ಚಿನ್ನ ಗೆದ್ದ ‘ಭಾರತದ ನೀರಜ್​​ ಚೋಪ್ರಾ ನನಗೆ ಪ್ರೇರಣೆ.. ಕ್ಷಮಿಸು ಪಾಕಿಸ್ತಾನ’ ಎಂದ ಪಾಕ್​​ ಕ್ರೀಡಾಪಟು

ಚಿನ್ನ ಗೆದ್ದ ‘ಭಾರತದ ನೀರಜ್​​ ಚೋಪ್ರಾ ನನಗೆ ಪ್ರೇರಣೆ.. ಕ್ಷಮಿಸು ಪಾಕಿಸ್ತಾನ’ ಎಂದ ಪಾಕ್​​ ಕ್ರೀಡಾಪಟು

ಟೋಕಿಯೋ ಒಲಿಂಪಿಕ್ಸ್​ನಲ್ಲಿ ಜಾವಲಿನ್ ಥ್ರೋ ವಿಭಾಗದಲ್ಲಿ ಭಾರತದ ಹೆಮ್ಮೆಯ ಪುತ್ರ ನೀರಾಜ್​​ ಚೋಪ್ರಾ ಚಿನ್ನ ಗೆದ್ದ ಕಾರಣ ಇಂದು ದೇಶದ ಪಾಲಿಗೆ ಸಂಭ್ರಮದ ಕ್ಷಣ. ಒಲಿಂಪಿಕ್ಸ್​ ಅಥ್ಲೆಟಿಕ್ಸ್​ನಲ್ಲಿ ಮೊಟ್ಟಮೊದಲ ಬಾರಿಗೆ ಭಾರತಕ್ಕೆ ಸ್ವರ್ಣ ಪದಕ ತಂದು ಕೊಟ್ಟ ಕೀರ್ತಿ ನೀರಜ್​ಗೆ ಸಲ್ಲುತ್ತೆ. ಹಾಗಾಗಿ ಇಡೀ ದೇಶಾದ್ಯಂತ ನೀರಜ್​​ಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.

ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್​​​ ಶಾ ಸೇರಿದಂತೆ ಎಲ್ಲಾ ಕ್ಷೇತ್ರದ ಗಣ್ಯರು ಚಿನ್ನದ ಹುಡುಗ ನೀರಜ್​​ಗೆ ಅಭಿನಂದನೆಗಳು ತಿಳಿಸಿದ್ದಾರೆ. ಈಗ ನೀರಜ್​ ಎದುರಾಳಿ ಪಾಕಿಸ್ತಾನದ ಜಾವಲಿನ್​​ ಥ್ರೋ ಅಥ್ಲೀಟ್​​​ ಅರ್ಷದ್ ನದೀಮ್ ಕೂಡ ಟ್ವೀಟ್​​ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ.

ಇದನ್ನೂ ಓದಿ: ಸೇನೆಗೆ ಸೇರುವಾಗ ಸಾಮಾನ್ಯ ಹುಡುಗ; ಇಂದು ಇಡೀ ವಿಶ್ವವನ್ನೇ ಗೆದ್ದ ನೀರಜ್​​ ಚೋಪ್ರಾ

ಜಾವಲಿನ್​​​ ಥ್ರೋ ವಿಭಾಗದಲ್ಲಿ ಚಿನ್ನ ಗೆದ್ದ ಭಾರತದ ನೀರಜ್​​ ಚೋಪ್ರಾ ನನಗೆ ಪ್ರೇರಣೆ. ಇವರ ಸಾಧನೆ ಅವಿಸ್ಮರಣೀಯ. ಚಿನ್ನ ಗೆದ್ದ ನೀರಜ್​ ಅವರಿಗೆ ಅಭಿನಂದನೆಗಳು. ಕ್ಷಮಿಸು ಪಾಕಿಸ್ತಾನ, ನಿಮಗಾಗಿ ನಾನು ಪದಕ ಗೆಲ್ಲಲು ಸಾಧ್ಯವಾಗಲಿಲ್ಲ ಎಂದು ಭಾವನಾತ್ಮಕವಾಗಿ ಟ್ವೀಟ್​​ ಮಾಡಿದ್ದಾರೆ ಅರ್ಷದ್​​​.

Source: newsfirstlive.com Source link