ಸೇನೆಗೆ ಸೇರುವಾಗ ಸಾಮಾನ್ಯ ಹುಡುಗ; ಇಂದು ಇಡೀ ವಿಶ್ವವನ್ನೇ ಗೆದ್ದ ನೀರಜ್​​ ಚೋಪ್ರಾ

ಸೇನೆಗೆ ಸೇರುವಾಗ ಸಾಮಾನ್ಯ ಹುಡುಗ; ಇಂದು ಇಡೀ ವಿಶ್ವವನ್ನೇ ಗೆದ್ದ ನೀರಜ್​​ ಚೋಪ್ರಾ

ಟೋಕಿಯೋ ಒಲಿಂಪಿಕ್ಸ್ ಜಾವೆಲಿನ್ ಥ್ರೋ ವಿಭಾಗದಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಭಾರತದ ಹೆಮ್ಮೆಯ ಅಥ್ಲೀಟ್ ನೀರಜ್ ಚೋಪ್ರಾ ಇತಿಹಾಸ ನಿರ್ಮಿಸಿದ್ದಾರೆ. ಬರೋಬ್ಬರಿ ನೂರು ವರ್ಷಗಳ ಬಳಿಕ ಭಾರತೀಯ ಟ್ರ್ಯಾಕ್‌ ಹಾಗೂ ಫೀಲ್ಡ್‌ ವಿಭಾಗದಲ್ಲಿ ಚಿನ್ನದ ಪದಕ ಗೆದ್ದ ಭಾರತದ ಮೊದಲ ಅಥ್ಲೀಟ್ ಎಂಬ ಹಿರಿಮೆಗೆ ನೀರಜ್ ಚೋಪ್ರಾ ಪಾತ್ರರಾಗಿದ್ದಾರೆ.

ನೀರಜ್​​ ಚೋಪ್ರಾ ಸಾಮಾನ್ಯ ಬಡ ಕುಟುಂಬದಲ್ಲಿ ಜನಿಸಿದವರು. ಹರಿಯಾಣದ ಪಾಣಿಪತ್ ಜಿಲ್ಲೆಯ ಖಂದ್ರಾ ಗ್ರಾಮದಲ್ಲಿ 1997 ಡಿಸೆಂಬರ್ 24ರಂದು ಜನಿಸಿದ ಇವರಿಗೆ ಕೇವಲ 23 ವರ್ಷ. ತಂದೆ ವೃತ್ತಿಯಲ್ಲಿ ಕೃಷಿಕರು, ಜಾವೆಲಿನ್ ಎಸೆತ ಎಂದರೆ ತುಂಬಾ ಇಷ್ಟದ ಗೇಮ್​ ಆಗಿದ್ದ ನೀರಜ್​​ ಬೆನ್ನಿಗೆ ನಿಂತಿದ್ದು ತಂದೆ ಸತೀಶ್​​​​ ಕುಮಾರ್​​ ಮತ್ತು ತಾಯಿ ಸರೋಜಾ ಬಾಳ.

ಬಾಲ್ಯದಿಂದಲೂ ಕಡು ಬಡವರ ಕುಟುಂಬದಲ್ಲೇ ಬೆಳೆದ ನೀರಜ್​​ ಮೊದಲಿನಿಂದಲೂ ಸ್ಪೋರ್ಟ್​ನಲ್ಲಿ ಮುಂದು. ಯಾವ ಮಟ್ಟಕ್ಕೆಂದರೆ ಚಂಡಿಗಡದ ದಯಾನಂದ ಆಂಗ್ಲೋ ವೇದಿಕ್ ಕಾಲೇಜಿನಲ್ಲಿ ಓದು ಮುಗಿಸಿದ ಕೂಡಲೇ ಸ್ಪೋರ್ಟ್ಸ್​​ ಕೋಟಾದಡಿ ಇವರಿಗೆ ಸೇನೆಯಲ್ಲಿ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿತ್ತು.

ಇದನ್ನೂ ಓದಿ: ಚಿನ್ನ ಗೆದ್ದ ಬಡ ರೈತನ ಮಗ ನೀರಜ್ ಚೋಪ್ರಾ; ಸೇನೆಯಿಂದ ಟೋಕಿಯೋ ಒಲಿಂಪಿಕ್ಸ್​ವರೆಗಿನ ಪಯಣ

2016ರಲ್ಲಿ ಭಾರತೀಯ ಸೇನೆ ಸೇರಿದ ನೀರಜ್​​ ಇಂದು ಇಂಡಿಯನ್​​ ಆರ್ಮಿ ಸುಬೇದಾರ್​​ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸೇನೆ ಸೇರಿದ ಮೇಲೂ ಛಲ ಬಿಡದ ತ್ರಿವಿಕ್ರಮನಂತೆ ಜಾವೆಲಿನ್​​​ ಥ್ರೋ ವಿಭಾಗದಲ್ಲಿ ಸಾಧನೆ ಮಾಡುತ್ತಾ ಬಂದರು. ಅಂದು ಸೇನೆ ಸೇರುವಾಗ ಸಾಮಾನ್ಯ ಹುಡುಗನಾಗಿದ್ದ ನೀರಜ್​​, ಇಂದು ಇಡೀ ವಿಶ್ವವನ್ನೇ ಗೆದ್ದ ಭಾರತದ ಹೆಮ್ಮೆಯ ಪುತ್ರ.

Source: newsfirstlive.com Source link