ಸ್ಥೂಲಕಾಯದಿಂದ ಬಳಲುತ್ತಿದ್ದ ನೀರಜ್ ಚೋಪ್ರಾ; ಫಿಟ್ ಅಂಡ್ ವಿನ್ನರ್ ಆಗಿದ್ದೇ ರೋಚಕ

ಸ್ಥೂಲಕಾಯದಿಂದ ಬಳಲುತ್ತಿದ್ದ ನೀರಜ್ ಚೋಪ್ರಾ; ಫಿಟ್ ಅಂಡ್ ವಿನ್ನರ್ ಆಗಿದ್ದೇ ರೋಚಕ

ನವದೆಹಲಿ: ಟೋಕಿಯೋ ಒಲಿಂಪಿಕ್ಸ್​ನಲ್ಲಿ ಜಾವೆಲಿನ್ ಥ್ರೋ ಕ್ರೀಡೆಯಲ್ಲಿ ನೀರಜ್ ಚೋಪ್ರಾ ಚಿನ್ನದ ಪದಕ ಗೆಲ್ಲುವ ಮೂಲಕ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಆದ್ರೆ ಹಿಂದೊಮ್ಮೆ ನೀರಜ್ ಚೋಪ್ರಾ ಸ್ಥೂಲಕಾಯದಿಂದ ಬಳಲುತ್ತಿದ್ದರು ಅಂದ್ರೆ ನೀವು ನಂಬಲೇಬೇಕು.

ನೀರಜ್ ಚೋಪ್ರಾ ಚಿಕ್ಕ ವಯಸ್ಸಿನಲ್ಲಿ ತುಂಬಾ ದಪ್ಪಗಿದ್ರು. ಅವರನ್ನ ಯಾವುದಾದ್ರೂ ಕ್ರೀಡೆಗೆ ಸೇರಿಸಬೇಕು ಅಂತ ಅವರ ಪೋಷಕರು ಯೋಚಿಸಿದ್ದರಂತೆ. ಇತ್ತ ಶಾಲೆಯಲ್ಲಿ ನೀರಜ್ ಚೋಪ್ರಾ ಅವರ ಟೀಚರ್ ಸಹ ಇದೇ ಸಲಹೆಯನ್ನ ನೀಡಿದ್ದರಂತೆ. ಅಲ್ಲದೇ ಜಾವೆಲಿನ್ ಥ್ರೋ ಕಲಿಯುವಂತೆ ಸೂಚನೆ ನೀಡಿದ್ದರಂತೆ.

ಹೀಗೆ ಜಾವೆಲಿನ್ ಥ್ರೋ ಪ್ರಾಕ್ಟೀಸ್ ಆರಂಭಿಸಿದ ನಂತರ ನೀರಜ್ ಚೋಪ್ರಾರ ದೇಹದ ಆಕಾರದಲ್ಲಿ ಸುಧಾರಣೆಯಾಗಿತ್ತಂತೆ. ಅಲ್ಲದೇ ಆರ್ಮಿ ಸೇರಿದ ಬಳಿಕ ಮತ್ತಷ್ಟು ಫಿಟ್ ಆಗಿದ್ದರು. ಇಂಥ ನೀರಜ್ ಚೋಪ್ರಾ ಇದೀಗ ಚಿನ್ನದ ಪದಕವನ್ನ ತಮ್ಮದಾಗಿಸಿಕೊಂಡಿದ್ದಾರೆ.

Source: newsfirstlive.com Source link