ಪಶುಸಂಗೋಪನೆ ಖಾತೆ ಸಿಕ್ಕಿದ್ದು ನನಗೆ ನೂರಕ್ಕೆ ನೂರು ತೃಪ್ತಿ: ಪ್ರಭು ಚವ್ಹಾಣ್

ಬೀದರ್: ಗೋ ಮಾತಾ ಮೇರಾ ಮಾತಾ, ಪಶುಸಂಗೋಪನಾ ಖಾತೆ ಸಿಕ್ಕಿದ್ದು ನನಗೆ ನೂರಕ್ಕೆ ನೂರು ತೃಪ್ತಿ ಎಂದು ಖಾತೆ ಹಂಚಿಕೆ ಬಗ್ಗೆ ಬೀದರ್‍ನಲ್ಲಿ ಪ್ರಭು ಚವ್ಹಾಣ್ ಪ್ರತಿಕ್ರಿಯೆ ನೀಡಿದ್ದಾರೆ.

ಬೀದರ್ ನಲ್ಲಿ ಪಬ್ಲಿಕ್ ಟಿವಿಗೆ ಜೊತೆಗೆ ಮಾತನಾಡಿದ ಅವರು, ಪಶು ಸಂಗೋಪನೆ ಇಲಾಖೆಗಾಗಿ ನಾನು ಸಿಎಂ ಬಸವರಾಜ್ ಬೊಮ್ಮಾಯಿಗೆ ಮನವಿ ಮಾಡಿದ್ದೆ. ಎರಡು ವರ್ಷ ಪಶುಸಂಗೋಪನೆ ಇಲಾಖೆಯಲ್ಲಿ ಕೆಲಸ ಮಾಡಿದ್ದು, ಎಲ್ಲಾ ಕೆಲಸಗಳು ಅರ್ಧಕ್ಕೆ ನಿಂತ್ತಿವೆ ಹೀಗಾಗಿ ಪೂರ್ಣ ಕೆಲಸಗಳು ಆಗಬೇಕಿದೆ ಎಂದಿದ್ದಾರೆ. ಇದನ್ನೂ ಓದಿ: ಹಿಂದಿನ ಶಿಕ್ಷಣ ಸಚಿವರ ಕಾರ್ಯಗಳನ್ನು ಫಾಲೋ ಅಪ್ ಮಾಡುವೆ: ಬಿಸಿ ನಾಗೇಶ್

ಖಾತೆ ಬಗ್ಗೆ ಯಾರಿಗೆ ಅಸಮಾಧಾನ ಇದೆ ಅವರಿಗೆ ಹೈಕಮಾಂಡ್ ಸರಿ ಪಡಿಸುತ್ತೆ, ಇದು ಸಿಎಂರ ಪರಮಾಧಿಕಾರವಾಗಿದ್ದು, ಕೊವೀಡ್ ಮೂರನೇ ಅಲೆ ತಡೆಗೆ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದೆವೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

Source: publictv.in Source link