ನೀರಜ್​ ಚೋಪ್ರಾಗೊಂದು ಸೆಲ್ಯೂಟ್​​; ಚಿನ್ನ ಗೆದ್ದ ಸೈನಿಕನಿಗೆ ಗಣ್ಯರಿಂದ ಶುಭಾಶಯಗಳ ಸುರಿಮಳೆ

ನೀರಜ್​ ಚೋಪ್ರಾಗೊಂದು ಸೆಲ್ಯೂಟ್​​; ಚಿನ್ನ ಗೆದ್ದ ಸೈನಿಕನಿಗೆ ಗಣ್ಯರಿಂದ ಶುಭಾಶಯಗಳ ಸುರಿಮಳೆ

ನವದೆಹಲಿ: ಟೋಕಿಯೋ ಒಲಿಂಪಿಕ್ಸ್​ನಲ್ಲಿ ಜಾವೆಲಿನ ಥ್ರೋ ಫೈನಲ್​ನಲ್ಲಿ ಭಾರತೀಯ ಆಟಗಾರ ನೀರಜ್ ಚೋಪ್ರಾ ಚೊಚ್ಚಲ ಚಿನ್ನ ಗೆದ್ದಿದ್ದಾರೆ. ಐದನೇ ಸುತ್ತಿನವರೆಗೂ ಟಾಪ್​ ಲಿಸ್ಟ್​ನಲ್ಲೇ ಉಳಿದ ನೀರಜ್ ಚೋಪ್ರಾ ಭಾರತಕ್ಕೆ ಚಿನ್ನ ಹೊತ್ತು ತರುವ ಮೂಲಕ ಭೇಷ್ ಎನ್ನಿಸಿಕೊಂಡಿದ್ದಾರೆ.  ನೀರಜ್ ಚೋಪ್ರಾ ಅವರ ಈ ಸಾಧನೆಗೆ ದೇಶದ ಗಣ್ಯಾತಿಗಣ್ಯರು ಶುಭ ಹಾರೈಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿ.. ನೀರಜ್​ ಚೋಪ್ರಾ ಅವರು ಹೊಸ ಇತಿಹಾಸ ನಿರ್ಮಿಸಿದ್ದಾರೆ. ನೀರಜ್ ಚೋಪ್ರಾ ಸಾಧನೆ ಶಾಶ್ವತವಾಗಿ ನೆನಪಿನಲ್ಲಿರುತ್ತದೆ. ಉತ್ಸಾಹ ಮತ್ತು ಹುಮ್ಮಸ್ಸಿನಿಂದ ನೀರಜ್​ ಚಿನ್ನ ಗೆದ್ದಿದ್ದಾರೆ.. ಚಿನ್ನ ಗೆದ್ದ ನೀರಜ್​ ಚೋಪ್ರಾ ಅವರಿಗೆ ಶುಭಾಶಯಗಳು ಎಂದಿದ್ದಾರೆ.

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಟ್ವೀಟ್ ಮಾಡಿ.. ನೀರಜ್ ಚೋಪ್ರಾ ಅವರದ್ದು ಅಘೋಷಿತ ಗೆಲುವು.. ಅವರು ಚಿನ್ನ ಗೆಲ್ಲುವ ಮೂಲಕ ಎಲ್ಲ ಅಡೆತಡೆಗಳನ್ನ ದಾಟಿ ಹೊಸ ಇತಿಹಾಸ ಬರೆದಿದ್ದಾರೆ ಎಂದು ಹೇಳಿದ್ದಾರೆ.

 

 

Source: newsfirstlive.com Source link