ಚಿನ್ನ ಗೆದ್ದ ಬಡ ರೈತನ ಮಗ ನೀರಜ್ ಚೋಪ್ರಾ; ಸೇನೆಯಿಂದ ಟೋಕಿಯೋ ಒಲಿಂಪಿಕ್ಸ್​ವರೆಗಿನ ಪಯಣ

ಚಿನ್ನ ಗೆದ್ದ ಬಡ ರೈತನ ಮಗ ನೀರಜ್ ಚೋಪ್ರಾ; ಸೇನೆಯಿಂದ ಟೋಕಿಯೋ ಒಲಿಂಪಿಕ್ಸ್​ವರೆಗಿನ ಪಯಣ

ಟೊಕಿಯೋ ಒಲಿಂಪಿಕ್​ನಲ್ಲಿ ಜಾವೆಲಿನ್ ಥ್ರೋ ವಿಭಾಗದಲ್ಲಿ ಭಾರತೀಯ ನೀರಜ್ ಚೋಪ್ರಾ ಅವರು ಭಾರತಕ್ಕೆ ಚಿನ್ನದ ಪದಕವನ್ನ ತಂದುಕೊಟ್ಟಿದ್ದಾರೆ. ಇಂದು ನಡೆದ ಅಂತಿಮ ಫೈನಲ್ ಪಂದ್ಯದಲ್ಲಿ ನೀರಜ್ ಚೋಪ್ರಾ ಭಾರತದ ಮುಡಿಗೆ ಚಿನ್ನ ತಂದುಕೊಟ್ಟಿದ್ದಾರೆ.

ನೀರಜ್ ಚೋಪ್ರಾ ಚಿನ್ನದ ಪದಕ ಗೆದ್ದ ಬೆನ್ನಲ್ಲೇ ಇಡೀ ದೇಶದಲ್ಲಿ ಸಂಭ್ರಮದ ಮಳೆ ಸುರಿದಿದೆ. ಇನ್ನು ಅವರ ಊರದಲ್ಲಿ ಹರ್ಷೋದ್ಘಾರ ಮೊಳಗಿದೆ. ಹೌದು.. ನೀರಜ್ ಚೋಪ್ರಾ ಅವರು ಯಾವಾಗ ಫೈನಲ್ ಪ್ರವೇಶ ಮಾಡಿದ್ದರೋ ಆಗಲೇ, ಹರಿಯಾಣ ರಾಜ್ಯದ ಪಾಣಿಪತ್ ಜಿಲ್ಲೆಯ ಖಂದ್ರಾ ಗ್ರಾಮ, ಈ ಸುದಿನಕ್ಕಾಗಿ ಕಾದು ಕುಳಿತಿತ್ತು!

ಇನ್ನು ನೀರಜ್ ಚೋಪ್ರಾ ಅವರು ಯಾರು ಅಂತಾ ನೋಡೋದಾದ್ರೆ, ಇವರಿಗೆ ಕೇವಲ 23 ವರ್ಷ. ಪಾಣಿಪತ್ ಜಿಲ್ಲೆಯಲ್ಲಿ ಖಂದ್ರಾ ಗ್ರಾಮದಲ್ಲಿ 1997 ಡಿಸೆಂಬರ್ 24ರಂದು ಜನಿಸಿರುವ ಇವರು, ಜಾವೆಲಿನ್ ಎಸೆತ ಅಂದರೆ ಅವರಿಗೆ ತುಂಬಾ ಇಷ್ಟದ ಗೇಮ್ ಆಗಿತ್ತು. ಬಾಲ್ಯದಿಂದಲೂ ಸ್ಪೋರ್ಟ್​​ನಲ್ಲಿ ಮುಂದಿದ್ದ ಇವರು ಚಂಡಿಗಡದಲ್ಲಿರುವ ದಯಾನಂದ ಆಂಗ್ಲೋ ವೇದಿಕ್ ಕಾಲೇಜಿನಲ್ಲಿ ವಿದ್ಯಾಭಾಸ ಮಾಡಿ 2016 ರಲ್ಲಿ ಸೇನೆಗೆ ಸೇರಿಕೊಂಡಿದ್ದಾರೆ. ಇನ್ನು ಇವರ ತಂದೆಯ ಹೆಸರು ಸತೀಶ್ ಕುಮಾರ್ ಹಾಗೂ ತಾಯಿ ಹೆಸರು ಸರೋಜಾ ಬಾಳ. ವೃತ್ತಿಯಲ್ಲಿ ಕೃಷಿಕರಾಗಿರುವ ಈ ಕುಟುಂಬ ಕಡು ಬಡತನದಲ್ಲಿದೆ.

