇಳಿಕೆ ನೀಡಿದ ಪ್ರಭು ಚೌವ್ಹಾಣ್.. ಇಡೀ ರಾಜ್ಯದ ಎಲ್ಲಾ ಜಿಲ್ಲೆಯಲ್ಲಿ ಗೋಶಾಲೆ ಮಾಡಬೇಕು.. ಗೋವು ರಕ್ಷಣೆ ಗೋ ಸೇವೆ ಮಾಡಲು ನನಗೆ ಅವಕಾಶ ಸಿಕ್ಕಿದೆ ಎಂದಿದ್ದಾರೆ.

ಕಳೆದ ಎರಡು ವರ್ಷಗಳ ಕಾಲ ಗುಜರಾತ್ ಸೇರಿದಂತೆ ವಿವಿಧ ರಾಜ್ಯಕ್ಕೆ ತೆರಳಿ ಗೋಹತ್ಯೆ ಕಾಯ್ದೆ ನಿಷೇಧ ಮಾಡಿದ್ದೇನೆ. ಹೀಗಾಗಿ ಪಶುಸಂಗೋಪನೆ ಇಲಾಖೆಯ ಬಗ್ಗೆ ನನಗೆ ಸಂಪೂರ್ಣ ಮಾಹಿತಿ ಇದೆ. ಹೀಗಾಗಿ ನಾನು ಪಶುಸಂಗೋಪನೆ ಖಾತೆ ಕೇಳಿದ್ದೇನೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಬಿಜೆಪಿ ಮುಖಂಡರು ಮತ್ತೆ ನನಗೆ ಪಶು ಸಂಗೋಪನೆ ಖಾತೆ ನೀಡಿದಕ್ಕೆ ಅಭಿನಂದನೆಗಳು. ಮತ್ತೆ ಖಾತೆ ಕೊಟ್ಟಿದ್ದಕ್ಕೆ ಖುಷಿಯಾಗಿದೆ. ನಾನು ಸಚಿವರಾಗಿದ್ದ ಸಂದರ್ಭದಲ್ಲಿ ಬಾಕಿ ಉಳಿದ ಕೆಲಸ ಮಾಡಲು ನನಗೊಂದು ಮತ್ತೆ ಅವಕಾಶ ಸಿಕ್ಕಿದೆ ಎಂದಿದ್ದಾರೆ.

Source: newsfirstlive.com Source link