blank
ಬಾಲ್ಯದಲ್ಲಿ ನೀರಜ್ ಚೋಪ್ರಾ

ಜಾವೆಲಿನ್​ನಲ್ಲಿ ನೀರಜ್ ಸಾಧನೆ..!
2016 ರಲ್ಲಿ ದಕ್ಷಿಣ ಏಷ್ಯನ್ ಕ್ರೀಡಾಕೂಟದಲ್ಲಿ ನೀರಜ್ ಚೋಪ್ರಾ ಅವರು 82.23 ಮೀಟರ್ ಎಸೆಯುವ ಮೂಲಕ ಚಿನ್ನದ ಪದಕವನ್ನ ತಂದುಕೊಟ್ಟರು. ಹಾಗೇ ಪೋಲೆಂಡ್​ನಲ್ಲಿ ನಡೆದ 2016 ಐಎಎಎಫ್ (International Association of Athletics Federations) ಚಾಂಪಿಯನ್​ಶಿಪ್​ನಲ್ಲಿ ಚಿನ್ನದ ಪದಕವನ್ನ ಗೆದ್ದ ಹೆಗ್ಗಳಿಕೆ ಇವರಿಗೆ ಇದೆ.

2012ರ ಏಷ್ಯನ್ ಅಥ್ಲೆಟಿಕ್ ಚಾಂಪಿಯನ್ ಶಿಪ್​​ನಲ್ಲಿ ನೀರಜ್ ಚೋಪ್ರಾ 85.23 ಮೀಟರ್ ಜಾವೆಲಿನ್ ಎಸೆದು ಸ್ವರ್ಣ ಪದಕವನ್ನ ಪಡೆದರು. ಹಾಗೇ 2018ರ ಕಾಮನ್ ವೆಲ್ತ್​ ಕ್ರೀಡಾಕೂಟದಲ್ಲಿ 86.42 ಮೀಟ್ ಜಾವೆಲಿನ್ ಎಸೆದು ತಮ್ಮ ಹೆಸರಲ್ಲಿ ಹೊಸ ದಾಖಲೆಯನ್ನ ಬರೆದರು. ಈ ಮೂಲಕ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಬಂಗಾರದ ಪದಕ ಗೆದ್ದ ಮೊದಲಿಗರಾದ ಕೀರ್ತಿ ನೀರಜ್ ಪಾಟೀಲ್​ಗೆ ಇದೆ.

2018 ರಲ್ಲಿ ಮೇ ತಿಂಗಳಿನಲ್ಲಿ ನಡೆದ ದೋಹ ಡೈಮಂಡ್​ ಲೀಗ್​ನಲ್ಲಿ 87.43 ಮೀಟರ್ ದೂರ ಜಾವೆಲಿನ್ ಎಸೆಯೋದ್ರೊಂದಿಗೆ ಹಳೆಯ ರಾಷ್ಟ್ರೀಯ ದಾಖಲೆಗಳನ್ನ ಮುರಿದರು. 2018 ರಂದು ಆಗಸ್ಟ್ 27ರಂದು ನಡೆದ ಏಷ್ಯನ್ ಕ್ರೀಡಾಕೂಟದಲ್ಲಿ ನೀರಜ್ 88.06 ಮೀಟರ್ ದೂರ ಎಸೆಯುವ ಮೂಲಕ ಚಿನ್ನದ ಪದಕವನ್ನ ಗೆದ್ದಿದ್ದಾರೆ.

Source: newsfirstlive.com Source link